Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೋವಾ ಸ್ವೀಟ್ಸ್ ರೆಸಿಪಿ: ಬರಿ ನಾಲ್ಕು ಸಾಮಗ್ರಿ, 10 ನಿಮಿಷ ಸಾಕು ಈ ಸ್ವೀಟ್ಸ್ ರೆಡಿ ಮಾಡಬಹುದು
ದೀಪಾವಳಿ ಹತ್ರ ಬರ್ತಾ ಇದೆ, ದೀಪಾವಳಿ ಎಂದ ಮೇಲೆ ಸ್ವೀಟ್ಸ್‌ಗಳದ್ದೇ ಕಾರುಬಾರು, ಆಫೀಸ್‌ಗಳಲ್ಲಿ ಸ್ವೀಟ್ಸ್ ಕೊಡ್ತಾರೆ, ಮನೆಗೆ ಬರುವ ಅತಿಥಿಗಳಿಗೆ ಸ್ವೀಟ್ಸ್ ನೀಡಲಾಗುವುದು. ಈ ಸ್ವೀಟ್ಸ್ ನೀವುಹೊರಗಡೆಯಿಂದ ತರಿಸಿದರೆ ದುಬಾರಿ ಬೆಲೆ, ಸಾವಿರ ರುಪಾಯಿ ಕೊಟ್ಟರೆ ಒಂದು ಚಿಕ್ಕ ಪ್ಯಾಕ್ ಸ್ವೀಟ್ಸ್ ಸಿಗಬಹುದು, ಅದರ ಬದಲಿಗೆ ತುಂಬಾ ಸರಳವಾಗಿ ಮಾಡಬಹುದಾದ ಸ್ವೀಟ್ಸ್ ರೆಸಿಪಿ ನೀಡಲಿದ್ದೇವೆ, ಈ ರೆಸಿಪಿಗಳು ದೀಪಾವಳಿ ಹಬ್ಬದ ಸಮಯದಲ್ಲಿ ನಿಮ್ಮ ಸಂಭ್ರಮ ಹೆಚ್ಚಿಸುತ್ತದೆ, ಹಣ ಉಳಿಸುತ್ತದೆ, ಶ್ರಮವೂ ಹೆಚ್ಚು ಹಾಕಬೇಕಾಗಿಲ್ಲ.
ಇಲ್ಲಿ ಕೋವಾ ಸ್ವೀಟ್ಸ್ ರೆಸಿಪಿ ನೀಡಿದ್ದೇವೆ, ಇದು ತುಂಬಾನೇ ಸರಳವಾದಂಥ ರೆಸಿಪಿ, ನೀವು ಕೋವಾ ಮನೆಯಲ್ಲಿಯೇ ಮಾಡಬಹುದು ಅಥವಾ ಹೊರಗಡೆಯಿಂದ ತರಿಸಬಹುದು. 1/4 ಕೆಜಿ, ಅರ್ಧ ಕೆಜಿ ಅಂತ ನಿಮಗೆ ಕೋವಾ ಯಾವ ಪ್ರಮಾಣದಲ್ಲಿ ಬೇಕೋ ಅದನ್ನು ತರಿಸಿ ಮಾಡಬಹುದು, ಇಲ್ಲಿ 200 ಗ್ರಾಂ ಕೋವಾ ಬಳಸಿ ಮಾಡುವ ರೆಸಿಪಿ ನೀಡಿದ್ದೇವೆ, ಮೊದಲಿಗೆ ಇದನ್ನು ಟ್ರೈ ಮಾಡಿ ನೋಡಿ, ಹಬ್ಬದ ಸಮಯದಲ್ಲಿ ಹೆಚ್ಚು ಮಾಡಬಹುದು.
ಈ ರೆಸಿಪಿಮಾಡುವಾಗ ನೀವು ಸಕ್ಕರೆ ಪುಡಿ ಮಾಡಿಟ್ಟರೆ ಒಳ್ಳೆಯದು, ಇದಕ್ಕೆ ಸಕ್ಕರೆ ಹಾಗೇ ಹಾಕಬಾರದು , ಪುಡಿ ಸಕ್ಕರೆ ಬಳಸಬೇಕು, ಮತ್ತೆ ತುಪ್ಪ, ಕೋವಾವಿದ್ದರೆ ಈ ಸ್ವೀಟ್ಸ್ ರೆಡಿಯಾಗುತ್ತೆ, ಅದರ ಮೇಲೆ ಬಾದಾಮಿ, ಪಿಸ್ತಾ ಅಂತ ನಿಮಗೆ ಇಷ್ಟವಾದ ಡ್ರೈ ಫ್ರೂಟ್ಸ್ ಇಟ್ಟು ಅಲಂಕರಿಸಬಹುದು.
ಈ ಸ್ವೀಟ್ಸ್ ಮಾಡಿ ಬಾಯಿಗೆ ಇಟ್ಟರೆ ಪೇಡಾ ರೀತಿ ತುಂಬಾನೇ ರುಚಿಯಾಗಿರುತ್ತದೆ, ಸ್ವೀಟ್ ಸ್ಟಾಲ್‌ಗಳಲ್ಲಿ ಇದಕ್ಕೆ ಒಂದುಪೀಸ್‌ಗೆ 15-20 ರುಪಾಯಿ ಬೀಳಬಹುದು. ಅದೇ ಒಂದು ಕೆಜಿ ಕೋವಾ ಬೆಲೆ ಕೆಲವು ಕಡೆ 400 ಇನ್ನು ಕೆಲವು ಕಡೆ 600 ರುಪಾಯ ಇರುತ್ತದೆ. ಒಂದು ಕೆಜಿ ಕೋವಾದಿಂದ ನೀವು 50 ಉಂಡೆಗೂ ಹೆಚ್ಚು ತಯಾರು ಮಾಡಬಹುದು. ಇನ್ನು ಈ ದೀಪಾವಳಿ ಸ್ವೀಟ್ ಸೇಲ್ ಮಾಡುವವರು ಕೂಡ ಈ ರೆಸಿಪಿ ಡಟ್ರೈ ಮಾಡಬಹುದು.
ಕೋವಾ ಸ್ವೀಟ್ಸ್ ನೀವು ಬರಿ ಹತ್ತು ನಿಮಿಷದಲ್ಲಿ ತಯಾರು ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
ಈ ಸ್ವೀಟ್ಸ್‌ಗೆ ಈ ನಾಲ್ಕು ಸಾಮಗ್ರಿ ಸಾಕು
- 200 ಗ್ರಾಂ ಕೋವಾ
- ಐಸಿಂಗ್ ಶುಗರ್1/2 ಕಪ್ (ಸಕ್ಕರೆ ಪುಡಿ)
- ಸ್ವಲ್ಪ ತೆಂಗಿನ ತುರಿ
- 2 ಚಮಚ ತುಪ್ಪ
ಮಾಡುವ ವಿಧಾನ
- ಒಂದು ಬೌಲ್‌ನಲ್ಲಿ ಕೋವಾ ಹಾಕಿ.ಅದಕ್ಕೆ ಐಸಿಂಗ್ ಶುಗರ್, ತುಪ್ಪ, ತೆಂಗಿನ ತುರಿ ಸೇರಿಸಿ. ಈಗ ಈ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
- ಹೀಗೆ ಮಿಕ್ಸ್ ಮಾಡುವಾಗ ನೀರು ಅಥವಾ ಹಾಲು ಸೇರಿಸಬೇಕಾಗಿಲ್ಲ, ಹಾಗೆಯೇ ಮಿಕ್ಸ್ ಮಾಡಬಹುದು.
- ಈ ಮಿಶ್ರಣ ಚೆನ್ನಾಗಿ ಮಿಕ್ಸ್ ಮಾಡಿ
- ಕೈಗೆ ಸ್ವಲ್ಪ ತುಪ್ಪ ಸವರಿ ನಿಂಬೆಹಣ್ಣು ಗಾತ್ರದ ಉಂಡೆ ಕಟ್ಟಿ. ನಂತರ ಅದರ ಮೇಲೆ ಒಂದೊಂದು ಬಾದಾಮಿ ಇಡಿ, ಇಷ್ಟು ಮಾಡಿದರೆ ಕೋವಾ ಸ್ವೀಟ್ಸ್ ರೆಡಿ.
ಇದನ್ನು ನೀವು ರೆಡಿ ಮಾಡಿ ಫ್ರಿಡ್ಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಇಟ್ಟು ಬಳಸಬಹುದು. ಇತರ ಯಾವುದೇ ಮೈದಾ, ಗೋಧಿ ಪುಡಿ ಅಂತ ಹಾಕಬೇಡಿ, ಬರೀ ಕೋವಾ ಮಾತ್ರ ಮಾತ್ರ, ಸ್ವೀಟ್ ತುಂಬಾ ಮೃದುವಾಗಿರುತ್ತದೆ.
ಈ ಸ್ವೀಟ್ಸ್ ಖಂಡಿತ ನಮಗೆ ಇಷ್ಟವಾಗಿರುತ್ತದೆ, ಈ ಬಗೆಯ ಸರಳ ರೆಸಿಪಿ ನಮ್ಮೊಂದಿಗೆ ಕಮೆಂಟಿನಲ್ಲಿ ಶೇರ್ ಮಾಡಿ.



Click it and Unblock the Notifications

