Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಣಂತಿಯರ ಎದೆಹಾಲು ಹೆಚ್ಚಿಸುವ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ರೆಸಿಪಿ
ಚಟ್ನಿಪುಡಿಗಳಲ್ಲಿ ಸಾಕಷ್ಟು ವಿಧಗಳಿಗೆ. ಒಂದೊಂದು ಊರಿನಲ್ಲಿ ವಿಭಿನ್ನ ಶೈಲಿಯಲ್ಲಿ ಮತ್ತು ವಿಶಿಷ್ಟ ರುಚಿಯಲ್ಲಿ ತಯಾರಿಸುತ್ತಾರೆ. ನಾವು ಸೇವಿಸುವ ಆಹಾರ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳನ್ನು ಸಹ ಹೊಂದಿರುವುದು ಮುಖ್ಯವಾಗುತ್ತದೆ. ರುಚಿ ಬಾಯಿಯನ್ನು ತಣಿಸಿದರೆ ಆಹಾರದಲ್ಲಿನ ಅಂಶಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ನಾವು ಇಂದು ಎಲ್ಲರಿಗೂ ಇಷ್ಟವಾಗುವ ಹಾಗೂ ಪ್ರತ್ಯೇಕವಾಗಿ ಬಾಣಂತಿಯರಿಗೆ
ಹೇಳಿಮಾಡಿಸಿದ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ರೆಸಿಪಿಯನ್ನು ಮಾಡುವ ಬಗ್ಗೆ
ತಿಳಿಸಲಿದ್ದೇವೆ. ಈ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿಯ ಸೇವನೆಯಿಂದ ಬಾಣಂತಿಯರಿಗೆ
ಆರೋಗ್ಯಕರವಾದ ಹಾಗೂ ಎದೆಹಾಲಿನ ಪ್ರಮಾಣವು ಹೆಚ್ಚಾಗುತ್ತದೆ.
ಚಟ್ನಿಪುಡಿ ಮಾಡುವ ವಿಧಾನವನ್ನು ಮುಂದೆ ನೋಡೋಣ:
Recipe By: Meghashree Devaraju
Recipe Type: Sides
Serves: 20
-
ಬೇಕಾಗುವ ಪದಾರ್ಥಗಳು
ಸಬ್ಬಕ್ಕಿ ಸೊಪ್ಪು -3 ಕಪ್ ಸಣ್ಣಗೆ ಕತ್ತರಿಸಿದ್ದು
ಕಡಲೆಕಾಳು - 1ಕಪ್
ಉದ್ದಿನ ಬೇಳೆ - 1ಕಪ್
ಮೆಂತ್ಯ -ಅರ್ಧ ಚಮಚ
ಒಣಮೆಣಸಿನ ಕಾಯಿ - ಒಂದು ಕಪ್
ಕರಿಬೇವು -ಕಾಲು ಕಪ್
ಜೀರಿಗೆ - ಕಾಲು ಚಮಚ
ಹಿಂಗು - ಅರ್ಧ ಚಮಚ
ಬೆಲ್ಲ - ಒಂದು ಚಮಚ
ಬೆಳ್ಳುಳ್ಳಿ - ಎರಡು
ಉಪ್ಪು ರುಚಿಗೆ
-
ಮಾಡುವ ವಿಧಾನ
ಸಬ್ಬಕ್ಕಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಹೋಗುವಂತೆ ಒಂದು ಬಿಳಿ ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ
ಸಂಪೂರ್ಣ ನೀರಿನಂಶ ಹೋದ ಮೇಲೆ ಸಣ್ಣಗೆ ಹೆಚ್ಚಿಕೊಂಡು ಬಿಸಿ ಬಾಣಲೆಗೆ ಹಾಕಿ ಸೊಪ್ಪು ಸಂಪೂರ್ಣ ಒಣಗುವವರೆಗೂ ಬಾಡಿಸಿ (ಒಣಗಿನ ಎಲೆಯಂತೆ ಮುಟ್ಟಿದಾಕ್ಷಣ ಪುಡಿ ಆಗುವಂತಿರಬೇಕು)
ನಂತರ ಬಿಸಿ ಬಾಣಲೆಗೆ ಕಡಲೆಕಾಳು, ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಕನಿಷ್ಠ 15 ನಿಮಿಷ ಕಪ್ಪಾಗದಂತೆ ಬಿಸಿ ಮಾಡಿ.
ನಂತರ ಮೆಂತ್ಯ, ಕರಿಬೇವು, ಜೀರಿಗೆ, ಬೆಳ್ಳುಳ್ಳಿ ಹಾಗೂ ಒಂಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ಬಿಸಿ ಮಾಡಿ.
ಅನಂತರ ಬಿಸಿ ಮಾಡಿದ ಸೊಪ್ಪು, ಕಾಳು ಹಾಗೂ ಮಸಾಲೆ ಪದಾರ್ಥಗಳನ್ನು ಒಂದು ತಟ್ಟೆಯಲ್ಲಿ ಹರಡಿ ಅದಕ್ಕೆ ಉಪ್ಪು, ಹಿಂಗು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಅಂತಿಮವಾಗಿ ಎಲ್ಲವನ್ನು ಜಾರ್ಗೆ ಹಾಕಿ ಮಿಕ್ಸಿ ಮಾಡಿ.
ಈಗ ರುಚಿಕರ ಹಾಗೂ ಆರೋಗ್ಯಕರ ಸಬ್ಬಕ್ಕಿ ಸೊಪ್ಪಿನ ಚಟ್ನಿಪುಡಿ ಸವಿಯಲು ಸಿದ್ಧ.
ಇದನ್ನು ಬಿಸಿ ಅನ್ನ ತುಪ್ಪದ ಜತೆ, ದೋಸೆ, ರೊಟ್ಟಿಗಳ ಜತೆ ಸವಿಯಲು ರುಚಿಯಾಗಿರುತ್ತದೆ.
- ಬಾಣಂತಿಯರು ಬಿಸಿ ಅನ್ನದ ಜತೆ ತುಪ್ಪ ಹಾಗೂ ಚಟ್ನಿಪುಡಿಯನ್ನು ಸವಿದರೆ ಬಾಯಿಗೆ ರುಚಿಯು ಸಿಗುತ್ತದೆ ಹಾಗೂ ಎದೆಹಾಲಿನ ಪ್ರಮಾಣವು ಹೆಚ್ಚಾಗುತ್ತದೆ.
- ಕ್ಯಾಲೋರಿ - 4 ಗ್ರಾಂ
- ವಿಟಮಿನ್ ಸಿ - 8 ಗ್ರಾಂ
- ಫೋಲೆಟ್ - 3 ಗ್ರಾಂ



Click it and Unblock the Notifications
