Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸೆಲೆಬ್ರಿಟಿ ಸ್ಪೆಷಲ್! ದರ್ಶನ್ ವಿಜಯಲಕ್ಷ್ಮಿ ಇಷ್ಟಪಟ್ಟ ಮ್ಯಾಂಗೋ ಸ್ಟಿಕ್ಕಿ ರೈಸ್.. ಮನೆಯಲ್ಲೇ ಮಾಡೋದು ಹೇಗೆ?
ನಟ ದರ್ಶನ್ ಇತ್ತೀಚೆಗೆ ಥಾಯ್ಲೆಂಡ್ಗೆ ತೆರಳಿದ್ದರು. ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಹ ಹೋಗಿದ್ದರು. ಶೂಟಿಂಗ್ ಜೊತೆ ಜೊತೆಗೆ ನಟ ದರ್ಶನ್ ಥಾಯ್ಲೆಂಡ್ನಲ್ಲಿ ಕುಟುಂಬದ ಜೊತೆ ರಿಲ್ಯಾಕ್ಸ್ ಮೂಡ್ಗೆ ಹೋಗಿದ್ದಾರೆ. ಈ ವೇಳೆ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಥಾಯ್ಲೆಂಡ್ನ ಸ್ಪೆಷಲ್ ಮ್ಯಾಂಗೋ ಸ್ಟಿಕ್ಕಿ ರೈಸ್ (Mango Sticky Rice) ಸವಿದಿದ್ದಾರೆ. ಈ ಫೋಟೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಸ್ಟಾ ಸ್ಟೋರೀಸ್ನಲ್ಲಿ ಹಾಕಿದ್ದರು. ಇದು ಡಿ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಾವಿಂದು ಈ ವಿಶೇಷ ಸಿಹಿ ತಿನಿಸು ಏನು? ಮತ್ತು ಅದನ್ನು ಮನೆಯಲ್ಲೇ ಹೇಗೆ ಮಾಡಬಹುದು ಎಂದು ತಿಳಿಸಿಕೊಡಲಿದ್ದೇವೆ.
ಥಾಯ್ಲೆಂಡ್ನ ಸಿಹಿ ತಿನಿಸುಗಳ ಬಗ್ಗೆ ಹೇಳುವಾಗ, ಮ್ಯಾಂಗೋ ಸ್ಟಿಕ್ಕಿ ರೈಸ್ ಅನ್ನು ಮರೆಯುವಂತಿಲ್ಲ. ಇದು ಮಾವು, ಸಿಹಿ ಅಕ್ಕಿ ಮತ್ತು ತೆಂಗಿನ ಹಾಲಿನ ಸಮ್ಮಿಲನದಿಂದ ತಯಾರಿಸುವ ಒಂದು ಬೊಂಬಾಟ್ ಸಿಹಿ ಖಾದ್ಯ. ಇದರ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಇದನ್ನು ತಯಾರಿಸುವುದು ಕಷ್ಟ ಎನಿಸಿಬಹುದು. ಈ ಟ್ರಿಕ್ಬಳಸಿದರೆ, ಇದು ತುಂಬಾ ಸುಲಭ. ಹಾಗಿದ್ರೆ, ಮನೆಯಲ್ಲೇ ಥಾಯ್ಲೆಂಡ್ನ ಈ ಜನಪ್ರಿಯ ಸಿಹಿ ತಿನಿಸನ್ನು ಹೇಗೆ ತಯಾರಿಸಬೇಕು ಎಂದು ನೋಡೋಣ ಬನ್ನಿ.

ಮ್ಯಾಂಗೋ ಸ್ಟಿಕ್ಕಿ ರೈಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮಾವು - 2 ಹಣ್ಣಾದ ಮಾವು
• ಅಕ್ಕಿ - 1 ಕಪ್ (ಸ್ಟಿಕಿ ರೈಸ್ / ಗ್ಲುಟಿನಸ್ ರೈಸ್)
• ತೆಂಗಿನ ಹಾಲು - 2 ಕಪ್ ಕಪ್
• ಸಕ್ಕರೆ - 1/2 ಕಪ್ (ಅಥವಾ ರುಚಿಗೆ ತಕ್ಕಷ್ಟು)
• ಉಪ್ಪು - 1/4 ಚಮಚ
• ಬಾದಾಮಿ -ಸ್ವಲ್ಪ (ಅಲಂಕಾರಕ್ಕೆ)
• ಕಪ್ಪು ಎಳ್ಳು ಅಥವಾ ಹುರಿದ ಹೆಸರು ಬೇಳೆ - ಸ್ವಲ್ಪ (ಅಲಂಕಾರಕ್ಕೆ)
ಮ್ಯಾಂಗೋ ಸ್ಟಿಕ್ಕಿ ರೈಸ್ ಮಾಡುವ ವಿಧಾನ
ಮೊದಲಿಗೆ ಅಕ್ಕಿ ನೆನೆಸಬೇಕು. ಅಕ್ಕಿಯನ್ನು ಚೆನ್ನಾಗಿ 4 ಬಾರಿ ನೀರಿನಲ್ಲಿ ತೊಳೆಯಿರಿ. ನೀರು ಸ್ಪಷ್ಟವಾಗುವವರೆಗೆ ತೊಳೆಯಿರಿ. ನಂತರ ಶುದ್ಧ ನೀರಿನಲ್ಲಿ ಕನಿಷ್ಠ 4 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ಇದು ಅಕ್ಕಿ ಸರಿಯಾಗಿ ಬೇಯಲು ಸಹಾಯ ಮಾಡುತ್ತದೆ. ಈಗ ನೆನೆಸಿದ ಅಕ್ಕಿಯನ್ನು ನೀರು ಬಸಿದು, ಒಂದು ಸ್ಟೀಮರ್ನಲ್ಲಿ ಅಥವಾ ತೆಳುವಾದ ಹತ್ತಿ ಬಟ್ಟೆಯಲ್ಲಿ ಹಾಕಿ. ಕುದಿಯುವ ನೀರಿನ ಪಾತ್ರೆಯ ಮೇಲೆ ಇಟ್ಟು ಸುಮಾರು 20 ರಿಂದ 25 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ. ಅಕ್ಕಿ ಮೃದುವಾಗಿರಬೇಕು.

ಈಗ ತೆಂಗಿನ ಹಾಲು ಮಿಶ್ರಣ ತಯಾರಿಸಿ. ಒಂದು ಬಾಣಲೆಯಲ್ಲಿ 1 ಕಪ್ ತೆಂಗಿನ ಹಾಲು, 1/2 ಕಪ್ ಸಕ್ಕರೆ ಮತ್ತು 1/2 ಚಮಚ ಉಪ್ಪನ್ನು ಹಾಕಿ. ಮಧ್ಯಮ ಉರಿಯಲ್ಲಿ ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಿ. ಇದು ಕುದಿಯಲು ಪ್ರಾರಂಭಿಸಿದ ತಕ್ಷಣ ಉರಿಯನ್ನು ಆಫ್ ಮಾಡಿ. ಈಗ ಬೇಯಿಸಿದ ಬಿಸಿ ಅಕ್ಕಿಯನ್ನು ಒಂದು ಅಗಲವಾದ ಬೌಲ್ಗೆ ಹಾಕಿ. ಅದರ ಮೇಲೆ ಬಿಸಿ ತೆಂಗಿನ ಹಾಲು ಮಿಶ್ರಣವನ್ನು ಸುರಿಯಿರಿ. ನಿಧಾನವಾಗಿ ಮಿಕ್ಸ್ ಮಾಡಿ. ನಂತರ ಬೌಲ್ ಅನ್ನು ಮುಚ್ಚಿ ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಕ್ಕಿ ಸಂಪೂರ್ಣವಾಗಿ ತೆಂಗಿನ ಹಾಲನ್ನು ಹೀರಿಕೊಂಡು ಮೃದು ಮತ್ತು ಸಿಹಿಯಾಗುತ್ತದೆ.
ಇದಾದ ಬಳಿಕ ದಪ್ಪ ತೆಂಗಿನ ಸಾಸ್ ಮಾಡಿ. ಉಳಿದ ತೆಂಗಿನ ಹಾಲನ್ನು ಒಂದು ಸಣ್ಣ ಬಾಣಲೆಯಲ್ಲಿ ಹಾಕಿ. 1 ಚಮಚ ಸಕ್ಕರೆ ಮತ್ತು ಚಿಟಿಕೆ ಉಪ್ಪು ಸೇರಿಸಿ. ಸಣ್ಣ ಉರಿಯಲ್ಲಿ ಸಕ್ಕರೆ ಕರಗುವವರೆಗೆ ಬಿಸಿ ಮಾಡಿ. ಇದು ಸ್ವಲ್ಪ ದಪ್ಪಗಾಗಲು 1/2 ಚಮಚ ಕಾರ್ನ್ಫ್ಲೋರ್ ಅನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಸೇರಿಸಿ. ಬಿಸಿ ಮಾಡುವುದನ್ನು ನಿಲ್ಲಿಸಿ, ತಣ್ಣಗಾಗಲು ಬಿಡಿ.
ನಿಮ್ಮ ಅಡುಗೆ ಮನೆಗೂ ಹೊಸ ರುಚಿ
ಈಗ ಒಂದು ತಟ್ಟೆಯಲ್ಲಿ ಬೇಯಿಸಿದ ಸಿಹಿ ಸ್ಟಿಕ್ಕಿ ರೈಸ್ ಅನ್ನು ಹಾಕಿ. ಅದರ ಪಕ್ಕದಲ್ಲಿ ತಾಜಾ, ಕತ್ತರಿಸಿದ ಮಾವಿನ ಹಣ್ಣಿನ ಹೋಳುಗಳನ್ನು ಜೋಡಿಸಿ. ಕೊನೆಯಲ್ಲಿ, ದಪ್ಪ ತೆಂಗಿನ ಸಾಸ್ ಅನ್ನು ಅನ್ನ ಮತ್ತು ಮಾವಿನ ಹಣ್ಣಿನ ಮೇಲೆ ಚಿಮುಕಿಸಿ. ಇಷ್ಟು ಮಾಡಿದರೆ, ಮಾವಿನ ಸ್ಟಿಕ್ಕಿ ರೈಸ್ ಸಿದ್ಧ. ನೀವು ಬೇಕಿದ್ದರೆ ಹುರಿದ ಎಳ್ಳು ಅಥವಾ ಹೆಸರುಬೇಳೆಗಳಿಂದ ಅಲಂಕರಿಸಿ ಸವಿಯಬಹುದು. ಇನ್ನು ಹಲವು ಕಡೆ ಮಾವಿನ ಹಣ್ಣು ಸಿಗುತ್ತದೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಮೆಚ್ಚಿದ ಈ ಸಿಹಿ ತಿನಿಸು ನಿಮ್ಮ ಅಡುಗೆ ಮನೆಗೂ ಹೊಸ ರುಚಿ ತರಲಿದೆ.



Click it and Unblock the Notifications
