Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿ ಸ್ಪೆಷಲ್ ರೆಸಿಪಿ: ಬುಲುಶಾಹಿ ಸ್ವೀಟ್ಸ್ ಮಾಡುವುದು ಬಲು ಸುಲಭ
ದೀಪಾವಳಿ ಸಡಗರ ಕಳೆಗಟ್ಟಿದೆ. ದೀಪಾವಳಿಗೆ ಎಷ್ಟು ಬಗೆಯ ಸ್ವೀಟ್ಸ್ ಮಾಡಿದರು ಸಾಕೆನಿಸುವುದಿಲ್ಲ. ತುಂಬಾ ಬಗೆಯ ಸ್ವೀಟ್ಸ್ ಇದ್ದರೆ ಹಬ್ಬಕ್ಕೊಂದು ಕಳೆ. ಅಲ್ಲದೆ ಹಬ್ಬದ ಸಮಯದಲ್ಲಿ ತುಂಬಾ ನೆಂಟರಿಷ್ಟರು ಬರುತ್ತಾರೆ, ಅವರಿಗೆಲ್ಲಾ ನೀಡಲು ತುಂಬಾ ಸ್ವೀಟ್ಸ್ ಬೇಕು. ಬೇಕರಿಯಲ್ಲಿ ಕೊಂಡು ತರುವುದಕ್ಕಿಂತ ನಾವೇ ಸ್ವೀಟ್ಸ್ ಮಾಡಿದರೆ ಹಬ್ಬದ ಅಡುಗೆ ಅನಿಸುವುದು ಅಲ್ವಾ? ಈ ದೀಪಾವಳಿ ನೀವು ಮಾಡುವ ಸಿಹಿ ಅಡುಗೆಗಳ ಲಿಸ್ಟ್‌ನಲ್ಲಿ ಬಲುಸಾಹಿ ರೆಸಿಪಿ ಸೇರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭವಾಗಿದ್ದು ರುಚಿಯೂ ಸೂಪರ್ ಆಗಿರುತ್ತೆ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: sweets
Serves: 10
-
ಬೇಕಾಗುವ ಸಾಮಗ್ರಿ
ಮೈದಾ 4 ಕಪ್
ತುಪ್ಪ 3/4 ಕಪ್
ಬೇಕಿಂಗ್ ಸೋಡಾ 1/2 ಚಮಚ
ಮೊಸರು 1/2 ಚಮಚ
ಸಕ್ಕರೆ 3 ಕಪ್
ನೀರು 6 ಕಪ್
ಡೀಪ್ ಫ್ರೈಗೆ ಎಣ್ಣೆ
ಸ್ವಲ್ಪ ಪಿಸ್ತಾ
-
ಬೇಕಾಗುವ ಸಾಮಗ್ರಿ
* ಮೈದಾ, ತುಪ್ಪ, ಅಡುಗೆ ಸೋಡಾ, ಮೊಸರು , ಬಿಸಿ ನೀರು ಹಾಕಿ ಚೆನ್ನಾಗಿ ಕಲೆಸಿ.
* ಮಿಶ್ರಣವನ್ನು ತುಂಬಾ ಚೆನ್ನಾಗಿ ಕಲೆಸಬೇಡಿ, ನಂತರ 20 ನಿಮಿಷ ಇಡಿ.
* ಸಕ್ಕರೆ ಪಾಕ ತಯಾರಿಸಿ ಇಡಿ.
* ಈಗ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ.
* ಈಗ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ನಿಂಬೆ ಹಣ್ಣು ಗಾತ್ರದಲ್ಲಿ ಉಂಡೆ ಕಟ್ಟಿ ಮೆಲ್ಲನೆ ತಟ್ಟಿ ಮಧ್ಯದಲ್ಲಿ ರಂಧ್ರ ಮಾಡಿ ಎಣ್ಣೆಗೆ ಬಿಡಿ. ಈ ರೀತಿ ಪ್ರತೀ ಉಂಡೆಯನ್ನು ತಟ್ಟಿ ಮಧ್ಯದಲ್ಲಿ ರಂಧ್ರ ಮಾಡಿ ಎಣ್ಣೆಯಲ್ಲಿ ಕರಿಯಿರಿ.
* ಈಗ ಕರಿದ ತಿಂಡಿಗಳನ್ನು ಮಂದವಾದ ಸಕ್ಕರೆ ಪಾಕದಲ್ಲಿ ಸ್ವಲ್ಪ ಹೊತ್ತು ಹಾಕಿಡಿ.
* ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿ ಅದರ ಮೇಲೆ ಸ್ವಲ್ಪ ಪಿಸ್ತಾ ಚೂರುಗಳು ಹಾಗೂ ಒಣ ರೋಸ್ ದಳಗಳನ್ನು ಉದುರಿಸಿದರೆ ಬಲುಶಾಹಿ ಸ್ವೀಟ್ಸ್ ರೆಡಿ.
- ಸಲಹೆ: ಬಲುಶಾಹಿ ಮೊಸರನ್ನು ಸೇರಿಸುವ ಮುನ್ನ ಚೆನ್ನಾಗಿ ಕದಡಬೇಕು. ಇದರಿಂದ ಬಲುಶಾಹಿ ಒಳಗಡೆ ತುಂಬಾ ಮೃದು- ಮೃದುವಾಗಿರುತ್ತೆ.



Click it and Unblock the Notifications
