Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
Diwali Special: ರುಚಿಯಾದ ರವೆ ಕಡ್ಲೆಬೇಳೆ ಪಾಯಸ, ದೀಪಾವಳಿ ಸಂಭ್ರಮ ಡಬಲ್!
ದೀಪಾವಳಿಯಲ್ಲಿ ರುಚಿ ರುಚಿಯ ಸಿಹಿ ತಿಂಡಿ ಮಾಡಿಯೇ ಮಾಡುತ್ತೀರಿ. ಅದ್ರಲ್ಲೂ ಮನೆಯ ಎಲ್ಲಾ ಮಂದಿ ಇಷ್ಟಪಟ್ಟು ಸವಿಯುವಂತಹ ರುಚಿ ರುಚಿಯ ಸಿಹಿ ತಿಂಡಿ ಮಾಡುವುದು ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹೀಗಾಗಿ ನಾವಿಂದು ರುಚಿ ರುಚಿಯ ಪಾಯಸ ಮಾಡಿ ಸವಿಯುವ ಕುರಿತು ಹೇಳಲಿದ್ದೇವೆ.
ಹಬ್ಬಗಳಲ್ಲಿ ಎಷ್ಟೇ ಬಗೆಯ ತಿಂಡಿಗಳ ಮಾಡಿದ್ರೂ ಕೂಡ ಒಂದು ಪಾಯಸವಂತೂ ಇದ್ದೇ ಇರಲಿದೆ. ಪಾಯಸದಲ್ಲಿ ಹತ್ತಾರು ಬಗೆಗಳಿವೆ. ಹಲವು ವಿಧದಲ್ಲಿ ಮಾಡಬಹುದಾದ ಪಾಯಸ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬಗೆ ಬಗೆಯ ಪಾಯಸವನ್ನು ವಿಶೇಷ ದಿನದಲ್ಲಿ ಮಾಡುವುದು ನೋಡಬಹುದು. ಹಬ್ಬ, ಅತಿಥಿಗಳು ಬಂದಾಗ, ಪೂಜೆ, ವಿಶೇಷ ದಿನಗಳಿದ್ದಾಗ ಪಾಯಸ ಮಾಡಿ ಸವಿಯುವುದು ನೋಡಬಹುದು.

ಹೀಗೆ ದೀಪಾವಳಿಯಲ್ಲಿ ನೀವು ಯಾವುದಾದರು ತಿಂಡಿಯೊಂದನ್ನು ಮಾಡಿರುತ್ತೀರಿ. ಅದರ ಜೊತೆಗೆ ಒಂದು ಪಾಯಸ ಕೂಡ ಮಾಡಿ ಸವಿಯುವ ನಿಮ್ಮ ಬಯಕೆ ಆಗಿದ್ದರೆ ನಾವಿಂದು ಸುಲಭವಾಗಿ ಮಾಡಬಹುದಾದ ರವೆ ಕಡ್ಲೆ ಬೇಳೆ ಪಾಯಸ ಕುರಿತಾಗಿ ತಿಳಿದುಕೊಳ್ಳೋಣ. ಈ ರವೆ ಕಡ್ಲೆ ಬೇಳೆ ಪಾಯಸ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ಕಡ್ಲೆ ಬೇಳೆ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರವೆ
- ಏಲಕ್ಕಿ
- ತೆಂಗಿನ ತುರಿ
- ಒಣ ದ್ರಾಕ್ಷಿ
- ಗೋಡಂಬಿ
- ಬೆಲ್ಲ
- ತುಪ್ಪ
- ಉಪ್ಪು
- ಲವಂಗ
- ಕಡಲೆ ಬೇಳೆ
ರವೆ ಕಡ್ಲೆ ಬೇಳೆ ಪಾಯಸ ಮಾಡುವ ವಿಧಾನವೇನು?
ಮೊದಲು ಕುಕ್ಕರ್ನಲ್ಲಿ 1 ಕಪ್ ಕಡ್ಲೆ ತೊಳೆದು ಹಾಕಿಕೊಂಡು 1 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ. ಈಗ ಒಂದು ಕಪ್ ಕಾಯಿ ತುರಿ ಮಿಕ್ಸಿ ಜಾರ್ಗೆ ಹಾಕಿ, ಏಲಕ್ಕಿ ಹಾಕಿ ನೀರು ಹಾಕಿ ರುಬ್ಬಿಕೊಂಡು ಜರಡಿ ಹಿಡಿದು ಅದರ ಹಾಲು ತೆಗೆದಿಟ್ಟುಕೊಳ್ಳಿ. ಮತ್ತೆ ಮತ್ತೆ ರುಬ್ಬಿ ಕಾಯಿ ಹಾಲು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಒಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಿಸಿಕೊಳ್ಳಿ. ನಂತರ ಜರಡಿ ಹಿಡಿದು ಬೆಲ್ಲದ ನೀರು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಗೋಡಂಬಿ ಹಾಕಿ ಹುರಿದು, ಒಣ ದ್ರಾಕ್ಷಿ ಸಹ ಹಾಕಿ ತೆಗೆದಿಟ್ಟುಕೊಳ್ಳಿ.
ಈಗ ತುಪ್ಪಕ್ಕೆ ಕಾಲು ಕಪ್ ಮೀಡಿಯಂ ರವೆ ಹಾಕಿ ಹುರಿದುಕೊಳ್ಳಿ. 5 ನಿಮಿಷ ಹುರಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ ಬೆಂದಿರುವ ಕೆಡಲೆ ಬೇಳೆ ತೆಗೆದು ಮತ್ತೊಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲದ ನೀರು ಹಾಕಿ ಕುದಿಬರಲು ಬಿಡಿ. ಕುದಿಬರುವಾಗ ಹುರಿದುಕೊಂಡಿದ್ದ ರವೆಯನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷದ ಬಳಿಕ ಗೋಡಂಬಿ ದ್ರಾಕ್ಷಿ, 1 ಕಪ್ ಕಾಯಿ ಹಾಲು, ಉಪ್ಪು ಲವಂಗ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಮತ್ತೆ ಕಾಯಿ ಹಾಲು ಇದ್ದರೆ ಹಾಕಿಕೊಂಡು ಆಗಾಗ ಮಿಕ್ಸ್ ಮಾಡುತ್ತಾ ಇರಿ. ಕೊನೆಯಲ್ಲಿ ತುಪ್ಪ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇದು ಸ್ವಲ್ಪ ದಪ್ಪವಾದರೆ ಬಿಸಿ ಹಾಲು ಹಾಕಿ ತೆಳು ಮಾಡಿಕೊಳ್ಳಬಹುದು. ನೀವು ಸಹ ಮನೆಯಲ್ಲಿ ಈ ರೀತಿ ಪಾಯಸ ಮಾಡಿ ನೋಡಿ.



Click it and Unblock the Notifications
