Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯಲ್ಲೇ ತಯಾರಿಸಿ ಡಾಬಾ ಶೈಲಿಯ ದಾಲ್ ಫ್ರೈ
ಹೊಟೇಲ್ನಲ್ಲಿ ಮಾಡುವ ದಾಲ್ ಮನೆಯ ದಾಲ್ಗಿಂತ ಹೆಚ್ಚು ರುಚಿ ಇರುತ್ತೆ ಏಕೆ ಎಂದು ನಿಮಗೆ ಅನಿಸದೇ ಇರದು. ಇದಕ್ಕೆ ಇವರು ಬಳಸುವ ಪದಾರ್ಥ ಹಾಗೂ ಮಾಡುವ ಶೈಲಿಯೇ ಕಾರಣ. ಮುಂಚಿತವಾಗಿ ಬೇಯಿಸಿದ ದಾಲ್ಗಳನ್ನು ಸುವಾಸನೆ ಮತ್ತು ವಿನ್ಯಾಸವನ್ನು ಹೆಚ್ಚಿಸಲು ಮಾತ್ರ ಬಿಸಿ ಒಗ್ಗರಣೆ ಮಾಡುತ್ತಾರೆ. ಗ್ರಾಹಕರ ರುಚಿಗೆ ಅನುಗುಣವಾಗಿ ಒಗ್ಗರಣೆಗೆ ಮಸಾಲೆ ಹಾಕುತ್ತಾರೆ.

ದಾಲ್ ತಡ್ಕಾ ಮಾಡುವ ವಿಧಾನ ಹೇಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:
Recipe By: Meghashree Devaraju
Recipe Type: Veg
Serves: 4
-
ಬೇಕಾಗುವ ಪದಾರ್ಥಗಳು
ಕಡಲೇಬೇಳೆ 1/4 ಕಪ್
ತೊಗರಿ ಬೇಳೆ 1/4 ಕಪ್
ಮಸೂರ್ ದಾಲ್ 1/4 ಕಪ್
ಹೆಸರು ಬೇಳೆ 1/4 ಕಪ್
ಉದ್ದಿನ ಬೇಳೆ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ 1/4 ಕಪ್
ಜೀರಿಗೆ 1 ಚಮಚ
ತುಪ್ಪ 1 ಚಮಚ
ಒಣ ಕೆಂಪು ಮೆಣಸಿನಕಾಯಿ 1
ಈರುಳ್ಳಿ 1 ಕಪ್
ಬೆಳ್ಳುಳ್ಳಿ 4
ಶುಂಠಿ 1/4 ಚಮಚ
ಹಸಿರು ಮೆಣಸಿನಕಾಯಿ 2
ಟೊಮೆಟೊ 1 ಕಪ್
ಕಸೂರಿ ಮೇತಿ 1/2 ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಅರಿಶಿನ ಪುಡಿ 1/2 ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಚಮಚ
ನಿಂಬೆ ಹಣ್ಣು ಅರ್ಧ
-
ತಯಾರಿಸುವ ವಿಧಾನ
* ಎಲ್ಲಾ ಬೇಳೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಒಂದೆರಡು ಬಾರಿ ಶುದ್ಧ ನೀರಿನಿಂದ ತೊಳೆದು, ಅರ್ಧ ಗಂಟೆ ನೆನೆಸಿಡಿ.
* ಪ್ರೆಶರ್ ಕುಕ್ಕರ್ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ ಮುಚ್ಚಳವಿಲ್ಲದೆ ಒಲೆಯ ಮೇಲೆ ಇಡಿ, ಮೊದಲ ಕುದಿಯ ನಂತರ ಮುಚ್ಚಳವನ್ನು ಹಾಕಿ.3-5 ಸೀಟಿಗಳಿಗೆ ಬೇಯಿಸಿ.
* ಪ್ರೆಶರ್ ಕುಕ್ಕರ್ ನೈಸರ್ಗಿಕವಾಗಿ ತಣ್ಣಗಾಗಲು ಬಿಡಿ ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ.
* ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು ಮತ್ತು ಈರುಳ್ಳಿ ಸೇರಿಸಿ.
* ಈರುಳ್ಳಿ ಗುಲಾಬಿ ಬಣ್ಣಕ್ಕೆ ಬರಲು ಪ್ರಾರಂಭಿಸಿದ ನಂತರ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ.
* ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ, ನಂತರ ಕೆಂಪು ಮೆಣಸಿನ ಪುಡಿ ಸೇರಿಸಿ.
* ಮಸಾಲೆ ಸುಡದಂತೆ ಎಚ್ಚರಿಕೆಯಿಂದ, ಕಸೂರಿ ಮೇತಿಯನ್ನು ನಿಮ್ಮ ಅಂಗೈಗಳ ನಡುವೆ ಉಜ್ಜಿ ಮಸಾಲಾ ಮಿಶ್ರಣದಲ್ಲಿ ಸೇರಿಸಿ.
* ಎಣ್ಣೆಯು ಮಸಾಲೆಯನ್ನು ಬೇರ್ಪಡಿಸಿದ ನಂತರ, ಬೇಯಿಸಿದ ದಾಲ್ ಸೇರಿಸಿ ಮತ್ತು ಸ್ಥಿರತೆಯನ್ನು ಪರಿಶೀಲಿಸಿ, ಅದು ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಿ.
* ಉಪ್ಪು ಸೇರಿಸಿ ಕುದಿಸಿ, ಉರಿ ಕಡಿಮೆ ಮಾಡಿ ಮತ್ತು 10-12 ನಿಮಿಷಗಳ ಕಾಲ ಕುದಿಸಲು ಬಿಡಿ.
* ಈಗ ಬೇಯಿಸಿದ ದಾಲ್ ತಡ್ಕಾಗೆ ನಿಂಬೆ ರಸವನ್ನು ಹಿಸುಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅಂತಿಮ ಹಂತದಲ್ಲಿ ತುಪ್ಪ ಹಾಕಿ.
ಬಿಸಿಬಿಸಿ ದಾಲ್ ತಡ್ಕಾ ಅನ್ನು ಜೀರಾ ರೈಸ್, ರೊಟ್ಟಿ ಅಥವಾ ನಾನ್ ಜತೆ ಸಲಾಡ್ನೊಂದಿಗೆ ಬಡಿಸಿ.
- ದಾಲ್ಗಳ ಆಯ್ಕೆಯನ್ನು ನಮ್ಮ ರುಚಿಗೆ ಅನುಗುಣವಾಗಿ ಬದಲಿಸಬಹುದು. ಆದಷ್ಟು ಸಿಪ್ಪೆ ಇಲ್ಲದೆ ಹಳದಿ ಬಣ್ಣದ ಬೇಳೆಗಳನ್ನು ಬಳಸಿ. ಅಲ್ಲದೇ ನಿಮಗೆ ಇಷ್ಟವಾದ ತರಕಾರಿಗಳನ್ನು ಸಹ ಒಗ್ಗರಣೆ ವೇಳೆ ಬಳಸಬಹುದು.
- ಕ್ಯಾಲೋರಿಗಳು - 636.20
- ಕೊಬ್ಬು - (ಗ್ರಾಂ) 15.94
- ಪ್ರೋಟೀನ್ - (ಗ್ರಾಂ) 24.18
- ಕಾರ್ಬ್ಸ - (ಗ್ರಾಂ) 99.73
- ಸಕ್ಕರೆ - (ಗ್ರಾಂ) 60.86
- ಫೈಬರ್ - (ಗ್ರಾಂ) 8.93



Click it and Unblock the Notifications