Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Easy Breakfast: ಸುಲಭವಾಗಿ ಬ್ರೇಕ್‌ಫಾಸ್ಟ್‌ಗೆ ಮಾಡಿ ನುಗ್ಗೆ ರೈಸ್ ಬಾತ್-ಇಲ್ಲಿದೆ ವಿಧಾನ
Easy Breakfast: ಬೆಳಗ್ಗೆ ನೀವು ತಿಂಡಿಗೆ ಆರೋಗ್ಯಕರವಾಗಿ ಹಾಗೆ ರುಚಿ ರುಚಿಯಾಗಿ ಯಾವುದಾದರು ತಿಂಡಿ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ನೀವು ಖಂಡಿತವಾಗಿ ಈ ನುಗ್ಗೆ ಸೊಪ್ಪಿನಿಂದ ಮಾಡುವಂತಹ ರೈಸ್ ಮಾಡಿ ಸವಿಯಲು ಮುಂದಾಗುವುದು ಖಚಿತ. ಅದರಲ್ಲೂ ನಿಮಗೆ ಈ ನುಗ್ಗೆ ಸೊಪ್ಪಿನಿಂದ ಎಷ್ಟೆಲ್ಲಾ ಲಾಭಗಳಿವೆ ಅನ್ನೋದು ತಿಳಿದಿರಬಹುದು.
ಈ ನುಗ್ಗೆ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು ನಿಮಗೆ ಬಹಳ ಉತ್ತಮ. ಅದ್ರಲ್ಲೂ ಕಬ್ಬಿಣ, ಸತುವಿನಂತ ಅಂಶವು ಇದರಲ್ಲಿ ಹೇರಳವಾಗಿದೆ. ನುಗ್ಗೆಯ ಎಲೆಗಳಲ್ಲಿ ರೈಬೋಫ್ಲೇವಿನ್ ಎಂಬ ಪೋಷಕಾಂಶವಿದ್ದು ಇದು ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಹಾಗೆ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ಹಾಗೆ ಈ ನುಗ್ಗೆ ಸೊಪ್ಪಿನಿಂದ ಹಲವು ಖಾದ್ಯಗಳನ್ನು ಸವಿದು ನೋಡಬಹುದು. ಹಾಗೆ ಇಂದು ಈ ನುಗ್ಗೆ ಸೊಪ್ಪಿನಿಂದ ಮಾಡುವಂತಹ ರುಚಿ ರುಚಿಯ ಸ್ಪೆಷಲ್ ರೈಸ್ ಬಾತ್ ಕುರಿತಾಗಿ ತಿಳಿದುಕೊಳ್ಳೋಣ. ಈ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಈ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೆಂತ್ಯ ಸೊಪ್ಪು
- ಹಸಿ ಬಟಾಣಿ
- ಈರುಳ್ಳಿ
- ಅಕ್ಕಿ
- ಎಣ್ಣೆ
- ಹಸಿಮೆಣಸಿನಕಾಯಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಮೊಸರು
- ಹರಿಶಿಣ ಪುಡಿ
- ನಿಂಬೆಹಣ್ಣಿನ ರಸ
- ಚಕ್ಕೆ
- ಲವಂಗ
- ಚಕ್ರ ಮೊಗ್ಗು
- ಏಲಕ್ಕಿ
- ಸೋಂಪು ಕಾಳು
- ಉಪ್ಪು ರುಚಿಗೆ ತಕ್ಕಷ್ಟು
ನುಗ್ಗೆ ಸೊಪ್ಪಿನ ಈ ರೈಸ್ ಬಾತ್ ಮಾಡುವ ವಿಧಾನವೇನು?
ಮೊದಲು 2 ಕಪ್ ಅಕ್ಕಿಯನ್ನು ತೆಗೆದುಕೊಂಡು ತೊಳೆದು ನೆನೆಸಿಡಬೇಕು. ಈಗ ಒಂದು ಕುಕ್ಕರ್ ಅಥವಾ ಪಾತ್ರೆಯನ್ನು ತೆಗೆದುಕೊಳ್ಳಿ. ಕುಕ್ಕರ್ ಬಿಸಿಯಾದ ಬಳಿಕ ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿ. ನಂತರ ಇದಕ್ಕೆ ಚಕ್ಕೆ, ಏಲಕ್ಕಿ, ಲವಂಗ, ಚಕ್ರಮೊಗ್ಗು, ಸೋಂಪುಕಾಳು ಹಾಕಿಕೊಳ್ಳಿ. ಹಾಗೆ ನಂತರ ಸಿಗಿದುಕೊಂಡಿರುವ ಹಸಿ ಮೆಣಸು ಹಾಕಿ ಫ್ರೈ ಮಾಡಿ.
ಇದಕ್ಕೆ ಹೆಚ್ಚಿದ ಈರುಳ್ಳಿ ಹಾಗೆ ಒಂದು ಕಟ್ ಮೆಂತ್ಯ ಸೊಪ್ಪು ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಹಾಕಿ ಮಿಕ್ಸ್ ಮಾಡಿ ಅಳತೆ ಕಪ್‌ನಲ್ಲಿ 3 ಕಪ್ ನೀರು ಹಾಕಿಕೊಳ್ಳಿ. 2 ಕಪ್ ಅಕ್ಕಿಗೆ 3 ಕಪ್ ನೀರು ಅಳತೆಯಾಗಿ ತೆಗೆದುಕೊಳ್ಳಬೇಕು. ಈಗ ಹಸಿ ಬಟಾಣಿ ಕೂಡ ಇದಕ್ಕೆ ಹಾಕಿ, ನೆನೆಸಿಟ್ಟ ಅಕ್ಕಿಯನ್ನು ಇದಕ್ಕೆ ಆಕಿಕೊಂಡು 2 ಸ್ಪೂನ್ ಮೊಸರು, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಕುಕ್ಕರ್ ಮುಚ್ಚಳವನ್ನು ಮುಚ್ಚಿ 2 ಸೀಟಿ ಹೊಡೆಯಲು ಬಿಡಬೇಕು. 2 ಸೀಟಿ ಹೊಡೆದ ಬಳಿಕ ಕುಕ್ಕರ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಕುಕ್ಕರ್ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಮೆಂತ್ಯ ಸೊಪ್ಪಿನ ರೈಸ್ ಬಾತ್ ರೆಡಿಯಾಗುತ್ತದೆ. ನೀವು ಸಹ ಬೆಳಗ್ಗೆ ತಿಂಡಿಗೆ ಮಧ್ಯಾಹ್ನದ ಬಾಕ್ಸ್‌ಗೂ ಇದನ್ನು ಮಾಡಿ ಸವಿದು ನೋಡಿ.
(ಅಕ್ಕಿ ನೆನೆಸದೆ ಮಾಡುವುದಾದರೆ ಅಳತೆಯ ಕಪ್‌ನಲ್ಲಿ ದುಪ್ಪಟ್ಟು ನೀರು ಬಳಸಿ, ಅಕ್ಕಿ ನೆನೆಸಿದರೆ ಕಪ್ ನೀರು ಕಡಿಮೆ ಹಾಕಿಕೊಳ್ಳಬೇಕಾಗುತ್ತದೆ)



Click it and Unblock the Notifications
