Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್!
ಮಧುಮೇಹಿಗಳಿಗೆ ಬ್ರೇಕ್ಫಾಸ್ಟ್ ರೆಸಿಪಿ: ಈ ಓಟ್ಸ್ ಉಪ್ಪಿಟ್ಟು ಹೀಗೆ ಮಾಡಿದರೆ ತುಂಬಾ ರುಚಿ
ಮಧುಮೇಹಿಗಳಿಗೆ ಓಟ್ಸ್ ತಿನ್ನುವುದು ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಓಟ್ಸ್ ರುಚಿಯಿಲ್ಲ ಎಂದು ತುಂಬಾ ಜನರು ಬಯಸುತ್ತಾರೆ, ಆದರೆ ಓಟ್ಸ್ ಬಳಸಿ ನೀವು ರುಚಿಯಾದ ಉಪ್ಪಿಟ್ಟು ಮಾಡಬಹುದು, ಇಲ್ಲಿ ನಾವು ಓಟ್ಸ್ ಉಪ್ಪಿಟ್ಟು ರೆಸಿಪಿ ನೀಡಿದ್ದೇವೆ, ಟ್ರೈ ಮಾಡಿ, ಖಂಡಿತ ಇಷ್ಟವಾಗುವುದು.

ಬೇಕಾಗುವ ಸಾಮಗ್ರಿ
1ಕಪ್ ಓಟ್ಸ್
1ಕಪ್ ತರಕಾರಿ (ಬಟಾಣಿ, ಆಲೂಗಡ್ಡೆ, ಟೊಮೆಟೊ, ಬೀನ್ಸ್ ಹೀಗೆ ನಿಮಗೆ ಬೇಕಾದ
ತರಕಾರಿ ಬಳಸಬಹುದು)
ಈರುಳ್ಳಿ
3 ಹಸಿ ಮೆಣಸು
ಎಣ್ಣೆ 2 ಚಮಚ
1/2 ಚಮಚ ಸಾಸಿವೆಯೆಣ್ಣೆ
1 ಚಮಚ ಉದ್ದಿನ ಬೇಳೆ
2 ಚಮಚ ಕಡ್ಲೆಬೇಳೆ
ಕರಿಬೇವು
ಮಾಡುವ ವಿಧಾನ
- ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಈರುಳ್ಳಿ, ಹಸಿ ಮೆಣಸು ಹಾಕಿ, ಬಳಿಕ ತರಕಾರಿ 3-4 ನಿಮಿಷ ಫ್ರೈ ಮಾಡಿ.
- ಓಟ್ಸ್ ಹಾಕಿ ನಂತರ ಉಪ್ಪು, ಅರಿಶಿಣ ಪುಡಿ , 1/4 ಕಪ್ ನೀರು, ನಂತರ 2 ನಿಮಿಷ ಬೇಯಿಸಿ
- ನಂತರ ಮುಚ್ಚಳ ತೆಗೆದು ಮತ್ತೆ 2 ನಿಮಿಷ ಬೇಯಿಸಿ, ಹೀಗೆ ಬೇಯಿಸುವಾಗ ಆಗಾಗ ಸೌಟ್ನಿಂದ ಆಡಿಸಿ.
- ಓಟ್ಸ್ ಉಪ್ಪಿಟ್ಟು ಪುಡಿ, ಪುಡಿಯಾಗಿರಬೇಕು, ಅಂಟು-ಅಂಟಾಗಿ ಇರಬಾರದು.
ಓಟ್ಸ್ ಪ್ರಯೋಜನ
- ಓಟ್ಸ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಏಕೆಂದರೆ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ
- ಇದರಲ್ಲಿ ನಾರಿನಂಶ ಹೆಚ್ಚಿರಲಿದೆ ಹಾಗಾಗಿ ಇದು ನಿಧಾನಕ್ಕೆ ಜೀರ್ಣವಾಗುತ್ತದೆ.
- ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿಡಲು ಸಹಕಾರಿ.
- ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ
- ಜೀರ್ಣಕ್ರಿಯೆಗೆ ಸಹಕಾರಿ ಹಾಗಾಗಿ ಮಲಬದ್ಧತೆ ಸಮಸ್ಯೆಯೂ ಇರಲ್ಲ.
ಇತರ ಪ್ರಯೋಜನಗಳು
- ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಕಾರಿ
- ತ್ವಚೆ ಆರೋಗ್ಯಕ್ಕೆ ಒಳ್ಳೆಯದು
- ಕರುಳಿನ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ.
- ತೂಕ ನಿಯಂತ್ರಣಕ್ಕೆ ಸಹಕಾರಿ
ಓಟ್ಸ್ ತಿನ್ನುವಾಗ ಮಧುಮೇಹಿಗಳಿಗೆ ಈ ಅಂಶ ಗಮನಿಸಿದರೆ ತುಂಬಾ ಒಳ್ಳೆಯದು
- ಯಾವುದೇ ಆಹಾರದಲ್ಲಿ ಮಿತಿಯಲ್ಲಿ ಸೇವಿಸಬೇಕು, ಓಟ್ಸ್ ಕೂಡ ಮಿತಿಯಲ್ಲಿ ಸೇವಿಸಿ
- ಓಟ್ಸ್ ಜೊತೆಗೆ ಡ್ರೈ ಫ್ರೂಟ್ಸ್ ಸೇರಿಸಿ
- ಚಕ್ಕೆಪೌಡರ್ ಸೇರಿಸಿ
- ಜೇನು, ಬೆಲ್ಲ, ಸಕ್ಕರೆ ಸೇರಿಸಬೇಡಿ
- ನೀವು ಹಾಲಿನ ಬದಲಿಗೆ ಸೋಯಾ ಹಾಲು ಬಳಸಿ.
- ಓಟ್ಸ್ನಲ್ಲಿರುವ ಪೋಷಕಾಂಶಗಳು
- ಕ್ಯಾಲೋರಿ: 307
ನೀರಿನಂಶ: 8.7ಗ್ರಾಂ
ಪ್ರೊಟೀನ್ 10 ಗ್ರಾಂ
ಕಾರ್ಬ್ಸ್ 5 ಗ್ರಾಂ
ನಾರಿನಂಶ
ಕೊಬ್ಬಿನಂಶಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು
ಮ್ಯಾಂಗನೀಸ್
ರಂಜಕ
ಸತು
ವಿಟಮಿನ್ ಬಿ1
ಕಬ್ಬಿಣದಂಶ
ಸೆಲೆನಿಯಂ
ಮೆಗ್ನಿಷ್ಯಿಯಂ
ಓಟ್ಸ್ನಿಂದ ಏನಾದರು ಅಡ್ಡಪರಿಣಾಮವಿದೆಯೇ?
ಓಟ್ಸ್ ಸಾಮಾನ್ಯವಾಗಿ ಅಡ್ಡಪರಿಣಾಮ ಉಂಟು ಮಾಡಲ್ಲ, ಆದರೆ ಕೆಲವರಿಗೆ ಓಟ್ಸ್
ಅಲರ್ಜಿ ಕೂಡ ಆಗಬಹುದು
ಓಟ್ಸ್ ತಿಂದಾಗ ಈ ಲಕ್ಷಣಗಳು ಕಂಡು ಬಂದರೆ ನಿಮಗೆ ಅಲರ್ಜಿ ಇದೆ ಎಂದರ್ಥ
ತ್ವಚೆಯಲ್ಲಿ ತುರಿಕೆ
ಉಸಿರಾಟದಲ್ಲಿ ತೊಂದರೆ
ರಕ್ತದೊತ್ತಡ ಕಡಿಮೆಯಾಗುವುದು
ವಾಂತಿ
ಬೇಧಿ ತಲೆ ಸುತ್ತು
ತುರಿಕೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ,.



Click it and Unblock the Notifications
