Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೊಸರನ್ನ ರೆಸಿಪಿ
ಮೊಸರನ್ನವು ನಮ್ಮ ದೈನಂದಿನ ಊಟದ ಒಂದು ಭಾಗ. ದಕ್ಷಿಣ ಭಾರತೀಯರ ಊಟದ ಪದ್ಧತಿಯಲ್ಲಿ ಇದೊಂದು ಅಗತ್ಯವಾದ ಭಕ್ಷ್ಯ. ತಮಿಳಿಯನ್ನರು ಮೊಸರನ್ನ ಇಲ್ಲದೆ ಊಟವು ಅಪೂರ್ಣ ಎಂದು ಹೇಳುತ್ತಾರೆ. ಈ ಪಾಕವಿಧಾನದಲ್ಲಿ ಮುಖ್ಯ ಪದಾರ್ಥಗಳು ಅನ್ನ ಮತ್ತು ಮೊಸರು. ಇದಕ್ಕೆ ಸೂಕ್ತ ಪ್ರಮಾಣದ ಮಸಾಲೆ, ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
ಮೊಸರನ್ನವು ದೇಹಕ್ಕೆ ಹೆಚ್ಚು ತಂಪನ್ನು ನೀಡುತ್ತದೆ. ಜೊತೆಗೆ ಪರಿಪೂರ್ಣವಾದ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಾಗಿಯೇ ಇದನ್ನು ಮಕ್ಕಳಿಗೆ ನಿತ್ಯದ ಊಟವನ್ನಾಗಿ ನೀಡಲಾಗುತ್ತದೆ. ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಹಾಗೂ ಪೌಷ್ಟಿಕಾಂಶವನ್ನು ಇದು ನೀಡುತ್ತದೆ. ಬೇಸಿಗೆ ಕಾಲದಲ್ಲಿ ಮತ್ತು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಮೊಸರನ್ನವನ್ನು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ.
ಮೊಸರನ್ನದ ಪಾಕವಿಧಾನ ಬಲು ಸುಲಭ. ಹಠಾತ್ ಹಸಿವಿನಿಂದ ಉಂಟಾಗುವ ನೋವನ್ನು ಇದು ತೃಪ್ತಿ ಪಡಿಸುತ್ತದೆ. ಆಯಾಸಗೊಂಟಾಗ ಅಥವಾ ಅಡುಗೆ ಮಾಡಲು ಹೆಚ್ಚು ಸಮಯ ವ್ಯಯಿಸಲು ಇಷ್ಟವಿಲ್ಲದೆ ಇರುವಾಗ ರುಚಿಕರವಾದ ಮೊಸರನ್ನವನ್ನು ಬಹುಬೇಗ ತಯಾರಿಸಿ ಸವಿಯಬಹುದು. ಈ ಪಾಕವಿಧಾನವನ್ನು ಮಾಡುವ ವಿಧಾನ ತಿಳಿದುಕೊಳ್ಳುವ ಆಸೆಯಿದ್ದರೆ ಇಲ್ಲಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.
ಮೊಸರನ್ನದ ವಿಡಿಯೋ ರೆಸಿಪಿ

Recipe By: ಅರ್ಚನಾ ವಿ.
Recipe Type: ಪ್ರಮುಖ ಭಕ್ಷ್ಯ
Serves: 2 ಮಂದಿಗೆ
-
ಅಕ್ಕಿ - 1 ಕಪ್
ನೀರು - 2 ಕಪ್
ಮೊಸರು - 1 ಬೌಲ್
ಸಿಪ್ಪೆ ತೆಗೆದು, ಹೆಚ್ಚಿಕೊಂಡ ಸೌತೆಕಾಯಿ - 1/2
ದಾಳಿಂಬೆ ಬೀಜ - 1/2 ಕಪ್
ತುರಿದುಕೊಂಡ ಶುಂಠಿ - 1/4 ಇಂಚು
ಹೆಚ್ಚಿಕೊಂಡ ಮೆಣಸಿನ ಕಾಯಿ - 1
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - 1 ಟೇಬಲ್ ಚಮಚ
ಸಾಸಿವೆ ಕಾಳು - 1/2 ಟಿಚಮಚ
ಜೀರಿಗೆ - 1/2 ಟಿಚಮಚ
ಇಂಗು - 1/2 ಟಿಚಮಚ
ಕರಿಬೇವಿನ ಎಲೆ - 7-10
ಹೆಚ್ಚಿಕೊಂಡ ಒಣಮೆಣಸು - 1 ದೊಡ್ಡದು
-
1. ಕುಕ್ಕರ್‌ನಲ್ಲಿ ಅಕ್ಕಿ ಮತ್ತು 2 ಕಪ್ ನೀರನ್ನು ಹಾಕಿರಿ
2. ಎರಡು ಸೀಟಿ ಕೂಗುವ ತನಕ ಬೇಯಿಸಿ, ನಂತರ ಸಂಪೂರ್ಣವಾಗಿ ಆರಲು ಬಿಡಿ.
3. ಒಂದು ಪಾತ್ರೆಯಲ್ಲಿ ಮೊಸರಿನೊಂದಿಗೆ ಅನ್ನವನ್ನು ಬೆರೆಸಿ.
4. ಹೆಚ್ಚಿಕೊಂಡ ಸೌತೆಕಾಯಿ ಮತ್ತು ದಾಳಿಂಬೆ ಬೀಜವನ್ನು ಸೇರಿಸಿ.
5. ಇದರೊಟ್ಟಿಗೆ ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.
6. ಇದೇ ಸಮಯದಲ್ಲಿ ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ.
7. ಸಾಸಿವೆಯನ್ನು ಹಾಕಿ, ಸಿಡಿಯಲು ಬಿಡಿ.
8. ನಂತರ ಜೀರಿಗೆ, ಇಂಗು, ಕರಿಬೇವಿನ ಎಲೆ, ಒಣಮೆಣಸನ್ನು ಸೇರಿಸಿ ಒಂದು ಒಗ್ಗರಣೆಯನ್ನು ತಯಾರಿಸಿ.
9. ಅನ್ನ ಮತ್ತು ಮೊಸರಿನ ಮಿಶ್ರಣಕ್ಕೆ ಒಗ್ಗರಣೆಯನ್ನು ಹಾಕಿರಿ.
10. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.
- 1. ಮೊಸರನ್ನದ ಪ್ರಮಾಣ ಮತ್ತು ಮಿಶ್ರಣದ ಆಧಾರದ ಮೇಲೆ, ಅಗತ್ಯವಿದ್ದಷ್ಟು ನೀರನ್ನು ಸೆರಿಸಿಕೊಳ್ಳಬಹುದು.
- 2. ಮೊಸರು ಹುಳಿ ಇದ್ದರೆ ಹಾಲನ್ನು ಸೇರಿಸಿಕೊಳ್ಳಬಹುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರೀಸ್ - 300 ಕ್ಯಾಲ್
- ಫ್ಯಾಟ್ - 6 ಗ್ರಾಂ.
- ಪ್ರೋಟೀನ್ - 17 ಗ್ರಾಂ
- ಕಾರ್ಬೋಹೈಡ್ರೇಟ್ - 67 ಗ್ರಾಂ.
- ಸಕ್ಕರೆ - 2 ಗ್ರಾಂ
- ಐರನ್ - ಶೇ.10.
ಮೊಸರನ್ನದ ಪಾಕವಿಧಾನ
1. ಕುಕ್ಕರ್‌ನಲ್ಲಿ ಅಕ್ಕಿ ಮತ್ತು 2 ಕಪ್ ನೀರನ್ನು ಹಾಕಿರಿ.


2. ಎರಡು ಸೀಟಿ ಕೂಗುವ ತನಕ ಬೇಯಿಸಿ, ನಂತರ ಸಂಪೂರ್ಣವಾಗಿ ಆರಲು ಬಿಡಿ.


3. ಒಂದು ಪಾತ್ರೆಯಲ್ಲಿ ಮೊಸರಿನೊಂದಿಗೆ ಅನ್ನವನ್ನು ಬೆರೆಸಿ.


4. ಹೆಚ್ಚಿಕೊಂಡ ಸೌತೆಕಾಯಿ ಮತ್ತು ದಾಳಿಂಬೆ ಬೀಜವನ್ನು ಸೇರಿಸಿ.


5. ಇದರೊಟ್ಟಿಗೆ ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.




6. ಇದೇ ಸಮಯದಲ್ಲಿ ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ.


7. ಸಾಸಿವೆಯನ್ನು ಹಾಕಿ, ಸಿಡಿಯಲು ಬಿಡಿ.


8. ನಂತರ ಜೀರಿಗೆ, ಇಂಗು, ಕರಿಬೇವಿನ ಎಲೆ, ಒಣಮೆಣಸನ್ನು ಸೇರಿಸಿ ಒಂದು ಒಗ್ಗರಣೆಯನ್ನು ತಯಾರಿಸಿ.




9. ಅನ್ನ ಮತ್ತು ಮೊಸರಿನ ಮಿಶ್ರಣಕ್ಕೆ ಒಗ್ಗರಣೆಯನ್ನು ಹಾಕಿರಿ.

10. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.





Click it and Unblock the Notifications