Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಡ್ರೈಫ್ರೂಟ್ ಪಾಯಸ ರೆಸಿಪಿ
ಸಿಹಿ ಪ್ರಿಯರಿಗೆ ಯಾವುದೇ ಸಿಹಿ ಖಾದ್ಯ ಆದರೂ ಇಷ್ಟಪಟ್ಟು ಸವಿಯುತ್ತಾರೆ, ಅದರಲ್ಲೂ ದಿಢೀರ್ ಸಿದ್ಧವಾಗುವ ಪಾಯಸ ತಮ್ಮ ನೆಚ್ಚಿನ ಸಿಹಿ ಖಾದ್ಯ ಎನ್ನುವವರು ಸಾಕಷ್ಟು ಮಂದಿ ಇದ್ದಾರೆ. ಸಾಮಾನ್ಯವಾಗಿ ಶೇವಿಗೆ, ಸಬ್ಬಕ್ಕಿ, ಬೇಳೆ ಪಾಯಸಗಳನ್ನು ಮಾಡಲಾಗುತ್ತದೆ. ಆದರೆ ಡ್ರೈ ಫ್ರೂಟ್ಸ್ ಬಳಸಿ ತಯಾರಿಸುವ ಪಾಯಸ ಆರೋಗ್ಯಕ್ಕೂ ಸಹಕಾರಿ, ರುಚಿಗೂ ಸೈ.
ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಪ್ರೋಟೀನ್ ಮತ್ತು ಜೀವಸತ್ವಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮತ್ತೆ, ಇವು ಉತ್ತಮ ಪ್ರಮಾಣದ ಫೈಬರ್ ಮತ್ತು ಖನಿಜಗಳನ್ನು ಹೊಂದಿರುತ್ತವೆ. ಏಪ್ರಿಕಾಟ್ ನಿಮಗೆ ವಿಟಮಿನ್ ಎ, ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ನೀಡುವಲ್ಲಿ ಪ್ರಾಮುಖ್ಯ ವಹಿಸುತ್ತದೆ. ಒಣದ್ರಾಕ್ಷಿಯು ಜೀವಸತ್ವಗಳು ಮತ್ತು ಅಗತ್ಯವಾದ ಫೈಬರ್‌ನಿಂದ ತುಂಬಿರುತ್ತದೆ, ಇದು ಪಾಯಸಕ್ಕೆ ಇನ್ನಷ್ಟು ರುಚಿ, ಪರಿಮಳ ನೀಡುತ್ತದೆ.

ನಾವಿಲ್ಲಿ ಸುಲಭವಾಗಿ ಹಾಗೂ ವಿಭಿನ್ನವಾಗಿ ತಯಾರಿಸುವ ರುಚಿಕರ ಡ್ರೈ ಫ್ರೂಟ್ಸ್ ಪಾಯಸ ತಯಾರಿಸುವ ಹಂತ ಹಂತದ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ:
Recipe By: ಮೀನಾ ಭಂಡಾರಿ
Recipe Type: Sweet
Serves: 4
-
ಬೇಕಾಗುವ ಪದಾರ್ಥಗಳು
1. ಹಾಲು - 1 ಲೀಟರ್
2. ಒಣ ಬೆರ್ರಿ ಫ್ರೂಟ್ - 7-8
3. ಪಿಸ್ತಾ - 10-12
4. ಸಕ್ಕರೆ - ಕಪ್
5. ಕೇಸರಿ - 5-6 ಎಳೆಗಳು
6. ಬಾದಾಮಿ - 7-8
7. ಒಣದ್ರಾಕ್ಷಿ - 10-12
8. ಏಪ್ರಿಕಾಟ್ - 5-6 (ಒಣಗಿದ)
9. ಏಲಕ್ಕಿ ಪುಡಿ - 1 ಟೀಸ್ಪೂನ್ ಉಳಿಸಿ
10. ತುಪ್ಪ
-
ತಯಾರಿಸುವ ವಿಧಾನ
1. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಏಪ್ರಿಕಾಟ್, ಒಣದ್ರಾಕ್ಷಿ ಮತ್ತು ಒಣ ಬೆರ್ರಿ ಫ್ರೂಟ್‌ಗಳನ್ನು ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ.
2. ನಂತರ ಪಾತ್ರೆಯಲ್ಲಿ ಹಾಲು ಹಾಕಿ ಕುದಿಸಿ.
3. ಹಾಲನ್ನು 3-4 ನಿಮಿಷ ಕುದಿಸಿ ನಂತರ ಏಲಕ್ಕಿ ಪುಡಿ ಮತ್ತು ಕೇಸರಿ ಸೇರಿಸಿ.
4. ಮತ್ತೆ, ಅದನ್ನು 5-6 ನಿಮಿಷ ಕುದಿಸಿ.
5. ನೆನಸಿದ ಹಣ್ಣುಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಲಿಗೆ ಸೇರಿಸಿ 5-6 ನಿಮಿಷ ಬೇಯಲು ಬಿಡಿ.
6. ನಂತರ ಹಾಲಿಗೆ ಒಂದು ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
7. ಅಂತಿಮವಾಗಿ ಬಾದಾಮಿ ಮತ್ತು ಪಿಸ್ತಾ ಸೇರಿಸಿ ಮತ್ತು 3-4 ನಿಮಿಷ ಕುದಿಸಿ.
8. ಈಗ ಪಾಯಸವನ್ನು ಬಟ್ಟಲಿಗೆ ಹಾಕಿ ಮೇಲೆ ಬಾದಾಮಿ, ತುಪ್ಪ ಹಾಕಿ ಸವಿಯಲು ಸಿದ್ಧ.
- ಪಾಯಸ ಉತ್ತಮ ಪರಿಮಳವನ್ನು ಪಡೆಯಲು ಅದನ್ನು ಕೆಲವು ಸಮಯ ಫ್ರಿಡ್ಜನಲ್ಲಿಟ್ಟರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.
- ಕ್ಯಾಲ್ - - 8.7 ಗ್ರಾಂ
- ಫೈಬರ್ - - 0.9 ಗ್ರಾಂ
- ಪ್ರೋಟೀನ್ - - 5.5 ಗ್ರಾಂ
- ಕಾರ್ಬೋಹೈಡ್ರೇಟ್ಗಳು - - 21.4 ಗ್ರಾಂ



Click it and Unblock the Notifications