Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇದನ್ನು ಟ್ರೈ ಮಾಡಿದರೆ ಹೇಳುವಿರಿ 'ಚಿಕನ್ ಮಂಚೂರಿಯನ್ ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ'
ಚಿಕನ್ ಮಂಚೂರಿಯನ್ ಕಷ್ಟದ ರೆಸಿಪಿ ಅಂತ ನೀವಂದುಕೊಂಡಿದ್ದರೆ ಖಂಡಿತ ಅಲ್ಲ, ಚಿಕನ್ ಮಂಚೂರಿಯನ್ ಅನ್ನು ತುಂಬಾ ಸುಲಭದಲ್ಲಿ ಮಾಡಬಹುದು, ನನನಗೆ ಅಡುಗೆ ಅಷ್ಟೇನು ಬರಲ್ಲ ಎಂದು ಹೇಳುವವರು ಕೂಡ ಧೈರ್ಯವಾಗಿ ಈ ರೆಸಿಪಿ ಟ್ರೈ ಮಾಡಬಹುದು, ಅಷ್ಟೊಂದು ಸರಳವಾಗಿದೆ ಈ ರೆಸಿಪಿ. ಬನ್ನಿ ಚಿಕನ್ ಮಂಚೂರಿಯನ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮಂಚೂರಿಯನ್ ಕಬಾಬ್ ಮಾಡಲು
ಒಂದು ಕೆಜಿ ಚಿಕನ್(ಸ್ಕಿನ್ಲೆಸ್ ವಿಥ್ ಬೋನ್)
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಶುಂಠಿ ಪೇಸ್ಟ್ 1 ಚಮಚ
ಖಾರದ ಪುಡಿ ಒಂದೂವರೆ ಚಮಚ
ಗರಂ ಮಸಾಲ 1/2 ಚಮಚ
ಕಾರ್ನ್ ಫ್ಲೋರ್ 3 ಚಮಚ
ಉಪ್ಪು 1 ಚಮಚ
ಮೊಟ್ಟೆ 2
ಕೆಂಪು ಬಣ್ಣ ಬೇಕೆಂದರೆ ಸ್ವಲ್ಪ ಕಾಶ್ಮೀರಿ ಚಿಲ್ಲಿ ಪೌಡರ್ ಸೇರಿಸಬಹುದು
ಎಣ್ಣೆ 1 ಕಪ್
ಮಂಚೂರಿಯನ್ಗೆ
2-3 ಕ್ಯಾಪ್ಸಿಕಂ ( ಆಕರ್ಷಕವಾಗಿ ಕಾಣಲು ಹಳದಿ, ಕೆಂಪು, ಹಸಿರು ಅಂತ ಬಣ್ಣ
ಬಣ್ಣದ ಕ್ಯಾಪ್ಸಿಕಂ ಬೇಕಿದ್ದರೆ ಬಳಸಬಹುದು)
ಈರುಳ್ಳಿ 3 ( ದೊಡ್ಡ-ದೊಡ್ಡ ಹೋಳಾಗಿ ಕತ್ತರಿಸಿ)
ಹಸಿ ಮೆಣಸು 3-4 (ಖಾರ ಪ್ರಿಯರಾಗಿದ್ದರೆ ಇನ್ನೆರಡು ಕೂಡ ಸೇರಿಸಬಹುದು)
ಕಾರ್ನ್ ಫ್ಲೋರ್ 1 ಚಮಚ
ಶುಂಠಿ 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು)
ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು 1 ಚಮಚ
ಸೋಯಾ ಸಾಸ್ 2 ಚಮಚ
ಟೊಮೆಟೊ ಸಾಸ್ 3 ಚಮಚ
ಚಿಲ್ಲಿ ಪೇಸ್ಟ್ 2 ಚಮಚ
ಮಂಚೂರಿಯನ್ಗೆ ಕಬಾಬ್ ರೆಡಿ ಮಾಡಿ
ನೀವು ಚಿಕನ್ ತೊಳೆದು ಅದರ ನೀರಿನಂಶ ಹೋಗಲು ನೀರು ಸೋರಿ ಹೋಗುವಂತ
ಪಾತ್ರೆಯಲ್ಲಿ ಹಾಕಿಡಿ
ಬಳಿಕ ಅದಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಖಾರದಪುಡಿ,
ಕಾಶ್ಮೀರಿ ಚಿಲ್ಲಿ, ಜೋಳದ ಹಿಟ್ಟು, ಉಪ್ಪು, ಮೊಟ್ಟೆ ಎಲ್ಲಾ ಹಾಕಿ ಮಿಕ್ಸ್ ಮಾಡಿ
2 ಗಂಟೆ ಇಡಿ, ಫ್ರಿಡ್ಜ್ನಲ್ಲಿಟ್ಟರೆ ಇನ್ನೂ ಒಳ್ಳೆಯದು. ಅಷ್ಟು ಸಮಯವಿಲ್ಲ
ಎಂದಾದರೆ ಅರ್ಧ ಗಂಟೆ ಇಡಿ. ಹೆಚ್ಚು ಸಮಯ ಇಟ್ಟರೆ ಮಸಾಲೆ ಚೆನ್ನಾಗಿ
ಹೀರಿಕೊಳ್ಳುತ್ತದೆ, ರುಚಿ ಸೂಪರ್ ಆಗಿರುತ್ತದೆ.
ಈಗ ಒಂದು ಕಪ್ ಎಣ್ಣೆ ಬಾಣಲೆಗೆ ಹಾಕಿ ಕುದಿಸಿ
ಎಣ್ಣೆ ಕುದಿ ಬಂದಾಗ ಅದರಲ್ಲಿ ಚಿಕನ್ ಪೀಸ್ ಹಾಕಿ ಫ್ರೈ ಮಾಡಿ, ಕಬಾಬ್ನಂತೆಯೇ
ಚೆನ್ನಾಗಿ ಬೇಯಲಿ, ಇದನ್ನು ಹಾಗೆ ಬೇಕಾದರೆ ತಿನ್ನಬಹುದು.
ಕಬಾಬ್ ರೆಡಿಯಾದ ಮೇಲೆ ನೀವು ಮಂಚೂರಿಯನ್ ಮಾಡಲು ರೆಡಿ ಮಾಡಿಕೊಳ್ಳಿ.
ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ
ಫ್ರೈ ಮಾಡಿ. ಹಸಿ ಮೆಣಸು ಹಾಕಿ ಮತ್ತೆ ಒಂದು ನಿಮಿಷ ಫ್ರೈ ಮಾಡಿ
ಈರುಳ್ಳಿ-ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ, ಆದರೆ ತುಂಬಾ ಬೇಯಿಸಬೇಡಿ
ಈಗ ಬೌಲ್ಗೆ 1 ಚಮಚ ಕಾರ್ನ್ಫ್ಲೋರ್ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ, ಆ
ನೀರನ್ನು ಕ್ಯಾಪ್ಸಿಕಂ ಮಿಶ್ರಣಕ್ಕೆ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಈಗ
ಟೊಮೆಟೊ ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್ ಸೇರಿಸಿ, ನಂತರ ಫ್ರೈ ಮಾಡಿಟ್ಟ
ಕಬಾಬ್ ಹಾಕಿ ಮಿಕ್ಸ್ ಮಾಡಿದರೆ ಚಿಲ್ಲಿ ಚಿಕನ್ ರೆಡಿ.
ಅಲಂಕಾರಕ್ಕೆ
ನೀವು ಮಂಚೂರಿಯನ್ಗೆ ಎಣ್ಣೆ ಹಾಕುವಾಗ ಸ್ವಲ್ಪ ಸ್ಪ್ರಿಂಗ್ ಆನಿಯನ್ ಅಥವಾ
ಕರಿಬೇವು ಹಾಕಿ, ಇದು ಮಂಚೂರಿಯನ್ ಸ್ವಾದ ಹೆಚ್ಚಿಸುತ್ತದೆ.



Click it and Unblock the Notifications
