Latest Updates
-
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವ್ಯಕ್ತಪಡಿಸುವ ಮುನ್ನ ಎಚ್ಚರ: ದಂಪತಿಗಳಿಗೆ ಇಲ್ಲಿದೆ ಡಿಜಿಟಲ್ ಶಿಷ್ಟಾಚಾರದ ಟಿಪ್ಸ್ -
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ
ರೆಸಿಪಿ: ರುಚಿಯಾದ ದಾಲ್ ಫ್ರೈ ಮಾಡುವುದು ಬಲು ಸುಲಭ
ದಾಲ್ ಫ್ರೈ ಉತ್ತರ ಭಾರತದ ಶೈಲಿಯ ಅಡುಗೆಯಾಗಿದ್ದು, ರೊಟ್ಟಿ, ನಾನ್‌ಗೆ ಇದನ್ನು ಮಾಡಿ ಸವಿಯಲಾಗುವುದು. ಆದರೆ ಈ ದಾಲ್ ಫ್ರೈ ನಮ್ಮ ಬಿಸಿ-ಬಿಸಿ ಅನ್ನದ ಜೊತೆಯೂ ಚೆನ್ನಾಗಿ ಸೂಟ್ ಆಗುವುದು. ಇನ್ನು ಚಪಾತಿಗೂ ಒಳ್ಳೆಯ ಕಾಂಬಿನೇಷನ್.

ಬೇಳೆ ಸಾರು ಅನೇಕ ಬಗೆಯಲ್ಲಿ ಮಾಡಬಹುದು. ನೀವು ಈ ದಾಲ್ ಫ್ರೈ ಟ್ರೈ ಮಾಡಿ, ಮಾಡಲು ತುಂಬಾ ಸುಲಭ ಹಾಗೂ ರುಚಿಯೂ ಸೂಪರ್ ಆಗಿರುತ್ತೆ. ಹೊಸದಾಗಿ ಅಡುಗೆ ಕಲಿಯುತ್ತಿರುವವರು ಕೂಡ ಟ್ರೈ ಮಾಡಿದರೆ ರುಚಿಯಾದ ದಾಲ್ ಫ್ರೈ ತಯಾರಿಸಬಹುದು. ಅಷ್ಟು ಸುಲಭವಾಗಿದೆ ಈ ರೆಸಿಪಿ. ಹಾಗಾದರೆ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?
Recipe By: Reena TK
Recipe Type: curry
Serves: 5
-
ಬೇಕಾಗುವ ಸಾಮಗ್ರಿ
1/2 ಕಪ್ ತೊಗರಿ ಬೇಳೆ
1/2 ಕಪ್ ಮಸುರ್ ದಾಲ್ (ಕೆಂಪು ಬೇಳೆ)
ಒಂದೂವರೆ ಕಪ್ ನೀರು
1 ಚಿಕ್ಕ ಚಮಚ ಉಪ್ಪು (ರುಚಿಗೆ ತಕ್ಕಷ್ಟು)
1/2 ಚಮಚ ಅರಿಶಿಣ ಪುಡಿ
ದಾಲ್ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು
2 ಸಾಧಾರಣ ಗಾತ್ರದ ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
2-3 ಒಣ ಮೆಣಸು
ಹಸಿ ಮೆಣಸು 2 (ಎರಡು ಹೋಳಾಗಿ ಕತ್ತರಿಸಿ)
ಸ್ವಲ್ಪ ಕರಿಬೇವು
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಜೀರಿಗೆ
ಸ್ವಲ್ಪ ಇಂಗು
1 ಚಮಚ ಕಸೂರಿ ಮೇತಿ
1/2 ಚಮಚ ಸಾಸಿವೆ
1/2 ಚಮಚ ಖಾರದ ಪುಡಿ
1/2 ಚಮಚ ಗರಂ ಮಸಾಲ ಪುಡಿ
3 ಚಮಚ ತುಪ್ಪ ಅಥವಾ ಎಣ್ಣೆ
1/2 ಚಮಚ ನಿಂಬೆರಸ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
-
ತಯಾರಿಸುವುದು ಹೇಗೆ?
* ಮೊದಲಿಗೆ ಬೇಳೆಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದಾದರೆ 2 ವಿಶಲ್ ಬರುವವರೆಗೆ ಬೇಯಿಸಿ. ಬೇಳೆ ಚೆನ್ನಾಗಿ ಬೆಂದಿರಬೇಕು, ಇಲ್ಲವಾದರೆ ಮ್ಯಾಶ್ ಮಾಡಿ.
* ಈಗ ಸಾರು ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ.
* ಈಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಸ್ವಲ್ಪ ಇಂಗು ಹಾಕಿ, ನಂತರ ಒಣ ಮೆನಸು ಹಾಕಿ, ನಂತರ ಕರಿಬೇವು ಹಾಕಿ, ಈಗ ಈರುಳ್ಳಿ, ಹಸಿ ಮೆಣಸು ಹಾಕಿ, ಈರುಳ್ಳಿ,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಬೇಯಿಸಿ.
* ಕಸೂರಿ ಮೇತಿ ಸೇರಿಸಿ.
* ನಂತರ ಬೇಯಿಸಿದ ಬೇಳೆ ಹಾಕಿ ಅದಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ ಸೇರಿಸಿ ಕುದಿಸಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿ.
* ಉರಿಯಿಂದ ಇಳಿಸಿದ ಮೇಲೆ 1/2 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ರುಚಿಯಾದ ದಾಲ್ ಫ್ರೈ ರೆಡಿ.
- ಸಲಹೆ: ದಾಲ್ ಫ್ರೈ ಸ್ವಲ್ಪ ಗಟ್ಟಿಯಾಗಿದ್ದರೆ ರುಚಿ, ಆದ್ದರಿಂದ ಬೇಳೆ ಬೇಯಿಸುವಾಗ ತುಂಬಾ ನೀರು ಹಾಕಬೇಡಿ. ಅದು ಬೇಯಲು ತಕ್ಕ ನೀರು ಹಾಕಿದರೆ ಸಾಕು.
- ಸರ್ವ್ - 5
- ಕ್ಯಾಲೋರಿ - 224ಕ್ಯಾ
- ಕೊಬ್ಬು - 7ಗ್ರಾಂ
- ಪ್ರೊಟೀನ್ - 13ಗ್ರಾಂ
- ಕಾರ್ಬ್ಸ್ - 32ಗ್ರಾಂ



Click it and Unblock the Notifications