Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಕಾಲಿಕ ಮಳೆಯಿಂದ ಕಾಡುವ ನೆಗಡಿ, ಕೆಮ್ಮಿಗೆ ಒಣ ಶುಂಠಿ ಕಷಾಯ
ಕೆಲವು ಕಡೆ ರಣ ಬಿಸಿಲು, ಇನ್ನು ಕೆಲವು ಕಡೆ ಮಳೆ ಬಂದು ಇಳೆ ತಂಪಾಗಿದೆ. ಮಳೆಯೇನೋ ಬಂದು ತಂಪು ಅನಿಸಿದೆ, ಆದರೆ ಅಕಾಲಿಕ ಮಳೆಯಿಂದ ಕೆಲವರಿಗೆ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಶುರುವಾಗಿದೆ. ಈ ರೀತಿ ಸಾಮಾನ್ಯ ಶೀತ- ಕೆಮ್ಮಿಗೆ ಒಂದು ಕಷಾಯ ಕುಡಿದರೆ ಸಾಕು, ಶೀತ-ಕೆಮ್ಮು ಬಂದ ದಾರಿಗೆ ಸುಂಕವಿಲ್ಲದಂತೆ ಮರಳುತ್ತದೆ, ಅದರಲ್ಲೂ ಈ ಒಣ ಶುಂಠಿ ಇದೆಯೆಲ್ಲಾ ಇಂಥ ಸಮಸ್ಯೆಗೆ ರಾಮಬಾಣವಿದ್ದಂತೆ, ಬನ್ನಿ ಈ ಕಷಾಯದ ರೆಸಿಪಿ ತಿಳಿಯೋಣ:

Recipe By: Reena TK
Recipe Type: Home Remedies
Serves: 1
-
ಬೇಕಾಗುವ ಸಾಮಗ್ರಿ
ಒಣ ಶುಂಠಿ 1/4 ಚಮಚ
ಕಾಳು ಮೆಣಸು 1/4 ಚಮಚ
ಜೀರಿಗೆ 1/4 ಚಮಚ
ಲವಂಗ 1
ಏಲಕ್ಕಿ 1
ಬೆಲ್ಲ 2 ಚಮಚ
5 ತುಳಸಿ ಎಲೆ
ಅಮೃತ್ತ ಬಳ್ಳಿ ಚಿಕ್ಕ ತುಂಡು (Optional)
ನೀರು ಒಂದು ಕಪ್
-
ಮಾಡುವ ವಿಧಾನ
* ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಕುದಿಸಿ.
* ಒಂದು ಕಪ್ ನೀರು ಚೆನ್ನಾಗಿ ಕುದಿ ಬಂದು ಅರ್ಧ ಕಪ್ಗೆ ಬರುವಷ್ಟು ಹೊತ್ತು ಕುದಿಸಿ.
* ಬೇಕಿದ್ದರೆ ಸ್ವಲ್ಪ ಅರಿಶಿಣ ಕೂಡ ಸೇರಿಸಬಹುದು, ಇದು ಗಂಟಲು ಕೆರೆತ ಕಡಿಮೆ ಮಾಡುವುದು.
* ನಂತರ ಉರಿಯಿಂದ ಇಳಿಸಿ ಕುಡಿಯುವ ಬಿಸಿ ಇರುವಾಗ ಈ ಕಷಾಯ ಹೀರಿ.
* ಈ ಕಷಾಯ ದಿನದಲ್ಲಿ ಎರಡು ಲೋಟ ಕುಡಿದರೆ ಸಾಕು ಕೆಮ್ಮು, ಶೀತ ಕಡಿಮೆಯಾಗುವುದು.
- ಒಣ ಶುಂಠಿ ಇಲ್ಲದಿದ್ದರೆ ಹಸಿ ಶುಂಠಿ ಬಳಸಬಹುದು



Click it and Unblock the Notifications
