Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಸ ರುಚಿ: ಖರ್ಜೂರ ಕಾಫಿ ಮಿಲ್ಕ್ ಶೇಕ್ ರೆಸಿಪಿ
ಮಿಲ್ಕ್ ಶೇಕ್‌ಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಹಾಲಿನೊಂದಿಗೆ ಕ್ರೀಮ್ ಅನ್ನು ಬೆರೆಸಿ ಮಾಡುವ ಶೇಕ್‌ಗಳು ಇತರ ಜ್ಯೂಸ್‌ಗಳಿಗಿಂತಲೂ ಆಹ್ಲಾದಮಯವಾಗಿರುತ್ತದೆ ಮತ್ತು ದುಪ್ಪಟ್ಟು ರುಚಿಯನ್ನು ಹೊಂದಿರುತ್ತದೆ. ಬರಿಯ ಹಣ್ಣುಗಳಿಂದ ಮಾತ್ರವಲ್ಲದೆ ಕಾಫಿಯಿಂದ ಕೂಡ ಮಿಲ್ಕ್ ಶೇಕ್ ಅನ್ನು ಹೇಗೆ ಮಾಡುವುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.
ಕಾಫಿ ಮಿಲ್ಕ್ ಶೇಕ್‌ನಲ್ಲಿ ನೀವು ಖರ್ಜೂರದ ಸವಿಯನ್ನು ಸವಿಯಬಹುದಾಗಿದೆ. ಕಾಫಿಯೊಂದಿಗೆ ಖರ್ಜೂರವನ್ನು ಮಿಶ್ರ ಮಾಡಿ ಈ ಮಿಲ್ಕ್ ಶೇಕ್ ಅನ್ನು ನಾವಿಲ್ಲಿ ತಯಾರಿಸುತ್ತಿದ್ದೇವೆ. ಇನ್ನು ಮಕ್ಕಳಿಗೆ ನೀವು ಈ ಮಿಲ್ಕ್ ಶೇಕ್ ಅನ್ನು ತಯಾರಿಸುತ್ತಿದ್ದೀರಿ ಎಂದಾದಲ್ಲಿ ಕಾಫಿ ಪೌಡರ್ ಅನ್ನು ಕಡಿಮೆ ಹಾಕಿ ಮತ್ತು ಹಾಲಿನ ಪ್ರಮಾಣವನ್ನು ಹೆಚ್ಚಿಸಿ. ಇದರಿಂದ ಮಕ್ಕಳೂ ಕೂಡ ಸಂತಸಗೊಳ್ಳುತ್ತಾರೆ. ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....
ಪ್ರಮಾಣ - 2 ಗ್ಲಾಸ್‌ಗಳು
*ಸಿದ್ಧತಾ ಸಮಯ - 5 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 12 ನಿಮಿಷಗಳು
ಸಾಮಾಗ್ರಿಗಳು
*1 ಬೀಜವಿಲ್ಲದ ಖರ್ಜೂರ - 1 ಕಪ್
*2 ತ್ವರಿತ ಕಾಫಿ ಪೌಡರ್ - 10 ಚಮಚ
*3 ಹಾಲು - 6 ಕಪ್ಸ್
*4 ಹಸಿರು ಏಲಕ್ಕಿ - 5-6
*5 ಸಕ್ಕರೆ - 3 ಚಮಚ
*6 ತಾಜಾ ಕ್ರೀಂ - 3/4 ಕಪ್
*7 ಐಸ್ ಕ್ಯೂಬ್ಸ್ ಬೇಕಾದಷ್ಟು ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು
ಮಾಡುವ ವಿಧಾನ:
1. ಖರ್ಜೂರದ ಬೀಜವನ್ನು ತೆಗೆದು ಪಕ್ಕದಲ್ಲಿರಿಸಿಕೊಳ್ಳಿ. ಈಗ ಕಾಫಿ ಡಿಕಾಕ್ಶನ್ ಅನ್ನು ಸಿದ್ಧಮಾಡಿ. ಇದಕ್ಕಾಗಿ ಸ್ಟವ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿಕೊಳ್ಳಿ. ನೀರು ಮತ್ತು ಕಾಫಿ ಹುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
2.ಸಕ್ಕರೆ ಮತ್ತು ಹಸಿರು ಏಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ. ಸ್ಟವ್ ಆಫ್ ಮಾಡಿ ಮತ್ತು ಕೊಠಡಿಯ ತಾಪಮಾನಕ್ಕೆ ಅದನ್ನು ತಂದುಕೊಳ್ಳಿ.
3.ಈಗ, ಬೀಜ ರಹಿತ ಖರ್ಜೂರವನ್ನು ಸೇರಿಸಿ, ಬ್ಲೆಂಡರ್‌ಗೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಐಸ್ ಕ್ಯೂಬ್ಸ್, ಕಾಫಿ ಡಿಕಾಕ್ಷನ್, ಇನ್ನಷ್ಟು ಹಾಲು ಮತ್ತು ಸಾಕಷ್ಟು ತಾಜಾ ಕ್ರೀಂ ಅನ್ನು ಸೇರಿಸಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.
4.ಉದ್ದನೆಯ ಗ್ಲಾಸ್‌ಗೆ ಮಿಲ್ಕ್ ಶೇಕ್ ಅನ್ನು ಹಾಕಿ ಮತ್ತು ಕಾಫಿ ಡಿಕಾಕ್ಷನ್‌ನಿಂದ ಅಲಂಕರಿಸಿ. ಖರ್ಜೂರ ಮತ್ತು ಕಾಫಿ ಬೆರೆತ ಮಿಲ್ಕ್ ಶೇಕ್ ಸರ್ವ್ ಮಾಡಲು ಸಿದ್ಧವಾಗಿದೆ.



Click it and Unblock the Notifications
