Latest Updates
-
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು!
ಬೆಳಗಾವಿ ಕುಂದದ ಇತಿಹಾಸ ಗೊತ್ತೇ? ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು ಗೊತ್ತಾ?
ನೀವು ಬೆಳಗಾವಿಗೆ ಹೋದಾಗ ಅಲ್ಲಿಯ ಪ್ರಸಿದ್ಧ ಸಿಹಿತಿಂಡಿ ಯಾವುದು ಎಂದು ಕೇಳಿದರೆ ಬೇಕರಿಯವರು ಕುಂದ ಹಾಗೂ ಕರದಂಟು ಎಂದು ಹೇಳುತ್ತಾರೆ, ಈ ಸ್ವೀಟ್‌ಗಳ ರುಚಿ ಇಷ್ಟವಾಗದವರೇ ಇರಲ್ಲ ಅಷ್ಟೊಂದು ರುಚಿಯಾಗಿರುತ್ತದೆ.

ಅದರಲ್ಲೂ ಕುಂದ ಸ್ವೀಟ್ ಬಾಯಿಗೆ ಹಾಕಿದರೆ ಅದರ ರುಚಿಗೆ ಕರಗಿ ಹೋಗಿಬಿಡುವಿರಿ. ನೀವು ಇದುವರೆಗೆ ಟೇಸ್ಟ್ ಮಾಡಿಲ್ಲ ಎಂದಾದರೆ ಬೆಳಗಾವಿ ಕಡೆ ಹೋದಾಗ ಅಥವಾ ಅಲ್ಲಿಯ ಫ್ರೆಂಡ್ ಇದ್ದರೆ ತಪ್ಪದೆ ತರಿಸಿ ಸವಿಯಿರಿ. ಇಲ್ಲದಿದ್ದರೆ ನಾವು ಇಲ್ಲಿ ನೀಡಿರುವ ರೆಸಿಪಿಯಂತೆ ಟ್ರೈ ಮಾಡಿ ನೋಡಿ.
ಈ ಸಿಹಿ ತಿಂಡಿ ಯಾವಾಗ ಮೊದಲು ಕಂಡು ಹಿಡಿಯಲಾಯಿತು?
ಈ ಸಿಹಿ ತಿಂಡಿಯನ್ನು ಬೇಕರಿಯವರು ಸೇರಿ 19ನೇ ಶತಮಾನದಲ್ಲಿ ಕಂಡು ಹಿಡಿದರು ಎಂದು
ಹೇಳಲಾಗುವುದು. ಈ ಸಿಹಿತಿಂಡಿ ಬೇಗನೆ ಪ್ರಸಿದ್ಧಿ ಪಡೆಯಿತಿ. ಬೆಳಗಾವಿಯಲ್ಲಿ
ಯಾವುದೇ ವಿಶೇಷ ಸಮಾರಂಭವಿರಲಿ ಈ ಕುಂದ ಇದ್ದೇ ಇರುತ್ತದೆ, ಕುಂದ ಎಂಬುವುದು
ಬೆಳಗಾವಿಯ ಸಿಹಿ ತಿಂಡಿ ಎಂಬುವುದಾಗಿ ಗುರುತಿಸಲ್ಪಟ್ಟಿದೆ.
ಮಣ್ಣಿನ ಮಡಿಕೆಯಲ್ಲಿ ನೀಡಲಾಗುವುದು'
ಈ ಸಿಹಿ ತಿಂಡಿಯನ್ನು ಸಾಮಾನ್ಯವಾಗಿ ಮಣ್ಣಿನ ಮಡಿಕೆಯಲ್ಲಿ ನೀಡಲಾಗುವುದು.
ಬೆಳಗಾವಿಗೆ ಯಾರಾದರೂ ಹೋದರೆ ಅಲ್ಲಿಯ ವಿಶೇಷ ಸ್ವೀಟ್ ಆಗಿ ಇದನ್ನು ನೀಡುತ್ತಾರೆ.
ಕುಂದ ಬೆಳಗಾವಿಯಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆಯುತ್ತಿದೆ,
ಹೊರದೇಶದಲ್ಲಿರುವ ಕೆಲವು ಭಾರತೀಯ ರೆಸ್ಟೋರೆಂಟ್‌ಗಳಲ್ಲಿಯೂ ಕುಂದ ಸಿಗುವುದು.
ಕುಂದ ರೆಸಿಪಿ
ನೀವು ಮನೆಯಲ್ಲಿ ತಯಾರಿಸುವುದಾದರೆ ಈ ರೀತಿ ಟ್ರೈ ಮಾಡಿ
Recipe By: Reena TK
Recipe Type: Sweet
Serves: 6
-
ಬೇಕಾಗುವ ಸಾಮಗ್ರಿ
4 ಕಪ್ ಹಾಲು
1 ಕಪ್ ಸಕ್ಕರೆ
3 ಚಮಚ ಜೋಳದ ಹಿಟ್ಟು
1 ಚಮಚ ಏಲಕ್ಕಿ ಪುಡಿ
ಚಿಟಿಕೆಯಷ್ಟು ಕೇಸರಿ
-
ಮಾಡುವ ವಿಧಾನ
* ದಪ್ಪವಾದ ತಳದ ಬಾಣಲೆಗೆ ಹಾಲನ್ನು ಹಾಕಿ ಸಾಧಾರಣ ಉರಿಯಲ್ಲಿ ಕುದಿಸಿ. ಹಾಲು ಮಂದವಾಗಬೇಕು.
* ಒಂದು ಚಿಕ್ಕ ಬೌಲ್‌ನಲ್ಲಿ ಜೋಳದ ಹಿಟ್ಟಿಗೆ 1/4 ಕಪ್ ನೀರು ಹಾಕಿ ಪೇಸ್ಟ್ ರೀತಿ ಮಾಡಿ
* ಈಗ ಕುದಿಯುತ್ತಿರುವ ಮಂದ ಹಾಲಿಗೆ ಪೇಸ್ಟ್ ರೀತಿ ಮಾಡಿದ ಜೋಳದ ಹಿಟ್ಟು ಸೇರಿಸಿ, ಆದರೆ ಗಂಟು-ಗಂಟಾಗದಂತೆ ಎಚ್ಚರವಹಿಸಿ.
* ಈಗ ಉರಿಯನ್ನು ಕಡಿಮೆ ಮಾಡಿ ಮತ್ತಷ್ಟು ಕುದಿಸಿ. ಆಗಾಗ ತಿರುಗಿಸುತ್ತಲೇ ಇರಬೇಕು. ಪ್ಯಾನ್‌ನಿಂದ ಬಿಟ್ಟು ಬರಬೇಕು, ಅಷ್ಟು ಹೊತ್ತು ತಿರುಗಿಸುತ್ತಲೇ ಬೇಯಿಸಿ
* ಈಗ ಸಕ್ಕರೆ ಹಾಗೂ ಏಲಕ್ಕಿ ಸೇರಿಸಿ ಮತ್ತೊಮ್ಮೆ ತಿರುಗಿಸಿ.
*ಈಗ ಕೇಸರಿ ಸೇರಿಸಿ ತಿರುಗಿಸಿ.
*ಈಗ ಒಂದು ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣ ಸುರಿಯಿರಿ, ನಂತರ ತಣ್ಣಗಾದ ಮೇಲೆ ಇದನ್ನು ಕಟ್ ಮಾಡಿ ಸವಿಯಲು ನೀಡಬಹುದು.
- ಹಾಲನ್ನು ಸಾಧಾರಣ ಉರಿಯಲ್ಲಿ ಕುದಿಸಿ ಹಾಲು ತುಂಬಾ ಮಂದವಾದ ಬಳಿಕವಷ್ಟೇ ಜೋಳದ ಹಿಟ್ಟು ಬಳಸಿ
- 50g -
- ಕ್ಯಾಲೋರಿ - 338
- ಕೊಬ್ಬು - 14ಗ್ರಾಂ
- ಪ್ರೊಟೀನ್ - 11 ಗ್ರಾಂ
- ಕಾರ್ಬ್ಸ್ - 42ಗ್ರಾಂ



Click it and Unblock the Notifications