Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೀಕೆಂಡ್ ಸ್ಪೆಷಲ್: ಚಿಕನ್ ಬಿರಿಯಾನಿ ರೆಸಿಪಿ
ಈ ವೀಕೆಂಡ್ ಹೋಟೆಲ್ ಅಡುಗೆ ಬೇಡ, ಮನೆಯಲ್ಲಿಯೇ ಏನಾದರೂ ಸ್ಪೆಷಲ್ ಅಡುಗೆ ಮಾಡಿ ತಿನ್ನುವ ಎಂದು ನೀವು ಬಯಸುವುದಾದರೆ ಇಲ್ಲಿದೆ ನೋಡಿ ನಿಮಗೆ ಪರ್ಫೆಕ್ಟ್ ರೆಸಿಪಿ.

ಇಲ್ಲಿ ನಾವು ಚಿಕನ್ ಬಿರಿಯಾನಿ ರೆಸಿಪಿ ನೀಡಿದ್ದೇವೆ. ಚಿಕನ್ ಬಿರಿಯಾನಿಯನ್ನು ನೂರಕ್ಕೂ ಹೆಚ್ಚು ವಿಧದಲ್ಲಿ ಮಾಡಬಹುದು, ಆದರೆ ಇಲ್ಲಿ ನೀಡಿರುವ ಚಿಕನ್ ಬಿರಿಯಾನಿ ಮಾಡಲು ಸುಲಭವಾಗಿದ್ದು ನೀವು ಸುಲಭದಲ್ಲಿ ತಯಾರಿಸಬಹುದು, ಇನ್ನು ರುಚಿಯಂತೂ ಸೂಪರ್ ಆಗಿರುತ್ತದೆ, ಇನ್ನೇಕೆ ತಡ ಟ್ರೈ ಮಾಡಿ, ಹೇಗೆ ಬಂತು ಅಂತ ನಮಗೆ ತಿಳಿಸಿ.
Recipe By: Reena TK
Recipe Type: Biryani
Serves: 4
-
ಬೇಕಾಗುವ ಸಾಮಗ್ರಿ
ಚಿಕನ್ ಅರ್ಧ ಕೆಜಿ
ಚಕ್ಕೆ 1
ಲವಂಗ 3
ಟೊಮೆಟೊ 2
2 ಗೋಡಂಬಿ, 2 ಬಾದಾಮಿ
ಈರುಳ್ಳಿ 1
ಖಾರದ ಪುಡಿ 11/2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಗರಂ ಮಸಾಲ 1/2 ಚಮಚ
ಅರಿಶಿಣ ಪುಡಿ 1/4 ಚಮಚ
ಬಿರಿಯಾನಿ ಮಸಾಲೆ 1 ಚಮಚ
ಪಲಾವ್ ಎಲೆ 1
ಗಟ್ಟಿ ಮೊಸರು 1/4 ಕಪ್
ರುಚಿಗೆ ತಕ್ಕ ಉಪ್ಪು
ಬಾಸುಮತಿ ಅಕ್ಕಿ 1ಕಪ್
-
ಮಾಡುವ ವಿಧಾನ:
* ಈರುಳ್ಳಿ, ಟೊಮೆಟೊ, ಗೋಡಂಬಿ, ಬಾದಾಮಿ ಪೇಸ್ಟ್ ಮಾಡಿ ಇಡಿ.
* ಬಾಸುಮತಿ ಅಕ್ಕಿಯನ್ನು ತೊಳೆದು 10 ನಿಮಿಷ ಇಡಿ, ನಂತರ ಬೇಯಲು ತಕ್ಕ ನೀರು ಹಾಕಿ 1 ವಿಶಲ್ ಬರುವವರೆಗೆ ಬೇಯಿಸಿ,
*ಹಾಗೇ ಪಾತ್ರೆಯಲ್ಲಿ ಬೇಯಿಸುವುದಾರೆ ಅನ್ನ ಬೇಯಲು 5 ನಿಮಿಷ ಇರುವಾಗ ಬಸಿಯಿರಿ.
* ದಪ್ಪ ತಳವಿರುವ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಎಣ್ಣೆ ಬಿಸಿಯಾದಾಗ ಪಲಾವ್ ಎಲೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ, ಈರುಳ್ಳಿ , ಗೋಡಂಬಿ, ಬಾದಾಮಿ, ಪೇಸ್ಟ್ ಹಾಕಿ ತುಪ್ಪ ಮೇಲ್ಭಾಗದಲ್ಲಿ ತೇಲುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ, ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ಸ್ವಲ್ಪ ಬಿರಿಯಾನಿ ಮಸಾಲ ಹಾಕಿ ಚಿಕನ್ ಹಾಕಿ , ರುಚಿಗೆ ತಕ್ಕ ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಚಿಕನ್ ಮುಕ್ಕಾಲು ಭಾಗ ಬೆಂದಾಗ ಮೊಸರು ಹಾಕಿ, ಪಾತ್ರೆಯ ಬಾಯಿ ತೆರೆದು ಬೇಯಿಸಿ, ಚಿಕನ್ ಸೆಮಿ ಡ್ರೈ ರೀತಿಯಾದಾಗ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ, ಈಗ ಅದೇ ಪಾತ್ರೆಗೆ ಮುಕ್ಕಾಲು ಭಾಗ ಬೆಂದ ಅನ್ನ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ನಂತರ ಮಿಕ್ಸ್ ಮಾಡಿದರೆ ರುಚಿಕರವಾದ ಚಿಕನ್ ಬಿರಿಯಾನಿ ರೆಡಿ.
- ಈ ಚಿಕನ್ ಬಿರಿಯಾನಿಗೆ ದಪ್ಪ ತಳವಿರುವ ಪಾತ್ರೆ ಬಳಸಿ ಮಾಡಿ, ಇಲ್ಲದಿದ್ದರೆ ತಳ ಹಿಡಿಯುವುದು. ಎಣ್ಣೆ ಬದಲಿಗೆ ತುಪ್ಪ ಬಳಸುವುದರಿಂದ ಬಿರಿಯಾನಿ ಸ್ವಾದ ಹೆಚ್ಚುವುದು.
- ಸರ್ವ್ - 2
- ಕ್ಯಾಲೋರಿ - 1040
- ಕೊಬ್ಬು - 68ಗ್ರಾಂ
- ಪ್ರೊಟೀನ್ - 137ಗ್ರಾಂ
- ಕಾರ್ಬೋ - 232 ಗ್ರಾಂ



Click it and Unblock the Notifications
