Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೀಪಾವಳಿ ರೆಸಿಪಿ: ಸುಲಭವಾಗಿ ಮಾಡಿ ಕಡ್ಲೆಬೇಳೆ ಲಡ್ಡು
ದೀಪಗಳ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿಯಲ್ಲಿ ಪಟಾಕಿ ಎಷ್ಟು ಮುಖ್ಯವೋ ಹಾಗೆ ಸಿಹಿ ಕೂಡ ಅಷ್ಟೇ ಮುಖ್ಯ. ಎಲ್ಲರ ಮನೆಯಲ್ಲೂ ದೀಪಾವಳಿಗೆ ರುಚಿ ರುಚಿಯಾದ ಸಿಹಿಯನ್ನು ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ಸಿಹಿ ಅಂದ ಕೂಡಲೇ ಬಾಯಲ್ಲಿ ನೀರು ಬರಬಹುದು. ಅಲ್ಲದೆ ನಿಮ್ಮ ದೀಪಾವಳಿಯ ತಯಾರಿಯ ನಡುವೆಯೂ ಬಹು ಬೇಗ ಮಾಡಿ ಮುಗಿಸಬಹುದಾದ ತಿಂಡಿಯೊಂದನ್ನು ನಾವಿಂದು ಹೇಳಲಿದ್ದೇವೆ.
ನೀವು ದೀಪಾವಳಿಯ ತಯಾರಿಯಲ್ಲಿದ್ದರೆ ಈ ನಡುವೆಯೇ ಸಿಹಿ ಮಾಡುವುದು ಕೂಡ ಒಂದು ಕೆಲಸ ಆಗಿರಲಿದೆ. ಆದ್ರೆ ನಾವಿಂದು ಸುಲಭವಾಗಿ ದೀಪಾವಳಿಗೆ ಸವಿಯಲು ರುಚಿ ರುಚಿಯ ಲಡ್ಡು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹೌದು ಹಬ್ಬದ ಗಡಿಬಿಡಿಯಲ್ಲಿ ಹಲವು ರೀತಿಯ ಕೆಲಸದ ನಡುವೆ ಸಿಹಿ ಕೂಡ ಮಾಡಬೇಕಾಗುತ್ತದೆ.

ಹೀಗಾಗಿ ನಾವಿಂದು ಸುಲಭವಾಗಿ ಮಾಡಿ ಮುಗಿಸಬಹುದಾದ ರುಚಿ ರುಚಿಯ ಕಡ್ಲೆ ಬೇಳೆಯ ಲಡ್ಡು ಕುರಿಯಾಗಿ ತಿಳಿದುಕೊಳ್ಳೋಣ. ನೀವು ಸಹ ಹಬ್ಬಕ್ಕೆ ಹಲವು ಬಗೆಯ ಲಡ್ಡು ಮಾಡುವ ಆಲೋಚನೆಯಲ್ಲಿರಬಹುದು. ನಾವಿಂದು ಈ ಕಡ್ಲೆ ಬೇಳೆಯ ಲಡ್ಡು ಮಾಡುವ ಕುರಿತು ತಿಳಿದುಕೊಳ್ಳೋಣ. ಕಡ್ಲೆ ಬೇಳೆಯಲ್ಲಿ ಮಾಡುವ ಹಲವು ಸಿಹಿಯ ನಡುವೆ ಈ ಲಡ್ಡು ರುಚಿ ಹೆಚ್ಚಿಸಲಿದೆ.
ಹಾಗಾದ್ರೆ ಹಬ್ಬಕ್ಕೆ ಈ ಕಡ್ಲೆ ಬೇಳೆ ಲಡ್ಡು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ಕಡ್ಲೆ ಬೇಳೆ ಲಡ್ಡು ಮಾಡಲು ಬೇಕಾಗುವ ವಸ್ತುಗಳು
ಕಡ್ಲೆ ಬೇಳೆ
ಸಕ್ಕರೆ
ಏಲಕ್ಕಿ ಪುಡಿ
ಹಳದಿ ಕಲರ್
ತುಪ್ಪ
ಗೋಡಂಬಿ
ಒಣ ದ್ರಾಕ್ಷಿ
ಅಡುಗೆ ಎಣ್ಣೆ
ಕಡ್ಲೆ ಬೇಳೆ ಲಡ್ಡು ಮಾಡುವುದು ಹೇಗೆ?
ಮೊದಲಿಗೆ ಕಡ್ಲೆ ಬೇಳೆಯನ್ನು ಬೌಲ್ಗೆ ಹಾಕಿ ತೊಳೆದುಕೊಳ್ಳಿ. ಅಳತೆ ಕಪ್ನಲ್ಲಿ 1 ಕಪ್ ಬೇಳೆಯನ್ನು 1 ಗಂಟೆ ನೆನೆಸಿಡಿ. ಈಗ ಮಿಕ್ಸಿ ಜಾರ್ಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಎಣ್ಣೆಗೆ ಈ ಕಡಲೆ ಹಿಟ್ಟನ್ನು ಬಿಡಬೇಕು. ಕೈಯಲ್ಲಿ ಒಂದೊಂದು ಸಣ್ಣ ಉಂಡೆ ಮಾಡಿ ಎಣ್ಣೆಗೆ ಬಿಟ್ಟು ಕರಿದುಕೊಳ್ಳಬೇಕು. ಪಕೋಡ ಹಾಕಿದಂತೆ ಹಾಕಿಕೊಂಡು ಹುರಿದುಕೊಳ್ಳಬೇಕು. ಪೂರ್ಣವಾಗಿ ಕರಿಯಬೇಡಿ. ಇದು ಮೃದುವಾಗಿ ಇರಬೇಕು.
ಈಗ ತೆಗೆದು ತಣ್ಣಗಾಗಲು ಬಿಡಿ. ಅನಂತರ ಮಿಕ್ಸಿ ಜಾರ್ಗೆ ಹಾಕಿಕೊಂಡು ತರಿ ತರಿಯಾಗು ಪುಡಿ ಮಾಡಿಕೊಳ್ಳಬೇಕು. ಇದು ಬೂಂದಿ ಕಾಳಿನ ರೀತಿ ಪುಡಿ ಪುಡಿಯಾಗಿ ಬರಲಿದೆ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಗೆ 1 ಕಪ್ ನೀರು ಹಾಕಿಕೊಂಡು ಕರಗಲು ಬಿಡಿ. ಈಗ ಇದಕ್ಕೆ ಏಲಕ್ಕಿ ಪುಡಿ, ಹಳದಿ ಕಲರ್ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ.
ಇದು ಪಾಕ ಆಗುವ ಅವಶ್ಯಕತೆ ಇಲ್ಲ, ಸಕ್ಕರೆ ಕರಗಿ ಅಂಟು ಅಂಟಾದರೆ ಸಾಕು. ಈಗ ಇದಕ್ಕೆ ಪುಡಿ ಮಾಡಿಕೊಂಡಿದ್ದ ಕಡಲೆ ಬೇಳೆಯನ ಪುಡಿ ಹಾಕಿಕೊಳ್ಳಿ. ನಿಧಾನಕ್ಕೆ ಮಿಕ್ಸ್ ಮಾಡಿಕೊಳ್ಳಿ. ಪಾಕ ಚೆನ್ನಾಗಿ ಹಿಡಿಯಬೇಕು, 2 ನಿಮಿಷ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
2 ನಿಮಿಷ ತಣ್ಣಗಾಗಲು ಬಿಟ್ಟು ಈಗ ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಹುರಿದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿ ಲಡ್ಡು ಕಟ್ಟಿಕೊಳ್ಳಿ. ನಿಂಬೆ ಗಾತ್ರದಂತೆ ಕಟ್ಟಿಕೊಂಡು ಸವಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ಕಡಲೆ ಬೇಳೆ ಲಡ್ಡು ರೆಡಿಯಾಗುತ್ತದೆ.



Click it and Unblock the Notifications
