Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಸೆಲೆಬ್ರೇಷನ್ನಲ್ಲಿ ಇಷ್ಟ ಭಕ್ಷ್ಯ ಆನಂದಿಸಿ, ನಂತರ ಈ ರೀತಿ ದೇಹವನ್ನು ಡಿಟಾಕ್ಸ್ ಮಾಡಿ
ಹಬ್ಬಗಳು, ಬರ್ತ್ಡೇ ಪಾರ್ಟಿಗಳು, ಮದುವೆ ಸಮಾರಂಭಗಳು, ನ್ಯೂ ಇಯರ್ ಪಾರ್ಟಿಗಳಿಗೆ ಹೋದಾಗ ನಾನು ಡಯಟ್ ಮಾಡುತ್ತಿದ್ದೇನೆ, ನನಗೆ ಅದು ಬೇಡ- ಇದು ಬೇಡ ಎಂದು ಎಂದು ಕೂತರೆ ನೀವು ಸೆಲೆಬ್ರೇಷನ್ ಮೂಡ್ ಕಳೆದುಕೊಳ್ಳುತ್ತೀರಿ.

ಇಂಥ ಸ್ಪೆಷಲ್ ದಿನಗಳಲ್ಲಿ ಡಯಟ್, ತೂಕ ಇಳಿಕೆ ಇದರ ಬಗ್ಗೆ ಏನೂ ಯೋಚಿಸಬೇಡಿ, ನಿಮ್ಮ ಇಷ್ಟಭಕ್ಷ್ಯವನ್ನು ಸವಿಯಿರಿ. ಅದಾದ ಬಳಿಕ ಡಿಟಾಕ್ಸ್ ಮಾಡಿದರೆ ಅಯ್ತು ನಿಮ್ಮ ದೇಹ ತೂಕ ಹೆಚ್ಚುವುದಿಲ್ಲ, ಮನಸ್ಸು-ದೇಹ ಉಲ್ಲಾಸವಾಗಿರುತ್ತದೆ. ದೇಹವನ್ನು ಡಿಟಾಕ್ಸ್ ಮಾಡಲು ಈ ಆಹಾರಗಳನ್ನು ಸೇವಿಸಿ.

ಬ್ಲೂ ಬೆರ್ರಿಯೊಂದಿಗೆ ಚಿಯಾ ಪುಡ್ಡಿಂಗ್
2 ಕಪ್ ಬ್ಲೂ ಬೆರ್ರಿ
1 ಕಪ್ ಚಿಯಾ ಬೀಜಗಳು
4 ಕಪ್ ಬಾದಾಮಿ ಹಾಲು
1 ಚಮಚ ವೆನಿಲ್ಲಾ ರಸ
1 ಚಮಚ ಚಕ್ಕೆ
2 ಚಮಚ ಜೇನು
ಬ್ಲೂ ಬೆರ್ರಿಯನ್ನು ಬಾದಾಮಿ ಹಾಲಿನ ಜೊತೆ ಹಾಕಿ ಬ್ಲೆಂಡ್ ಮಾಡಿ, ಅದಕ್ಕೆ ಚಿಯಾ
ಬೀಜಗಳು, ಚಕ್ಕೆ, ವೆನಿಲ್ಲಾ ರಸ ಹಾಕಿ ಮಿಕ್ಸ್ ಮಾಡಿ 15 ಇಟ್ಟು ನಂತರ ಮತ್ತೊಮ್ಮೆ
ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿ ಒಂದು ರಾತ್ರಿ ಇಟ್ಟು ಅದಬ್ಬು ಬ್ಲೂ ಬೆರ್ರಿ
ಜೊತೆ ಸರ್ವ್ ಮಾಡಿ.

ಗ್ರೀನ್ ಡಿಟಾಕ್ಸ್ ಜ್ಯೂಸ್
11/4 ಕಪ್ ಪಾಲಾಕ್
11/4 ಕಪ್ ಬೆರ್ರಿ ಹಣ್ಣು
2 ಮೀಡಿಯಂ ಸೆಲರಿ
ಚಿಟಿಕೆಯಷ್ಟು ಉಪ್ಪು
1 ಕಪ್ ಕಿತ್ತಳೆ ಜ್ಯೂಸ್
ಸ್ವಲ್ಪ ಪುದೀನಾ
ಇವುಗಳನ್ನು ಗ್ರೈಂಡ್ ಮಾಡಿ ಕುಡಿಯಿರಿ.

ಟೊಮೆಟೊ ಸಲಾಡ್
3-4 ಟೊಮೆಟೊ
2 ಈರುಳ್ಳಿ
4-5 ಎಸಳು ಬೆಳ್ಳುಳ್ಳಿ
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ
2 ಚಮಚ ಆಲೀವ್ ಎಣ್ಣೆ
ಪ್ಯಾನ್ಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಬೆಳ್ಳುಳ್ಳಿ ಹಾಗೂ ಇರುಳ್ಳಿ ಹಾಕಿ ಸ್ವಲ್ಪ ಬಿಸಿ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಟೊಮೆಟೊ ಕತ್ತರಿಸಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಕಾಳು ಮೆಣಸಿನ ಪುಡಿ ಉದುರಿಸಿ, ಆಲೀವ್ ಆಯಿಲ್ ಸೇರಿಸಿ ಮಿಕ್ಸ್ ಮಾಡಿ ಸವಿಯಿರಿ.

ಬ್ರೊಕೋಲಿ ಸೂಪ್
1 ಬ್ರೊಕೋಲಿ
2 ಸೆಲರಿ
1/2 ಚಮಚ ವೈಟ್ ಪೆಪ್ಪರ್ ಪೌಡರ್
8 ಕಪ್ ನೀರು
2 ಚಮಚ ಬಾದಾಮಿ
ರುಚಿಗೆ ತಕ್ಕ ಉಪ್ಪು
2 ಈರುಳ್ಳಿ
8 ಎಸಳು ಬೆಳ್ಳುಳ್ಳಿ
2 ಕಪ್ ಮಂದವಾದ ಹಾಲು
ಮಾಡುವ ವಿಧಾನ
* ಪ್ಯಾನ್ ಬಿಸಿ ಮಾಡಿ ಅದರಲ್ಲಿ ಬಾದಾಮಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ,
ನಂತರ ಅದನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ.
* ಈಗ ಪ್ಯಾನ್ಗೆ ನೀರು ಹಾಕಿ ಕುದಿಸಿ, ಅದಕ್ಕೆ ಕತ್ತರಿಸಿಟ್ಟ ತರಕಾರಿಗಳನ್ನು
ಹಾಕಿ. ತರಕಾರಿ ಬೆಂದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಮ್ಯಾಶ್ ಮಾಡಿ. ಈಗ
ಹಾಲು ಹಾಕಿ ಮಿಕ್ಸ್ ಮಾಡಿ ಮತ್ತೆ ಕುದಿಸಿ. ರೆಡಿಯಾದಾಗ ಕತ್ತರಿಸಿಟ್ಟ ಬಾದಾಮಿ,
ವೈಟ್ ಪೆಪ್ಪರ್ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಸರ್ವ್ ಮಾಡಿ.

ಓಟ್ ಮೀಲ್
ಬೇಕಾಗುವ ಸಾಮಗ್ರಿ
1 ಕಪ್ ಓಟ್ಸ್
2 ಚಮಚ ಬ್ಲೂ ಬೆರ್ರಿ
ರುಚಿಗೆ ತಕ್ಕ ಉಪ್ಪು
2 ಚಮಚ ಕ್ರ್ಯಾನ್ ಬೆರ್ರಿ (ಒಣಗಿದ್ದು)
2 ಚಮಚ ವಾಲ್ನಟ್
ಮಾಡುವ ಸಾಮಗ್ರಿ
ಈ ಎಲ್ಲಾ ಸಾಮಗ್ರಿ ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಓಟ್ಸ್ ಬೆಂದು
ಕ್ರೀಮ್ ರೀತಿ ಆಗುವಷ್ಟು ಬೇಯಿಸಿ ನಂತರ ಬಿಸಿ-ಬಿಸಿಯಾಗಿ ಸರ್ವ್ ಮಾಡಿ.



Click it and Unblock the Notifications
