Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಧಂರೂಟ್ ಹಲ್ವಾ ರೆಸಿಪಿ
ಕರ್ನಾಟಕ ಶೈಲಿಯ ವಿಶಿಷ್ಟ ಸಿಹಿ ಪಾಕವಿಧಾನದಲ್ಲಿ ಧಂ ರೂಟ್/ಬೂದಗುಂಬಳಕಾಯಿ ಹಲ್ವಾಅಥವಾ ಕಾಶಿ ಹಲ್ವಾ ಎಂದು ಕರೆಯುವ ಸಿಹಿತಿಂಡಿ ಬಹಳವೇ ಪ್ರಖ್ಯಾತ ಎನ್ನಬಹುದು. ಬಹುತೇಕ ಮದುವೆ ಮನೆಯ ಸಿಹಿ ಖಾದ್ಯದಲ್ಲಿ ಇದು ಇದ್ದೇ ಇರುತ್ತದೆ, ಇನ್ನು ಹಬ್ಬ ಹರಿದಿನಗಳಲ್ಲು ಮನೆಗಳಲ್ಲಿ ತಯಾರಿಸುವ ಎಲ್ಲರ ನೆಚ್ಚಿನ ಸಿಹಿ ಖಾದ್ಯ ಇದಾಗಿದೆ.

ಹೆಚ್ಚೇನೂ ಸಾಮಾಗ್ರಿಗಳಿಲ್ಲದೆ, ಬಹಳ ಸುಲಭವಾಗಿ ಮತ್ತು ಬೇಗೆ ತಯಾರಿಸಬಹುದಾದ ಸಿಹಿ ಖಾದ್ಯ ಧಂ ರೂಟ್. ಇನ್ನೇನು ನವರಾತ್ರಿ ಹಬ್ಬ ಆರಂಭವಾಗುತ್ತಿದೆ. ಮನೆಯಲ್ಲಿ ಗೊಂಬೆ ಇಡುವವರು ದಿನಕ್ಕೊಂದು ಸಿಹಿ ಖಾದ್ಯ ತಯಾರಿಸಬೇಕು. ಇದಕ್ಕೆ ಹೇಳಿ ಮಾಡಿಸಿದ ತಿಂಡಿ ಧಂ ರೂಟ್.
ಬನ್ನಿ ಬಾಯಿ ಚಪ್ಪರಿಸುವ ಧಂ ರೂಟ್ ತಯಾರಿಸುವ ವಿಧಾನ ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ:
Recipe By: Kavya
Recipe Type: Sweet
Serves: 4
-
ಬೇಕಾಗುವ ಸಾಮಾಗ್ರಿಗಳು
1. ಬೂದಗುಂಬಳಕಾಯಿ - ½ ಕೆಜಿ
2. ಡ್ರೈ ಫ್ರೂಟ್ಸ್ (ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ಪಿಸ್ತಾ) - ತಲಾ 8-10
3. ತುಪ್ಪ - 1/4 ಕಪ್
4. ಸಕ್ಕರೆ - 1 ಕಪ್
5. ಏಲಕ್ಕಿ ಪುಡಿ - ½ ಟೀಸ್ಪೂನ್
-
ತಯಾರಿಸುವ ವಿಧಾನ
1. ಬೂದಗುಂಬಳಕಾಯಿಯ ಬೀಜ ಹಾಗೂ ಸಿಪ್ಪೆಗಳನ್ನು ತೆಗೆದುಹಾಕಿ ಮಧ್ಯಮ ಗಾತ್ರದ ಹೋಳುಗಳಾಗಿ ಕತ್ತರಿಸಿ.
2. ಬೂದಗುಂಬಳಕಾಯಿಯ ತುಂಡುಗಳನ್ನು ತುರಿದುಕೊಳ್ಳಿ.
3. ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ.
4. ಡ್ರೈ ಫ್ರೂಟ್ಸ್ಗಳನ್ನು ತುಪ್ಪದಲ್ಲಿ ಹುರಿಯಿರಿ.
5. ಡ್ರೈ ಫ್ರೂಟ್ಸ್ಗಳನ್ನು ತೆಗೆದು ಅದೇ ಪ್ಯಾನ್ಗೆ ತುರಿದ ಬೂದಗುಂಬಳಕಾಯಿ ಸೇರಿಸಿ ಚಿನ್ನದ ಬಣ್ಣಕ್ಕೆ ಬರುವವರೆಗೆ ತುಪ್ಪದಲ್ಲಿ ಬೇಯಿಸಿ.
6. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಪಾಕವು ದಪ್ಪಗಾದಾಗ ಮತ್ತೆ ತುಪ್ಪ ಸೇರಿಸಿ.
7. ಇದನ್ನು 3-4 ನಿಮಿಷ ಬೇಯಿಸಿ ಮತ್ತು ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಸೇರಿಸಿ.
8. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಬಟ್ಟಲಿಗೆ ಹಾಕಿ ಗೋಡಂಬಿ ಸೇರಿಸಿ ಅದನ್ನು ಅಲಂಕರಿಸಿ ಬಿಸಿ ಬಿಸಿ ಹಲ್ವಾ ಸವಿಯಲು ಸಿದ್ಧ.
- 1. ಬೂದಗುಂಬಳಕಾಯನ್ನು ತುರಿಯುವಾಗ ಸಿಗುವ ರಸವನ್ನು ಎಸೆಯಬೇಡಿ, ಖಾದ್ಯದ ರುಚಿ ಹೆಚ್ಚಿಸಲು ಬೂದಗುಂಬಳಕಾಯಿ ಹುರಿಯುವಾಗ ರಸವನ್ನು ಸೇರಿಸಿ. 2. ಸಿದ್ಧ ಹಲ್ವಾವನ್ನು ಬಿಸಿಬಿಸಿ ಯಾಗಿ ಸಹ ಸೇವಿಸಬಹುದು, ಬದಲಾಗಿ ಫ್ರಿಡ್ಜ್ನಲ್ಲಿಟ್ಟು ತಣ್ಣಗಿನ ಹಲ್ವಾ ಸಹ ಅದರ ರುಚಿಯನ್ನು ಹೆಚ್ಚಿಸುತ್ತದೆ.
- 1 ಕಪ್ - (150 ಗ್ರಾಂ)
- ಕ್ಯಾಲೋರಿಗಳು - - 216
- ಫೈಬರ್ - - 3.4 ಗ್ರಾಂ
- ಕಾರ್ಬೋಹೈಡ್ರೇಟ್ಗಳು - - 38 ಗ್ರಾಂ
- ಪ್ರೋಟೀನ್ - - 1.2 ಗ್ರಾಂ
ತಯಾರಿಸುವ ಹಂತ ಹಂತದ ವಿಧಾನ
1. ಬೂದಗುಂಬಳಕಾಯಿಯ ಬೀಜ
ಹಾಗೂ ಸಿಪ್ಪೆಗಳನ್ನು ತೆಗೆದುಹಾಕಿ ಮಧ್ಯಮ ಗಾತ್ರದ ಹೋಳುಗಳಾಗಿ ಕತ್ತರಿಸಿ.

2. ಬೂದಗುಂಬಳಕಾಯಿಯ ತುಂಡುಗಳನ್ನು ತುರಿದುಕೊಳ್ಳಿ.

3. ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ.

4. ಡ್ರೈ ಫ್ರೂಟ್ಸ್ಗಳನ್ನು ತುಪ್ಪದಲ್ಲಿ ಹುರಿಯಿರಿ.

5. ಡ್ರೈ ಫ್ರೂಟ್ಸ್ಗಳನ್ನು ತೆಗೆದು ಅದೇ ಪ್ಯಾನ್ಗೆ ತುರಿದ ಬೂದಗುಂಬಳಕಾಯಿ ಸೇರಿಸಿ ಚಿನ್ನದ ಬಣ್ಣಕ್ಕೆ ಬರುವವರೆಗೆ ತುಪ್ಪದಲ್ಲಿ ಬೇಯಿಸಿ.

6. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಪಾಕವು ದಪ್ಪಗಾದಾಗ ಮತ್ತೆ ತುಪ್ಪ ಸೇರಿಸಿ.

7. ಇದನ್ನು 3-4 ನಿಮಿಷ ಬೇಯಿಸಿ ಮತ್ತು ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಸೇರಿಸಿ.

8. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಬಟ್ಟಲಿಗೆ ಹಾಕಿ ಗೋಡಂಬಿ ಸೇರಿಸಿ ಅದನ್ನು ಅಲಂಕರಿಸಿ ಬಿಸಿ ಬಿಸಿ ಹಲ್ವಾ ಸವಿಯಲು ಸಿದ್ಧ.

Click it and Unblock the Notifications