Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ..? ಅದರ ಆರೋಗ್ಯಕರ ಅಂಶ ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ..!
ಅಡುಗೆಯಲ್ಲಿ ವಿಶೇಷವಾಗಿರುವುದೇನಾದರು ಪ್ರಯತ್ನಿಸಲು ನೀವು ಮುಂದಾಗಿದ್ದರೆ ಈ ನುಗ್ಗೆ ಸೊಪ್ಪಿನ ಚಟ್ನಿ ಒಮ್ಮೆ ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಇದರಲ್ಲಿ ಹಲವಾರು ಅಂಶಗಳಿದ್ದು, ವಿಟಮಿನ್ಗಳಿಂದ ತುಂಬಿದೆ. ಈ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಹೇರಳವಾಗಿದ್ದು, ಬೊಜ್ಜು, ಮಧುಮೇಹ, ರಕ್ತಹೀನತೆ, ಹೃದ್ರೋಗ, ಸಂಧಿವಾತ, ಪಿತ್ತಜನಕಾಂಗದ ಕಾಯಿಲೆಗಳು, ಚರ್ಮ ರೋಗಗಳು, ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ.
ಇಷ್ಟೊಂದು ಆರೋಗ್ಯಕಾರಿ ಅಂಶಗಳ ಹೊಂದಿರುವ ಈ ನುಗ್ಗೆಸೊಪ್ಪಿನ ಚಟ್ನಿಯನ್ನು ತಯಾರಿಸುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು?, ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ನುಗ್ಗೆ ಸೊಪ್ಪಿನ ಚಟ್ನಿ ಅಗತ್ಯವಿರುವ ವಸ್ತುಗಳು
- ನುಗ್ಗೆ ಸೊಪ್ಪು-2 ಕಪ್ಗಳು
- ಹುಣಸೆಹುಳಿ- ರುಚಿಗೆ ತಕ್ಕಷ್ಟು
- ತುರಿದ ತೆಂಗಿನಕಾಯಿ - 1/2 ಕಪ್
- ಈರುಳ್ಳಿ - 5
- ಬೆಳ್ಳುಳ್ಳಿ - 3
- ಅರಿಶಿನ ಪುಡಿ - 1/4 ಟೀ ಸ್ಪೂನ್
- ತೆಂಗಿನ ಎಣ್ಣೆ - 2 ಟೀಸ್ಪೂನ್
- ಮೆಣಸು-5
- ಜೀರಿಗೆ-1 ಚಮಚ
- ಕಡಲೆ - 2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಪುದೀನ ಎಲೆಗಳು - ಸ್ವಲ್ಪ
- ಕಲ್ಲು ಉಪ್ಪು - ರುಚಿಗೆ ತಕ್ಕಂತೆ
ನುಗ್ಗೆ ಸೊಪ್ಪಿನ ಚಟ್ನಿ ಮಾಡುವ ಪಾಕವಿಧಾನ
ಮೊದಲು ಹುಣಸೆ ಹುಳಿಯನ್ನು ಒಂದು ಲೋಟದಲ್ಲಿ ಬಿಸಿ ನೀರು ಹಾಕಿ ಅದರಲ್ಲಿ ಹಾಕಿ. ನುಗ್ಗೆ ಸೊಪ್ಪನ್ನು ತೊಳೆದು ಚೆನ್ನಾಗಿ ರೆಡಿ ಮಾಡಿಟ್ಟುಕೊಳ್ಳಿ. ನಂತರ ಒಲೆಯಲ್ಲಿ ಬಾಣಲೆ ಇಟ್ಟು ಎಣ್ಣೆ ಹಾಕಿ ಅದು ಬಿಸಿಯಾದಾಗ ಜೀರಿಗೆ, ಮೆಣಸಿನಕಾಯಿ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ.
ಇದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ನಂತರ ಬೆಳ್ಳುಳ್ಳಿ ಹಾಕಿ. ಈರುಳ್ಳಿ ಹಾಕಿ. ಈರುಳ್ಳಿ ಬಣ್ಣ ಬದಲಾದ ನಂತರ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಹಾಕಿ ಹುರಿಯಿರಿ. ಬಳಿಕ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ತಿರುಗಿಸಿ. ಈ ವೇಳೆ ಅರಶಿನ ಪುಡಿ ಹಾಕಿ. ಇದು ಚೆನ್ನಾಗಿ ಹುರಿದ ಬಳಿಕ ಒಲೆ ಆಫ್ ಮಾಡಿ ಈ ಮಿಶ್ರಣ ತಣ್ಣಗಾಗಲು ಬಿಡಿ.
ಇದು ತಣ್ಣಗಾದ ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆಹುಳಿ ಮತ್ತು ಅದರ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ, ರುಬ್ಬುವ ವೇಳೆ ಕೊತ್ತಂಬರಿ ಸೊಪ್ಪು ಬೇಕಾದರೆ ಸೇರಿಸಿಕೊಳ್ಳಬಹುದು. ಹೀಗೆ ಮಾಡಿದರೆ ರುಚಿಕರ ನುಗ್ಗೆ ಸೊಪ್ಪಿನ ಚಟ್ನಿ ಸವಿಯಲು ರೆಡಿ.
ನುಗ್ಗೆ ಸೊಪ್ಪಿನ ಈ ಚಟ್ನಿಯನ್ನು, ಇಡ್ಲಿ, ದೋಸೆ, ಅನ್ನ, ಚಪಾತಿ, ರೊಟ್ಟಿ, ಮುದ್ದೆ ಹೀಗೆ ಎಲ್ಲಾ ವಿಧದ ಖಾದ್ಯದ ಜೊತೆಯೂ ಸವಿಯಬಹುದು. ಇದರಲ್ಲಿ ಹಲವು ವಿಟಮಿನ್ಗಳಿದ್ದು, ಆರೋಗ್ಯಕ್ಕೂ ಅತ್ಯುತ್ತಮ ಆಹಾರವಾಗಿದೆ. ಮಾರುಕಟ್ಟೆಯಲ್ಲಿಯೂ ಈ ಸೊಪ್ಪು ಸಿಗುತ್ತದೆ. ವರ್ಷದ ಎಲ್ಲಾ ದಿನದಲ್ಲೂ ಈ ಸೊಪ್ಪು ಸಿಗುತ್ತದೆ.
ಹಸಿರು ನುಗ್ಗೆ ಎಲೆಯಲ್ಲಿನ ಪ್ರೊಟೀನ್ ಪ್ರಮಾಣ ಭೂಮಿಯ ಮೇಲಿನ ಯಾವುದೇ ಹಸಿರೆಲೆಗಿಂತ ಅಧಿಕ. ಇದರಲ್ಲಿನ ಕಬ್ಬಿಣದ ಅಂಶ ಕೂಡ ಉಳಿದ ಹಸಿರೆಲೆಗಳಿಗೆ ಹೋಲಿಸಿದರೆ ಜಾಸ್ತಿ. ಕಬ್ಬಿಣದ ಅಂಶ ಕಡಿಮೆಯಾಗಿ ಆರೋಗ್ಯ ಏರುಪೇರಾದರೆ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಅತ್ಯುಪಯುಕ್ತ.
ನುಗ್ಗೆ ಎಲೆಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿವೆ. ಇದಕ್ಕಾಗಿ ಒಂದು ಮುಷ್ಠಿಯಷ್ಟು ಉಗುರುಬೆಚ್ಚನೆಯ ನೀರಿನಲ್ಲಿ ಸುಮಾರು ಅರ್ಧಘಂಟೆಯ ಕಾಲ ಮುಳುಗಿಸಿಡಿ. ಈ ನೀರನ್ನು ಕುಡಿಯುತ್ತಿದ್ದರೆ ಅಧಿಕ ರಕ್ತದೊತ್ತಡ ಶೀಘ್ರವೇ ನಿಯಂತ್ರಣಕ್ಕೆ ಬರುತ್ತದೆ.



Click it and Unblock the Notifications
