Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
Diwali Special: ಬೇಕರಿ ರುಚಿಯ ಬಾದುಷ ಮನೆಯಲ್ಲೇ ಮಾಡಿ! ಇಲ್ಲಿದೆ ಸುಲಭ ವಿಧಾನ
ದೀಪಾವಳಿಗೆ ನೀವು ಕೂಡ ಯಾವುದಾದರು ಸಿಹಿ ಮಾಡಿ ಸವಿಯುವ ಆಲೋಚನೆಯಲಿದ್ದರೆ ಯಾವ ಸಿಹಿ ಮಾಡಬೇಕು ಎಂಬ ಗೊಂದಲದಲ್ಲಿರಬಹುದು. ಹಾಗೆ ಹಲವು ರೀತಿಯ ಖಾದ್ಯಗಳು, ಸಿಹಿಗಳು ನೀವು ಮಾಡಿ ಸವಿಯೋದು ಸಹ ಇದೆ. ದೀಪಾವಳಿ ಅಂದ್ರೆ ಸಿಹಿಗಳ ಹಬ್ಬವೇ ಆಗಿರಲಿದೆ. ಹೋಳಿಗೆ ಕಜ್ಜಾಯ, ಪಾಯಸದಂತಹ ಸಿಹಿಯ ಜೊತೆಗೆ ಬಾದುಷ ಕೂಡ ದೀಪಾವಳಿಯ ಸಿಹಿ ತಿಂಡಿಯಾಗಿದೆ.
ನೀವು ಕೂಡ ಬೇಕರಿಗಳಲ್ಲಿ ಸಿಗುವಂತಹ ಬಾದುಷ ಸವಿದಿರುತ್ತೀರಿ. ಬಾದುಷ ಬಹಳ ರುಚಿಯಾದ ಸಿಹಿ ತಿಂಡಿ. ಹಾಗೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೂಡ ಇಷ್ಟಪಟ್ಟು ಸವಿಯುವ ತಿಂಡಿ ಇದು. ಬಹುತೇಕರು ಈ ತಿಂಡಿಯನ್ನು ಸವಿಯಲು ಇಷ್ಟಪಡುತ್ತಾರೆ. ಆದ್ರೆ ಈ ಬಾದುಷ ಮಾಡುವ ಕುರಿತು ಹಲವರಿಗೆ ಗೊಂದಲ ಇರಲಿದೆ.

ಬಾದುಷ ಸಿಹಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಬೇಕರಿಗಳಲ್ಲಿ ಸಿಗುವಂತಹ ಬಾದುಷದ ರೀತಿಯಲ್ಲೇ ಮನೆಯಲ್ಲೂ ನಾವು ಮಾಡಬಹುದು. ಹಾಗಾದ್ರೆ ಬಾದುಷ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಬಾದುಷ ಮಾಡಲು ಬೇಕಾಗುವ ವಸ್ತುಗಳು
- ಮೈದಾ ಹಿಟ್ಟು
- ಸಕ್ಕರೆ
- ತುಪ್ಪ
- ಏಲಕ್ಕಿ
- ಎಣ್ಣೆ
- ಬೇಕಿಂಗ್ ಸೋಡಾ
ಬಾದುಷ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಗೆ ಒಂದೂವರೆ ಕಪ್ ಮೈದಾ ಹಿಟ್ಟು ಹಾಕಿ ಅರ್ಧ ಚಮಚ ಬೇಕಿಂಗ್ ಸೋಡಾ, 1 ಚಮಚ ಸಕ್ಕರೆ, ತುಪ್ಪ 1 ಸ್ಪೂನ್ ಸೇರಿಸಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿಕೊಂಡ ಬಳಿಕ ಕಾಲು ಕಪ್ ಹೊಸ ಮೊಸರು ಹಾಕಿಕೊಂಡು ಮಿಕ್ಸ್ ಮಾಡಿ ನಂತರ ಸ್ವಲ್ಪ ಸ್ವಲ್ಪವಾಗಿ ಅರ್ಧ ಕಪ್ ನೀರು ಹಾಕಿ ಹಿಟ್ಟು ಹದ ಮಾಡಿಕೊಳ್ಳಿ.
ನಂತರ ಮುಚ್ಚಳ ಮುಚ್ಚಿ ಈ ಹಿಟ್ಟನ್ನು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಗೆ ಮುಕ್ಕಾಲು ಕಪ್ ನೀರು ಹಾಕಿ ಒಂದು ಎಳೆಯ ಪಾಕ ಮಾಡಿಕೊಳ್ಳಬೇಕು. ಅಂದರೆ ಅದು ಸ್ವಲ್ಪ ಅಂಟು ಅಂಟಾಗಿ ಬರಬೇಕು. ಈ ಸಮಯದಲ್ಲಿ ಏಲಕ್ಕಿ ಹಾಗೆ 6 ಹನಿ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ.
ಈಗ ಮತ್ತೆ ಹಿಟ್ಟನ್ನು ಮತ್ತೆ ಹದ ಮಾಡಿಕೊಳ್ಳಿ. ಈಗ ಉಂಡೆ ಕಟ್ಟಬೇಕು. ಇದು ವಡೆ ರೀತಿ ಮಾಡಿ ಮಧ್ಯದಲ್ಲಿ ಒಂದು ತೂತು ಮಾಡಿಕೊಳ್ಳಿ. ಎಲ್ಲಾ ಹಿಟ್ಟನ್ನು ಈ ರೀತಿ ವಡೆಯಂತೆ ಮಾಡಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಟ್ಟು ರೆಡಿಯಾಗಿದ್ದ ಬಾದುಷವನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿ. 10 ನಿಮಿಷ ಎರಡೂ ಕಡೆ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬಾದುಷ ರೆಡಿಯಾಗುತ್ತದೆ. ನಂತರ ಇದನ್ನು ಸಕ್ಕರೆ ಪಾಕದೊಳಗೆ ಹಾಕಿ 10 ನಿಮಿಷ ಬಿಡಿ. ನೀವು ಕೂಡ ಇದನ್ನು ಹಬ್ಬದ ಸಮಯದಲ್ಲಿ ಮಾಡಿ ಸವಿದು ನೋಡಿ. ಅದರ ರುಚಿಗೆ ಮತ್ತೆ ಮತ್ತೆ ಮಾಡಿ ಸವಿಯುತ್ತೀರಿ.



Click it and Unblock the Notifications