Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಉಪ್ಪಿಟ್ಟುಇಷ್ಟನೇ ಇಲ್ಲ ಅನ್ನುವವರು ಕೂಡ ಇಷ್ಟಪಟ್ಟು ತಿಂತಾರೆ ಈ ಬನ್ಸ್ರವೆ ಅವರೆಕಾಳು ಉಪ್ಪಿಟ್ಟು
Recipes
oi-Mohan
Posted By: Mohan
ಅವರೆಕಾಳಿನ ರವೆ ಉಪ್ಪಿಟ್ಟು ತುಂಬಾನೇ ರುಚಿಯಾಗಿರುತ್ತದೆ. ಇದಕ್ಕೆ ನೀವು ಸಂಪೂರ್ಣ ಅವರೆಕಾಳು ಅಥವಾ ಹಿತಕಿದ ಅವರೆ ಬೇಳೆ ಸೇರಿಸಬಹುದು. ಅವರೆಕಾಳಿನ ಈ ಸೀಸನ್ನಲ್ಲಿ ಮಿಸ್ ಮಾಡದೆ ಮಾಡಲೇಬೇಕಾಸದ ರೆಸಿಪಿ ಇದಾಗಿದೆ. ಕೆಲವರಿಗೆ ಉಪ್ಪಿಟ್ಟು ಅಂದರೆ ಆಗಲ್ಲ ಅಂಥವರು ಕೂಡ ತುಂಬಾ ಇಷ್ಟಪಟ್ಟು ತಿನ್ನುವ ಉಪ್ಪಿಟ್ಟು ಇದಾಗಿದೆ, ಉಪ್ಪಿಟ್ಟು ತುಂಬಾ ಟೇಸ್ಟಿಯಾಗಿರಬೇಕೆಂದರೆ ಈ ಟಿಪ್ಸ್ ಅನುಸರಿಸಿ:

ಅವರೆಕಾಳಿನ ಬನ್ಸ್ ರವೆ ಉಪ್ಪಿಟ್ಟು: ಉಪ್ಪಿಟ್ಟು ಇಷ್ಟನೇ ಇಲ್ಲದವರು ಕೂಡ ಇಷ್ಟಪಟ್ಟು ತಿನ್ನುವಿರಿ
ಬೇಕಾಗುವ ಸಾಮಗ್ರಿ
ಅವರೆಕಾಳು ಅರ್ಧ ಕಪ್
ಈರುಳ್ಳಿ
ಹಸಿ ಮೆಣಸು
1-3
ಬನ್ಸ್ ರವೆ 1/2 ಕಪ್
ಆಲೂಗಡ್ಡೆ 1
ಸ್ವಲ್ಪ ಬೀನ್ಸ್
ಟೊಮೆಟೊ 1
ಕ್ಯಾರೆಟ್1
ಸ್ವಲ್ಪ ಕೊತ್ತಂಬರಿ ಸೊಪ್ಪು
ಚಟಿಕೆಯಷ್ಟು ಅರಿಶಿಣಪುಡಿ
1 ಚಮಚ ಎಣ್ಣೆ
1 ಚಮಚ ತುಪ್ಪ
1/2 ಚಮಚ ಉದ್ದಿನ ಬೇಳೆ
1 ಚಮಚ ಕಡ್ಲೆಬೇಳೆ
ಮಾಡುವ ವಿಧಾನ
- ನೀವು 1/2 ಚಮಚ ತುಪ್ಪ ಹಾಕಿ ಅದರಲ್ಲಿ ಬನ್ಸ್ ರವೆ ಸ್ವಲ್ಪ ರೋಸ್ಟ್ ಮಾಡಿಡಿ
- ನೀವುತರಕಾರಿಗಳನ್ನು ಕತ್ತರಿಸಿಡಿ
- ಈಗ ಪಾತ್ರೆ ಬಿಸಿ ಮಾಡಿ ಇದರಲ್ಲಿ ತುಪ್ಪ ಮತ್ತು ಎಣ್ಣೆ ಹಾಕಿ
- ಎಣ್ಣೆ ಬಿಸಿಯಾದಾಗ ಉದ್ದಿನ ಬೇಳೆ, ಕಡ್ಲೆಬೇಳೆ ಹಾಕಿ, ಹಸಿ ಮೆಣಸು ಹಾಕಿ
- ಈರುಳ್ಳಿ ಹಾಕಿ, ಕರಿಬೇವು ಹಾಕಿ
- ತರಕಾರಿ, ಅವರೆಕಾಳು, ಸ್ವಲ್ಪ ಅರಿಶಿಣ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ
- ನಂತರ ಒಂದೂವರೆ ಕಪ್ ನೀರು ಹಾಕಿ ತರಕಾರಿ ಬೇಯುವವರೆಗೆ ಬೇಯಿಸಿ, ನಂತರ ಬನ್ಸ್ ರವೆ ಹಾಕಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪು ಉದುರಿಸಿದರೆ ಅವರೆಕಾಳಿನ ಉಪ್ಪಿಟ್ಟು ರೆಡಿ.
ಇತರ ಸಲಹೆ
- ನುಚ್ಚು ಗೋಧಿಯ ಉಪ್ಪಿಟ್ಟು ಅಥವಾ ನವೆಣೆ ಉಪ್ಪಿಟ್ಟು ಮಾಡುವಾಗ ಕೂಡ ನೀವು ಇದೇ ವಿಧಾನ ಬಳಸಿ ಮಾಡಿದರೆ ಸೂಪರ್ ಆದ ಉಪ್ಪಿಟ್ಟು ರೆಡಿಯಾಗಿರುತ್ತದೆ.
- ಇದನಕ್ಕೆ ಬೇಕಿದ್ದರೆ ಸ್ವಲ್ಪ ತೆಂಗಿನ ತುರಿ ನೀರು ಕುದಿ ಬರುವಾಗ ಸೇರಿಸಿ ನಂತರ ರವೆ ಹಾಕಿದರೆ ಇನ್ನೂ ಟೇಸ್ಟ್ ಆಗಿರುತ್ತದೆ.
- ಈ ರವೆ ಉಪ್ಪಿಟ್ಟು ಮಾಡುವಾಗ ನೀರಿನ ಅಳತೆ ತುಂಬಾನೇ ಮುಖ್ಯ, ನೀರು ಕಡಿಮೆಯಾಗಲೂ ಬಾರದು, ನೀರು ಹೆಚ್ಚಾಗಲು ಬಾರದು, ಆದ್ದರಿಂದ ನೀವು ಎಷ್ಟು ರವೆ ತೆಗೆದುಕೊಳ್ಳುತ್ತೀರೋ ಅದರ ಡಬಲ್ ಅಂದರೆ ಅರ್ಧ ಕಪ್ ರವೆಯಾದರೆ 1 ಕಪ್ ನೀರು ತೆಗೆದುಕೊಳ್ಳಬೇಕು, ಅದೇ ಇಷ್ಟೆಲ್ಲಾ ತರಕಾರಿ ಸೇರಿಸುವಾಗ ಅದು ಬೇಯಲು ನೀರು ಬೇಕು, ಹಾಗಾಗಿ ಇನ್ನೂ ಅರ್ಧ ಕಪ್ ನೀರು ಹೆಚ್ಚು ಸೇರಿಸಲಾಗಿದೆ.
- ನೀವು ತುಪ್ಪದ ಬದಲಿಗೆ ತೆಂಗಿನೆಣ್ಣೆ ಮಾತ್ರ ಬಳಸಿ ಕೂಡ ಮಾಡಬಹುದು, ನಿಮಗೆ ಯಾವ ರುಚಿ ಇಷ್ಟವಾಗುವುದೋ ಅದರಂತೆ ಮಾಡಿ, ಆದರೆ ರವೆ ರೋಸ್ಟ್ ಮಾಡುವಾಗ ಸ್ವಲ್ಪ ತುಪ್ಪ ಸೇರಿಸಲು ಮರೆಯಬೇಡಿ, ಟೇಸ್ಟ್ ಸೂಪರ್ ಆಗಿರುತ್ತದೆ.
Comments
[ of 5 - Users]



Click it and Unblock the Notifications
