Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊಸರು ಸೇರಿಸಿ ಮಾಡುವ ಚಕ್ಕೂಲಿಯಿದು, ಒಂದು ಗಂಟೆಯಲ್ಲಿ ಹಬ್ಬಕ್ಕಿರುವ ಚಕ್ಕೂಲಿ ರೆಡಿ ಮಾಡಬಹುದು
ದೀಪಾವಳಿ ಸಮಯದಲ್ಲಿ ಮನೆಯಲ್ಲಿ ಹೆಣ್ಮಕ್ಕಳಿಗೆ ಕೆಲಸ ಜಾಸ್ತಿ ಇರುತ್ತದೆ, ಅದರಲ್ಲಿಯೂ ಅಮ್ಮಂದಿರಿಗೆ ಅಡುಗೆ ಮನೆಯಿಂದಹೊರಬರಲು ಪುರುಸೊತ್ತು ಸಿಗಲ್ಲ, ದೀಪಾವಳಿ ಹಬ್ಬವಲ್ಲ, ವಿವಿಧ ಬಗೆಯ ತಿಂಡಿ-ತಿನಿಸು ಮಾಡುತ್ತಾ ಅಡುಗೆ ಮನೆಯಲ್ಲಿಯೇ ಕಾಲ ಕಳೆದು ಹೋಗುತ್ತದೆ. ಅದರ ಬದಲಿಗೆ ತುಂಬಾ ಸ್ನ್ಯಾಕ್ಸ್ ತಿಂಡಿಗಳನ್ನು ಮೊದಲೇ ಮಾಡಿಟ್ಟರೆ ಈ ದಿನ ಆರಾಮವಾಗಿ ಇರಬಹುದು, ಮನೆ ಮಂದಿಯೆಲ್ಲಾ ನಿಮ್ಮ ಕೈರುಚಿ ಹೊಗಳುತ್ತಾ ತಿನ್ನುವಾಗ ನೀವು ಕೂಡ ಅವರ ಜೊತೆ ಕೂತು ಸವಿಯಬಹುದು.

ದೀಪಾವಳಿ ಹಬ್ಬಕ್ಕೆ ಸಿಹಿ ಮಾತ್ರವಲ್ಲ, ಖಾರ ತಿಂಡಿ, ಸ್ನ್ಯಾಕ್ಸ್ ಎಲ್ಲಾ ಮಾಡಲಾಗುವುದು, ಅದರಲ್ಲಿಯೂ ಕಜ್ಜಾಯ ಹಾಗೂ ಚಕ್ಕೂಲಿ ಇರುತ್ತದೆ. ಚಕ್ಕೂಲಿಯನ್ನು ಒಬ್ಬೊಬ್ಬರು ಒಂದೊಂದು ರುಚಿಯಲ್ಲಿ ಮಾಡುತ್ತಾರೆ, ಅದಕ್ಕೆ ಬಳಸುವ ಪದಾರ್ಥ ಸ್ವಲ್ಪ ಭಿನ್ನವಾದರೂ ಅದರ ರುಚಿ ಸಂಪೂರ್ಣ ಭಿನ್ನವಾಗುವುದು. ಚಕ್ಕೂಲಿ ಮಾಡಿಟ್ಟರೆ ತಿಂಗಳವರೆಗೆ ಇಟ್ಟು ಸವಿಯಬಹುದು, ಹಾಗಾಗಿ ಬಾಕಿಯುಳಿದರೆ ಎಲ್ಲಿ ಹಾಳಾಗುತ್ತೆ ಎಂಬ ಭಯವಿರಲ್ಲ, ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಪಾಯಸ, ಜೊತೆಗೆ ಎರಡು ಮೂರು ಬಗೆಯ ಆಹಾರವಷ್ಟೇ ಆ ದಿನ ಮಾಡುವಂತಿದ್ದರೆ ಒಳ್ಳೆಯದು, ಉಳಿದೆಲ್ಲಾ ತಿಂಡಿಗಳು ಮುಂಚಿತವಾಗಿ ಮಾಡಿಡಿ.
ಈ ಚಕ್ಕೂಲಿ ಸ್ವಲ್ಪ ಭಿನ್ನ ರುಚಿಯ ಚಕ್ಕೂಲಿ, ಇದರ ಟೇಸ್ಟ್ ಅಷ್ಟು ಸೂಪಪರ್ ಆಗಿರುತ್ತದೆ. ಮೊಸರು, ಬೆಣ್ಣೆ, ಹಾಲು ಈ ಮೂರು ಕಲೆಸಿ ಮಾಡುವ ಈ ಚಕ್ಕೂಲಿ ಹಿಟ್ಟು ಬಾಯಿಗೆ ಇಡುವಾಗ ಅದರ ಸ್ವಾದ ಮನಸ್ಸು ತಟ್ಟುತ್ತದೆ. ಎಲ್ಲಾ ಡಯಟ್ ಮರೆತು ತಿನ್ನಲಾರಂಭಿಸುತ್ತೇವೆ, ಅಷ್ಟೊಂದು ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿ
1 ಕಪ್ ಮೊಸರು
1 ಕಪ್ ಅಕ್ಕಿಹಿಟ್ಟು
1 ಅಥವಾ 2 ಚಮಚ ಖಾರದ ಪುಡಿ(ಖಾರ ಕಡಿಮೆ ಬಯಸುವುದಾದರೆ 1 ಚಮಚ ಹಾಕಿದರೆ
ಸಾಕು)
1/2 ಚಮಚ ಇಂಗು ಪುಡಿ
2 ಚಮಚ ರೋಸ್ಟ್ ಮಾಡಿದ ಎಳ್ಳು
1 ಚಮಚ ಉಪ್ಪು (ರುಚಿಗೆ ತಕ್ಕ ಉಪ್ಪು)
ಬೆಣ್ಣೆ 2 ಚಮಚ
ಹಾಲು ಅಥವಾ ನೀರು
1 ಕಪ್ ಎಣ್ಣೆ
ಮಾಡುವ ವಿಧಾನ
ಸ್ಟೆಪ್ 1
- ಈಗ ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಚಪಾತಿ ಹಿಟ್ಟಿಗೆ ಕೆಲಸಿದಂತೆ ಕಲೆಸಿ, ಆದರೆ ಚಪಾತಿ ಹಿಟ್ಟಿನಷ್ಟು ಗಟ್ಟಿ ಬೇಡ, ಚಕ್ಕೂಲಿ ಅಚ್ಚಿಗೆ
- ಹಾಕಿ ಒತ್ತಿದಾಗ ಸುಲಭವಾಗಿ ಬೀಳುವಂತಿರಬೇಕು.
ಸ್ಟೆಪ್ 2
- ಈಗ ನೀವು ಬಾಣಲೆ ಒಂದು ಕಪ್ ಎಣ್ಣೆ ಹಾಕಿ ಕಾಯಿಸಿ
- ಈಗ ಕಲೆಸಿದ ಮಿಶ್ರಣವನ್ನು ಚಕ್ಕೂಲಿ ಅಚ್ಚು ಒಳಗಡೆ ತುಂಬಿ ರೌಂಡ್ ರೌಂಡ್ ಆಗಿ ಬಿಡಿ ಅಥವಾ ಉದ್ದ-ಉದ್ದವಾಗಿ ಬಿಡಬಹುದು. ಚಕ್ಕೂಲಿ ಬಣ್ಣ ಬದಕಾಗುವಾಗ ಎಣ್ಣೆಯಿಂದ ತೆಗೆಯಿರಿ. ಇಷ್ಟು ಮಾಡಿದರೆ ಕುರುಂ ಕುರುಂ ಚಕ್ಕೂಲಿ ರೆಡಿ.
- ನೀವು ಮಾಡುವ ಸಾದಾ ಚಕ್ಕೂಲಿಗಿಂತ ಮೊಸರು ಹಾಕಿ ಮಾಡುವ ಚಕ್ಕೂಲಿ ರುಚಿ ಸೂಪರ್ ಆಗಿರುತ್ತದೆ. ಈ ಚಕ್ಕೂಲಿ ಮಾಡಿ ನೀವು ಬೇಕಾದರೆ ವಾರಗಟ್ಟಲೆ ಇಡಬಹುದು.
- ಸಲಹೆ:
- ನೀವು ಚಕ್ಕೂಲಿಯನ್ನು ತಿಂಗಳವರೆಗೆ ಬಳಸುವುದಾದರೆ ಹಾಲಿನ ಬದಲಿಗೆ ನೀರು ಹಾಕಿ ಕಲೆಸಿ.
- ಇದನ್ನು 1/ 2 ಚಮಚ ಜೀರಿಗೆ ಪುಡಿ ಸೇರಿಸಿದರೆ ರುಚಿ ಇನ್ನೂ ಭಿನ್ನವಾಗಿರುತ್ತದೆ.
- ಅಕ್ಕಿ ಹಿಟ್ಟು ತುಂಬಾ ನಣ್ಣನೆ ಇರಬಾರದು, ತರಿತರಿ ಕೂಡ ಇರಬಾರದು, ಆವಾಗ ಕರುಂ ಕುರುಂ ಅಂತ ಸವಿಯಬಹುದು.
- ಹಬ್ಬಕ್ಕೆ ಚಕ್ಕೂಲಿ ಮಾಡಲು ಸ್ವಲ್ಪವಾದರೆ ಅರ್ಧ ಗಂಟೆ, ಹೆಚ್ಚು ಮಾಡುವುದಾದರೆ ಒಂದು ಗಂಟೆ ಸಾಕಾಗುತ್ತೆ.
- ಇನ್ನು ಮೊಸರು ಹಾಗೂ ಅಕ್ಕಿಹಿಟ್ಟು ಸಮಪ್ರಮಾಣದಲ್ಲಿ ಸೇರಿಸಿ.



Click it and Unblock the Notifications
