Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ ಮೀನಿನ ಫ್ರೈ ಸ್ವಲ್ಪ ಭಿನ್ನ, ಇಲ್ಲಿದೆ ಡಬಲ್ ಕೋಟ್ ಮಸಾಲೆಯ ಮೀನಿನ ಫ್ರೈ ರೆಸಿಪಿ
ನೀವು ಮೀನು ಪ್ರಿಯರಾಗಿದ್ದರೆ ನಾವಿಲ್ಲಿ ಸ್ಪೆಷಲ್ ಮೀನಿನ ಫ್ರೈ ರೆಸಿಪಿ ನೀಡಿದ್ದೇವೆ, ಈ ಮೀನಿನ ಫ್ರೈ ಅಂದರೆ ಡಬಲ್ ಕೋಟ್ ಮಸಾಲೆ ಹಾಕಿ ಮಾಡುವ ಮೀನಿನ ಫ್ರೈ ಮಾಡಿ.
ನೀವು ಮೊದಲು ಮೀನಿನ ಫ್ರೈ ಮಾಡಿ ನಂತರ ಮತ್ತೊಮ್ಮೆ ಮಸಾಲೆ ಲೇಪಿಸಿ ಫ್ರೈ ಮಾಡುವ ವಿಧಾನವಾಗಿದೆ, ಇದು ಸಾಮಾನ್ಯ ಮೀನಿನ ಫ್ರೈಗಿಂತ ಇನ್ನೂ ಟೇಸ್ಟ್ ಅನಿಸುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮೀನು
1/2 ಕೆಜಿ (ತುನಾ, ಅಂಜಲ್ ಹೀಗೆ ಯಾವುದಾದರೂ ಮೀನುಗಳನ್ನು ಬಳಸಬಹುದು)
ಬೇಕಾಗುವ ಸಾಮಗ್ರಿ
1 ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್
ನಿಂಬೆರಸ (1 ನಿಂಬೆಹಣ್ಣಿನ ರಸ)
1 ಚಮಚ ಉಪ್ಪು
1/4 ಚಮಚ ಅರಿಶಿಣ ಪುಡಿ
3/4 ಚಮಚ ಗರಂ ಮಸಾಲ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಚಮಚ ಖಾರದ ಪುಡಿ
ಮತ್ತೊಮ್ಮೆ ಮಸಾಲೆಗೆ
ಒಂದೂವರೆ ಚಮಚ ಅಕ್ಕಿ ಪುಡಿ
ಒಂದೂವರೆ ಚಮಚ ಕಡ್ಲೆ ಹಿಟ್ಟು
ರುಚಿಗೆ ತಕ್ಕ ಉಪ್ಪು
1/2 ಚಮಚ ಕರಿಮೆಣಸಿನ ಪುಡಿ
2-3 ಕರಿಬೇವು ಅಥವಾ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
- ಮೊದಲಿಗೆ ನೀವು ಮೀನನ್ನು ತೊಳೆದು ಇಡಿ.
- ನಂತರ ತಟ್ಟೆಗೆ ಮೇಲೆ ಹೇಳಿದ ಮಸಾಲೆ ಸಾಮಗ್ರಿ ಹಾಕಿ, ಅದರಲ್ಲಿ ಮೀನು ತುಂಡುಗಳನ್ನು ಹಾಕಿ, ಮಸಾಲೆಯನ್ನು ಲೇಪಿಸಿ, 2 ಗಂಟೆ ಫ್ರಿಡ್ಜ್ನಲ್ಲಿಡಿ, ಇಲ್ಲಾ ಹೊರಗಡೆಯೂ ಇಡಬಹುದು.
- ನಂತರ ತವಾಗೆ ಎರಡು ಚಮಚ ಎಣ್ಣೆ ಹಾಕಿ, ನಂತರ ಮೀನಿನ ತುಂಡುಗಳನ್ನು ಹಾಕಿ ಫ್ರೈ ಮಾಡಿ.
- ನಂತರ ಫ್ರೈ ಮಾಡಿದ ಮೀನಿನ ಫ್ರೈಯನ್ನು ಗಟ್ಟಿಯಾಗಿ ಮಿಶ್ರ ಮಾಡಿಟ್ಟ ಅಕ್ಕಿ ಪುಡಿ, ಕಡ್ಲೆ ಪುಡಿ, ಕರಿ ಮೆಣಸಿನ ಪುಡಿ, ಉಪ್ಪು ಹಾಕಿ ಮಿಶ್ರ ಮಾಡಿರುವ ಮಸಾಲೆಯನ್ನು ಫ್ರೈ ಮಾಡಿದ ಮೀನಿನ ಮೇಲೆ ಮತ್ತೊಮ್ಮೆ ಲೇಪಿಸಿ , ಮತ್ತೆ ತವಾದಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
- ನಂತರ ಡೆಕೋರೇಷನ್ ಅಂದರೆ ಟೊಮೆಟೊ, ಸೌತೆಕಾಯಿ, ನಿಂಬೆಹಣ್ಣಿನ ತುಂಡುಗಳನ್ನು ಇಟ್ಟು ಸರ್ವ್ ಮಾಡಿ.
ಮೀನಿನ ಫ್ರೈ ಮಾಡುವ ಮತ್ತೊಂದು ವಿಧಾನ
ಬೇಕಾಗುವ ಸಾಮಗ್ರಿ
ಮೀನು 1 ಕೆಜಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಒಂದೂವರೆ ಚಮಚ ಉಪ್ಪು
ಹುಣಸೆ ಹಣ್ಣಿನ ಪೇಸ್ಟ್ 2 ಚಮಚ
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1 ಚಮಚ
ನೀವು ಮೊದಲು ಮಸಾಲೆಯನ್ನು ರೆಡಿ ಮಾಡಿ, ಮಸಾಲೆ ರೆಡಿ ಮಾಡುವಾಗ ಸ್ವಲ್ಪವೇ
ಸ್ವಲ್ಪ ನೀರು ಹಾಕಿ ಮಸಾಲೆ ಮಿಕ್ಸ್ ಮಾಡಿ, ನೀರು ನೀರಾದರೆ ಮೀನು ಫ್ರೈ
ಚೆನ್ನಾಗಿರಲ್ಲ
ಮಸಾಲೆ ಮಿಕ್ಸ್ ಮಾಡಿಟ್ಟ ಮೇಲೆ ಕೂಡಲೇ ಫ್ರೈ ಮಾಡಿದರೆ ಮಸಾಲೆ ಹಿಡಿಯಲ್ಲ, ಹಾಗಾಗಿ
ಕಡಿಮೆಯೆಂದರೂ 2 ಗಂಟೆ ಇಡಿ
ನಂತರ ತವಾ ಫ್ರೈ ಮಾಡಬಹುದು.
ಈ ಮೀನಿನ ಫ್ರೈಗೂ ಡಬಲ್ ಕೋಟ್ ಮಸಾಲ ಮೀನಿನ ಫ್ರೈಗೂ ತುಂಬಾನೇ
ವ್ಯತ್ಯಾಸ ಇರುತ್ತದೆ.
ಮೀನು ಫ್ರೈ ಟೇಸ್ಟ್ ಆಗಿರಲು ಅದರ ಮಸಾಲೆ ಮಾಡುವ ವಿಧಾನ ತುಂಬಾ ಮುಖ್ಯ, ನೀವು ಮಸಾಲೆ ಗಟ್ಟಿಯಾಗಿ ಮಾಡಿ ನಂತರ ಮೀನಿನ ಮೇಲೆ ಲೇಪಿಸಿ, ಇನ್ನು ಮೀನಿನ ಪೀಸ್ ದಪ್ಪವಿದ್ದರೆ ಫೋರ್ಕ್ನಿಂದ ಚುಚ್ಚಿ ಮಸಾಲೆ ತುಂಬಿ ಇಟ್ಟರೆ ಟೇಸ್ಟ್ ಇನ್ನೂ ಸೂಪರ್ ಆಗಿರುತ್ತದೆ.
ಮೀನು
ಮೀನಿನ ಫ್ರೈ ಬಾಯಿಗೆ ರುಚಿ ಆದರೆ ಆರೋಗ್ಯದ ದೃಷ್ಟಿಯಿಂದ ಮೀನಿನ ಸಾರು ಒಳ್ಳೆಯದು.
ಮೀನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದರಿಂದ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ.



Click it and Unblock the Notifications
