Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೋಟೆಲ್‌ಗೇ ಹೋಗಬೇಕಿಲ್ಲ! ಮನೆಯಲ್ಲೇ ಸಿಂಪಲ್ ಆಗಿ ಮಾಡಿ 'ಮೊಸರು ವಡೆ'
ಮೊಸರು ವಡೆ ಬಹಳ ಜನಪ್ರಿಯ ಖಾದ್ಯ. ಬೆಳಗ್ಗಿನ ಉಪಾಹಾರಕ್ಕಾಗಿ ನೆಚ್ಚಿನ ಅಡುಗೆ. ಬಹುತೇಕ ಜನರು ಹಗುರ ಮತ್ತು ನಯವಾದ ಮೊಸರು ವಡೆ (Mosaru Vade) ಇಷ್ಟಪಡುತ್ತಾರೆ. ಈ ವಡೆಯನ್ನು ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದು. ಆದರೆ, ಮನೆಯಲ್ಲಿ ಮಾಡಿದರೆ ರುಚಿ ಇರಲ್ಲ. ಹೋಟೆಲ್‌ನಲ್ಲಿ ಸವಿಯುವಾಗ ಮೊಸರು ವಡೆ ತುಂಬಾ ರುಚಿಯಾಗಿರುತ್ತದೆ ಎಂದು ಕೆಲವರು ದೂರುತ್ತಾರೆ. ಅಂತಹವರು, ನಾವು ತಿಳಿಸುವ ಕೆಲವು ಟಿಪ್ಸ್ ಪಾಲಿಸಿ, ಮೊಸರು ವಡೆ (Dahi Vada) ತಯಾರಿಸಿಬಹುದು. ಇದು ಹೋಟೆಲ್ ಶೈಲಿಯ ರುಚಿಗಿಂತ ಹತ್ತು ಪಟ್ಟು ಹೆಚ್ಚಿರುತ್ತದೆ.
ಮುಖ್ಯವಾಗಿ ಇದು ಹಬ್ಬಗಳಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ ಎಲ್ಲರ ಮನೆಯಲ್ಲಿ ಮೊಸರು ವಡೆ ಕಾಣಸಿಗುತ್ತದೆ. ನೀವು ಮನೆಯಲ್ಲಿಯೇ ಮೊಸರು ವಡೆ ಮಾಡಲು ಬಯಸಿದರೆ, ಖಂಡಿತವಾಗಿಯೂ ಈ ಸುಲಭವಾದ ವಿಧಾನವನ್ನು ಅನುಸರಿಸಿ. ಹಗುರ ಮತ್ತು ಮೃದುವಾದ ಮೊಸರು (curd) ವಡೆಯನ್ನು ತಿಂದ ಬಳಿಕ, ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ಬನ್ನಿ, ಬಾಯಲ್ಲಿ ನೀರೂರಿಸುವ ದಹಿ ವಡಾ ಅಥವಾ ಮೊಸರು ವಡೆ (Dahi Vada Recipe) ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಮೊಸರು ಅಥವಾ ದಹಿ ವಡಾ ತಯಾರಿಸಲು ಬೇಕಾಗುವ ಪದಾರ್ಥಗಳು
* ಉದ್ದಿನ ಬೇಳೆ
* ಮೊಸರು
* ಅಡುಗೆ ಎಣ್ಣೆ
* ಹಸಿ ಮೆಣಸಿನಕಾಯಿಗಳು
* ಸಾಸಿವೆ, ಜೀರಿಗೆ
* ಶುಂಠಿ
* ಜೀರಿಗೆ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* ಕೆಂಪು ಮೆಣಸಿನ ಪುಡಿ
* ಕಪ್ಪು ಉಪ್ಪು
* ಹುಣಸೆಹಣ್ಣು ಚಟ್ನಿ
* ಹಸಿರು ಚಟ್ನಿ
* ಕೊತ್ತಂಬರಿ ಸೊಪ್ಪು
* ಕರಿಬೇವಿನ ಎಲೆ
ಮೊಸರು ವಡೆ ಮಾಡುವ ವಿಧಾನ
ಮೊಸರು ವಡೆ ಮಾಡಲು, ಮೊದಲು 1 ಕಪ್ ಉದ್ದಿನ ಬೇಳೆ ತೆಗೆದುಕೊಂಡು, ಅದನ್ನು ಚೆನ್ನಾಗಿ ತೊಳೆಯಿರಿ. ಈಗ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿ, ಕೆಲವು ಗಂಟೆಗಳ ಕಾಲ ( 2 ರಿಂದ 3 ಗಂಟೆ) ಪಕ್ಕದಲ್ಲಿ ಇಡಿ. ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಈ ಬೇಳೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ಬೇಳೆ ದಪ್ಪವಾಗಿರುವಂತೆ ನೋಡಿಕೊಳ್ಳಿ. ಈಗ ಮೂರು ಹಸಿ ಮೆಣಸಿನಕಾಯಿ ಮತ್ತು ಒಂದು ಚಮಚ ಶುಂಠಿ ಪೇಸ್ಟ್ ಮತ್ತು 1 ಚಮಚ ಹುರಿದ ಜೀರಿಗೆ ಪುಡಿ,ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಹೀಗೆ ಮಾಡಿದಾಗ ವಡೆ ಮೃದುವಾಗುತ್ತವೆ.
ಈಗ ಗ್ಯಾಸ್ ಒಲೆಯ ಮೇಲೆ ಬಾಣಲೆ ಇಟ್ಟು ಅಡುಗೆ ಎಣ್ಣೆ ಹಾಕಿ. ಎಣ್ಣೆ ಚೆನ್ನಾಗಿ ಕಾಯಿಸಿ. ಬಳಿಕ ವಡೆಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ. ನಂತರ ಅವುಗಳನ್ನು ಎರಡೂ ಬದಿಗಳಲ್ಲಿ ಗೋಲ್ಡ್ ಬಣ್ಣ ಬರುವವರೆಗೆ ಬೇಯಿಸಿ. ವಡೆಗಳು ಗರಿಗರಿಯಾದಾಗ, ಅವುಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಬಿಸಿಯಾಗಿರುವಾಗಲೇ ಮೊಸರು ಇರುವ ಪಾತ್ರೆಯಲ್ಲಿ ಹಾಕಿ, ಸ್ವಲ್ಪ ಕಾಲ ಬಿಡಿ.
ಇದಾದ ಬಳಿಕ, ಮೊಸರು ಮತ್ತು ನೆನೆಸಿದ ವಡೆಗಳನ್ನು ತೆಗೆದುಕೊಂಡು ಅವುಗಳನ್ನು ನಿಮ್ಮ ಕೈಯಿಂದ ನಿದಾನವಾಗಿ ಒತ್ತುವ ಮೂಲಕ ನೀರನ್ನು ಹಿಂಡಿ ತೆಗೆಯಿರಿ. ಈಗ ವಡೆಯ ಮೇಲೆ ಮೊಸರನ್ನು ಸುರಿಯಿರಿ. ಎಲ್ಲಾ ವಡೆಗಳನ್ನು ಮೊಸರಿನಲ್ಲಿ ಹಾಕಿದ ಬಳಿಕ, ಅದರ ಮೇಲೆ ಹಸಿರು ಚಟ್ನಿ ಮತ್ತು ಹುಣಸೆ ಚಟ್ನಿಯನ್ನು ಹಾಕಿ. ಇದರೊಂದಿಗೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಬಹದು. ಇಷ್ಟು ಮಾಡಿದರೆ, ರುಚಿ ರುಚಿಯಾದ ಮೊಸರು ವಡೆ ಸವಿಯಲು ಸಿದ್ಧವಾಗುತ್ತದೆ. ಇದು ಬೆಳಗ್ಗಿನ ಉಪಾಹಾರಕ್ಕೆ ಉತ್ತಮವಾದ ಖಾದ್ಯ. ಅತಿಥಿಗಳು ಬಂದಾಗ ಅಥವಾ ಹಬ್ಬಗಳ ಸಂದರ್ಭದಲ್ಲಿಯೂ ಮಾಡಬಹುದು.



Click it and Unblock the Notifications
