Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕರಿಬೇವಿನ ಚಟ್ನಿ, ಚಟ್ನಿ ಪುಡಿ ರೆಸಿಪಿ: ಸೂಪರ್ ಟೇಸ್ಟ್, ಆರೋಗ್ಯಕ್ಕೂ ಒಳ್ಳೆಯದು
ಕರಿಬೇವನ್ನು ನಾವು ಒಗ್ಗರಣೆಗೆ ಹೆಚ್ಚಾಗಿ ಬಳಸುತ್ತೇವೆ, ಆದ್ದರಿಂದ ತುಂಬಾ ಒಳ್ಳೆಯ ರೆಸಿಪಿ ನೀಡಿದ್ದೇವೆ. ನಾವಿಲ್ಲಿ ಕರಿಬೇವಿನ ಚಟ್ನಿ ಹಾಗೂ ಚಟ್ನಿ ಪುಡಿಯ ರೆಸಿಪಿ ನೀಡಿದ್ದೇವೆ.
ಈ ಚಟ್ನಿ ಹಾಗೂ ಚಟ್ನಿ ಪುಡಿ ತುಂಬಾನೇ ರುಚಿಯಾಗಿರುತ್ತದೆ, ಬನ್ನಿ ಇವುಗಳನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಕರಿಬೇವಿನ ಚಟ್ನಿ
ಬೇಕಾಗುವ ಸಾಮಗ್ರಿ
1 ಕಪ್ ಕರಿಬೇವು
1 ಚಮಚ ಎಣ್ಣೆ (ಶುದ್ಧ ತೆಂಗಿನೆಣ್ಣೆ ಹಾಕಿದರೆ ಇನ್ನೂ ಒಳ್ಳೆಯದು)
3-4 ಹಸಿಮೆಣಸಿನಕಾಯಿ
ಅರ್ಧ ತೆಂಗಿನಕಾಯಿ ತುರಿ
ಸ್ವಲ್ಪ ಹುಣಸೆಹಣ್ಣು (ಸ್ವಲ್ಪವೇ ಸ್ವಲ್ಪ ಬಳಸಿ
ಅರ್ಧ ಚಮಚ ಉಪ್ಪಿನ ಪುಡಿ
ಸ್ವಲ್ಪ ನೆಲಗಡಲೆ ( ಬಳಸಿದೆಯೂ ಇರಬಹುದು)
ಸ್ವಲ್ಪ ಕಡ್ಲೆಬೇಳೆ (ಇದು ಕೂಡ ಹಾಕದೆ ಇದ್ದರೂ ನಡೆಯುತ್ತೆ)
ಮಾಡುವ ವಿಧಾನ
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಕರಿ ಬೇವು , ಹಸಿ ಮೆಣಸು ಹಾಕಿ
3-4 ನಿಮಿಷ ಫ್ರೈ ಮಾಡಿ (ಸೊಪ್ಪು ಒಣಗಿಸಬೇಡಿ, ಅದರ ಬಣ್ಣ ಹಸಿಯಾಗಿಯೇ ಇರಬೇಕು,
ಎಣ್ಣೆಗೆ ಬಿದ್ದಾಗ ಸ್ವಲ್ಪ ಗರಿಗರಿಯಾಗುವುದು)
ನೆಲಗಡಲೆ, ಕಡ್ಲೆ ಬೇಳೆ ರೋಸ್ಟ್ ಮಾಡಬೇಕು
ನಂತರ ತೆಂಗಿನಕಾಯಿ, ಹುಣಸೆಹಣ್ಣು, ಉಪ್ಪು, ಕಡ್ಲೆ ಬೇಳೆ, ನೆಲಗಡಲೆ ಹಾಕಿ
ರುಬ್ಬಿದರೆ ಕರಿಬೇವಿನ ಚಟ್ನಿ ರೆಡಿ.. ದೋಸೆಗೆ ಸೂಪರ್ ಆಗಿರುತ್ತದೆ.
ಒಗ್ಗರಣೆ ಕೂಡ ಹಾಕಬಹುದು
ಇದನ್ನು ಒಗ್ಗರಣೆ ಹಾಕಿ, ಸ್ವಲ್ಪ ನೀರು ನೀರಾಗಿಯೂ ಮಾಡಬಹುದು.
ಕರಿಬೇವಿನ ಚಟ್ನಿ ಪುಡಿ
ಒಂದು ಚಮಚ ಕಡ್ಲೆ ಬೇಳೆ
1 ಚಮಚ ಉದ್ದಿನ ಬೇಳೆ(ಕಪ್ಪು ಬಣ್ಣದ್ದು, ಸಿಪ್ಪೆ ಸುಲಿಯದೆ ಇರುವ)
1 ಚಮಚ ಎಳ್ಳು
1 ಚಮಚ ಕೊಬ್ಬರಿ
3-4 ಒಣ ಮೆಣಸು
ಸ್ವಲ್ಪ ಜೀರಿಗೆ
1 ಕಪ್ ಕರಿಬೇವಿನ ಎಲೆ
4-5 ಬೆಳ್ಳುಳ್ಳಿ ಎಸಳು
1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು (ಅರ್ಧ ಚಮಚ )
ಮಾಡುವ ವಿಧಾನ
ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಅದರಲ್ಲಿ ಕರಿಬೇವು ಹಾಕಿ ಫ್ರೈ ಮಾಡಿ, ನಂತರ
ತೆಗೆದು ತಟ್ಟೆಗೆ ಹಾಕಿ.
ಈಗ ಅದೇ ಪ್ಯಾನ್ ಕಡ್ಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಕೊಬ್ಬರಿ, ಜೀರಿಗೆ,
ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ.
ನಂತರ ತಟ್ಟೆಯಲ್ಲಿ ಹಾಕಿಡಿ, ಬಳಿಕನೀರು ಸೇರಿಸಿದರೆ ರುಬ್ಬಿದರೆ ಕರಿಬೇವಿನ ಚಟ್ನಿ ಪುಡಿ. ಅನ್ನ, ಮೊಸರು ಜೊತೆ ತಿನ್ನಲು ಚೆನ್ನಾಗಿರುತ್ತದೆ. ಈ ಚಟ್ನಿ ಪುಡಿ ನೀವು ಒಂದು ತಿಂಗಳವರೆಗೆ ಇಟ್ಟು ಬಳಸಬಹುದು.
ಇನ್ನು ಹೆಚ್ಚಿನ ಸಮಯ ಬಳಸಲು ಇಚ್ಚಿಸುವುದಾದರೆ ಫ್ರಿಡ್ಜ್ನಲ್ಲಿಟ್ಟು ಬಳಸಬಬಹುದು.
ಕರಿ ಬೇವಿನ ಎಲೆಯಲ್ಲಿ ಈ ಪ್ರಯೋಜನಗಳಿವೆ
- ಕರಿಬೇವು ದಿನಾ ತಿಂದರೆ ಮೈ ತೂಕ ನಿಯಂತ್ರಣದಲ್ಲಿಲು ಸಹಕಾರಿ, ಇದು ಮೈಯಲ್ಲಿನ ಬೊಜ್ಜು ಕರಗಿಸುತ್ತದೆ, ನೀವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5-6 ಎಲೆ ಕರಿಬೇವು ಸೇವಿಸಿ ಬಿಸಿ ನೀರು ಕುಡಿದರೆ ಸಾಕು.
- ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು, ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ಒಳ್ಳೆಯದು.
- ಮಧುಮೇಹಿಗಳಿಗೂ ಒಳ್ಳೆಯದು, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ.
- ಕಣ್ಣಿನ ಆರೋಗ್ಯ ಒಳ್ಳೆಯದು
- ದೇಹದ ರಕ್ತ ಶುದ್ಧ ಮಾಡುತ್ತದೆ, ದೇಹದರಕ್ತದಲ್ಲಿರುವ ಕಶ್ಮಲ ಹೊರ ಹಾಕಿ ರಕ್ತ ಶುದ್ಧವಾಗಿಸುತ್ತದೆ.
- ತಲೆಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ತೆಂಗಿನೆಣ್ಣೆಗೆ ಸ್ವಲ್ಪ ಕರಿಬೇವು ಹಾಕಿ ಕುದಿಸಿ ಆ ಎಣ್ಣೆ ತಲೆಗೆ ಹಚ್ಚಿದರೆ ಒಳ್ಳೆಯದು.
- ಜೀರ್ಣಕ್ರಿಯೆಗೆ ಒಳ್ಳೆಯದು, ಇದನ್ನು ಸೇವಿಸುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುವುದು, ಹಾಗಾಗಿ ಇದನ್ನು ಒಗ್ಗರಣೆಯಲ್ಲಿ ಬಳಸಲಾಗುವುದು
- ಲಿವರ್ನ ಆರೋಗ್ಯಕ್ಕೆ ಒಳ್ಳೆಯದು.
- ತ್ವಚೆಗೂ ಒಳ್ಳೆಯದು.



Click it and Unblock the Notifications
