Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಚಾಟ್ ತಿನ್ನಬೇಕಾ? ಇಂದೇ ಮನೆಯಲ್ಲಿ ಈ ಪರ್ಫೆಕ್ಟ್ ದಹಿ ಪುರಿ ಮಾಡಿ!
ಚಾಟ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸೇವ್ ಪುರಿ (Sev puri) ಇರಬಹುದು, ಪಾನಿ ಪುರಿ (Panipuri) ಇರಬಹುದು. ಇವುಗಳ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಲ್ಲೂ ನೀರೂ ಬರುತ್ತೆ. ಆದರೆ, ನೀವು ಈ ರೀತಿಯ ದಹಿ ಪುರಿ (Dahi Puri) ತಿಂದಿದ್ದೀರಾ? ಹೌದು, ತಣ್ಣನೆಯ ಮೊಸರಿನಿಂದ ಮಾಡಿದ ಈ ದಹಿ ಪುರಿ ಬೇಸಿಗೆಯಲ್ಲಿ ತಿನ್ನಲು ತುಂಬಾ ರುಚಿಯಾಗಿರುತ್ತೆ. ನೀವು ಇದನ್ನು ಯಾವ ಸಮಯದಲ್ಲೂ ಅಥವಾ ವಿಶೇಷ ಸಂದರ್ಭದಲ್ಲೂ ಮಾಡಬಹುದು. ಮನೆಯಲ್ಲಿಯೇ ದಹಿ ಪುರಿ (Dahi Puri Recipe) ಮಾಡಿಕೊಂಡು ಸವಿಯೋದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಸಂಜೆ ಟೈಮ್ ಅಲ್ಲಿ ತಣ್ಣನೆ ಗಾಳಿ ಬೀಸುತ್ತೆ. ಈ ವೇಳೆ ರುಚಿ ರುಚಿಯಾಗಿ ಮತ್ತು ಖಾರವಾಗಿರು ಏನನ್ನಾದರೂ ತಿನ್ನುವ ಬಯಕೆ ಸಾಮಾನ್ಯ. ನಿಮಗೆ ಈ ರೀತಿ ಅನಿಸಿದರೆ, ಮನೆಯಲ್ಲಿಯೇ ದಹಿ ಪುರಿ ಮಾಡಿ. ಬೇಸಿಗೆಯಲ್ಲಿ ಮೊಸರು ತಿನ್ನುವುದು ಹೊಟ್ಟೆಗೆ ಒಳ್ಳೆಯದು. ಈ ಚಾಟ್ ಸಿಹಿ ಮತ್ತು ಹುಳಿಯ ಅದ್ಭುತ ಸಂಯೋಜನೆ. ಆದ್ರೆ, ನಾವು ಮಾಡುವ ಪುರಿ ಗರಿಗರಿಯಾಗಿರಲ್ಲ ಎಂದು ಬಹುತೇಕರು ಹೇಳ್ತಾರೆ. ಅಂತಹವರು ಈ ಲೇಖನ ಓದಿದರೆ ಒಳ್ಳೆಯದು. ಹಿಟ್ಟು ಕಲಿಸುವಾಗ ಯಾವ ಪದಾರ್ಥ ಸೇರಿಸಬೇಕು ಮತ್ತು ಯಾವುದು ಬೇಡ ಎಂಬ ಬಗ್ಗೆ ತಿಳಿಯುತ್ತದೆ. ಹಾಗಾದ್ರೆ, ದಹಿ ಪುರಿ ಮಾಡುವ ಸುಲಭ ವಿಧಾನ ತಿಳಿಯೋಣ ಬನ್ನಿ.

ದಹಿ ಪುರಿ ತಯಾರಿಸಲು ಈ ಪದಾರ್ಥಗಳು ಸಾಕು!
- ಪುರಿ (ಗೋಲ್ಗಪ್ಪ ಪುರಿ)
- ಮೊಸರು
- ಬೇಯಿಸಿದ ಆಲೂಗಡ್ಡೆ
- ಈರುಳ್ಳಿ
- ಜೀರಿಗೆ ಪುಡಿ (ಹುರಿದ ಪುಡು ಬಳಸಿ)
- ಚಾಟ್ ಮಸಾಲ
- ಜೀರಾ ಪುಡಿ
- ಹುಣಸೆ ಚಟ್ನಿ
- ಹಸಿರು ಚಟ್ನಿ
- ಮಿಕ್ಚರ್ (Sev mixture)
- ಉಪ್ಪು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
ಸುಲಭವಾಗಿ ದಹಿ ಪುರಿ ತಯಾರಿಸುವ ವಿಧಾನ
ಮೊದಲು, 1 ಅಥವಾ 2 ಬೇಯಿಸಿದ ಆಲೂಗಡ್ಡೆ ತೆಗೆದುಕೊಳ್ಳಿ. ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 1 ಈರುಳ್ಳಿ ತೆಗೆದುಕೊಂದು ಸಣ್ಣಗೆ ಕತ್ತರಿಸಿ. ಈಗ 10 ರಿಂದ 12 ಗೋಲ್ಗಪ್ಪ ಪುರಿ ತೆಗೆದುಕೊಳ್ಳಿ. ಇವುಗಳನ್ನು ಒಂದು ತಟ್ಟೆಯಲ್ಲಿ ಇಡಿ ಅಥವಾ ನಿಮಗೆ ಇಷ್ಟ ಬಂದಂತೆ ಅಲಂಕರಿಸಿ. ಎಲ್ಲಾ ಪೂರಿಯಲ್ಲೂ ಹೋಲ್ (ರಂಧ್ರ) ಮಾಡಿ. ಅದರಲ್ಲಿ ಸ್ವಲ್ಪ ಆಲೂಗಡ್ಡೆ ಮತ್ತು ಈರುಳ್ಳಿ ಹಾಕಿ.
ಇದಾದ ಬಳಿಕ ಅದರಲ್ಲಿ ಸ್ವಲ್ಪ ಉಪ್ಪು ಹಾಕಿ. ಈಗ ಅದರ ಮೇಲೆ 3 ರಿಂದ 4 ಚಮಚ ಹಸಿರು ಚಟ್ನಿ ಮತ್ತು ಅರ್ಧ ಕಪ್ (1/2 ಕಪ್) ಸಿಹಿ ಮತ್ತು ಅರ್ಧ ಕಪ್ ಹುಣಸೆ ಚಟ್ನಿ ಸೇರಿಸಿ. ಈ ಎರಡೂ ಚಟ್ನಿಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಿ. ಇದನ್ನು ಮಾಡಲು, ಕೊತ್ತಂಬರಿ, ಪುದೀನ ಮತ್ತು ಮೆಣಸಿನಕಾಯಿಯನ್ನು ಪುಡಿಮಾಡಿ. ಅದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ.
ಹಾಗೆಯೇ ಹುಣಸೆಹಣ್ಣು ಮತ್ತು ಬೆಲ್ಲ ಬಳಸಿ ಹುಣಸೆ ಚಟ್ನಿ ತಯಾರಿಸಿ. ಈಗ ಬೇಯಿಸಿದ ಮೊಸರನ್ನು ಪುರಿಯ ಮೇಲೆ ಹಾಕಿ ಹರಡಿ. ಅದರ ಮೇಲೆ ಹುರಿದ ಜೀರಿಗೆ ಪುಡಿ, ಉಪ್ಪು ಮತ್ತು ಚಾಟ್ ಮಸಾಲ ಹಾಕಿ. ಈಗ ಅದರ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಮಿಕ್ಚರ್ (ಸೇವ್) ಹಾಕಿ. ಇಷ್ಟು ಮಾಡಿದರೆ ರುಚಿರುಚಿಯಾದ ದಹಿ ಪುರಿ ಸವಿಯಲು ಸಿದ್ದವಾಗುತ್ತದೆ. ಮಾಡಿದ ತಕ್ಷಣ ಮಕ್ಕಳಿಗೆ ಕೊಟ್ಟರೆ, ಅದರ ಮಜವೇ ಬೇರೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಚುಮುಚುಮು ಚಳಿಗೆ ಇದು ಬೆಸ್ಟ್ ಚಾಟ್.



Click it and Unblock the Notifications
