Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಒಂದು ಟಿಪ್ಸ್ ಸೇರಿಸಿದರೆ ಸಾಕು ಕ್ರಂಚಿ ಫ್ರೆಂಚ್ ಫ್ರೈ ರೆಡಿ
ಮಕ್ಕಳಿಗೆ ಫ್ರಂಚ್ ಫ್ರೈಯೆಂದರೆ ಪಂಚಪ್ರಾಣ, ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇದನ್ನು ಇಷ್ಟಪಟ್ಟು ತಿಂತಾರೆ, ಆದರೆ ನಾವು ಮನೆಯಲ್ಲಿ ಮಾಡಲು ಟ್ರೈ ಮಾಡಿದಾಗ ಆ ಕ್ರಂಚಿ ಟೇಸ್ಟ್ ಇರಲ್ಲ, ಆಲೂಗಡ್ಡೆ ಮೆತ್ತಗೆ ಆಗಿರುತ್ತದೆ, ಅದೇ ಹೊರಗಡೆಯಿಂದ ಫ್ರೆಂಚ್ ಫ್ರೈ ಖರೀದಿಸಿದಾಗ ಕ್ರಂಚಿಯಾಗಿ ರುಚಿಯಾಗಿರುತ್ತದೆ ಅಲ್ವಾ?
ಈ ಒಂದು ಟಿಪ್ಸ್ ಸೇರಿಸಿದರೆ ಸಾಕು ನೀವು ಕೂಡ ಮೆಕ್‌ಡೊನಾಲ್ಡ್ ಮುಂತಾದ ಕಡೆ ಸಿಗುವಂಥ ಕ್ರಂಚಿ ಪ್ರೆಂಚ್ ಫ್ರೈ ಮನೆಯಲ್ಲಿಯೇ ಮಾಡಬಹುದು.
ಇದನ್ನು ಮಾಡಲು ಏರ್‌ಫ್ರೈಯರ್ ಬೇಕಾಗಿಲ್ಲ, ತುಂಬಾ ಸಿಂಪಲ್ ಆಗಿ ಮಾಡಬಹುದು ನೋಡಿ:

ಬೇಕಾಗುವ ಸಾಮಗ್ರಿ
4 ಆಲೂಗಡ್ಡೆ
1/ 2 ಚಮಚ ಉಪ್ಪು
ಸ್ವಲ್ಪ ಖಾರದ ಪುಡಿ
ಚಾಟ್ ಮಸಾಲ 11/4 ಚಮಚ
ಗರಂ ಮಸಾಲ
ಎಣ್ಣೆ
ಮಾಡುವ ವಿಧಾನ:
ಆಲೂಗಡ್ಡೆಯ ಸಿಪ್ಪೆ ಸುಲಿದು ತೊಳೆಯಿರಿ, ನಂತರ ಅದನ್ನು ಉದ್ದುದ್ದವಾಗಿ
ಕತ್ತರಿಸಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ, ಚಿಟಿಕೆಯಷ್ಟು ಉಪ್ಪು
ಸಾಕು.
ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಆಲೂಗಡ್ಡೆಯನ್ನು
ಹಾಕಿ ಹಬೆಯಲ್ಲಿ ಬೇಯಿಸಿ
ನಂತರ ಅದನ್ನು ಒಂದು ಬಟ್ಟೆಯಲ್ಲಿ ಹರಡಿ ಮೆಲ್ಲನೆ ಪ್ರೆಸ್ ಮಾಡಿ, ತೇವಾಂಶ
ಇದ್ದರೆ ಹೀರಿ ಕೊಳ್ಳುತ್ತದೆ.
ಈಗ ಒಂದು ಬೌಲ್‌ನಲ್ಲಿ ಜೋಳದ ಹಿಟ್ಟು (ಕಾರ್ನ್ ಫ್ಲೋರ್ ಹಾಕಿ), ನಂತರ ಅದಕ್ಕೆ
ಸ್ವಲ್ಪ ಮೆಣಸಿನ ಪುಡಿ, ಚಾಟ್ ಮಸಾಲ, ಗರಂ ಮಸಾಲ, ಉಪ್ಪು ಹಾಕಿ ಮಿಕ್ಸ್ ಮಾಡಿ.
ನೀರು ಹಾಕಿ ಮಿಕ್ಸ್ ಮಾಡಬೇಡಿ, ಹಾಗೇ ಮಿಕ್ಸ್ ಮಾಡಿದರೆ ಸಾಕು.
ನಂತರ ಬೇಯಿಸಿಟ್ಟ ಆಲೂಗಡ್ಡೆಯನ್ನು ಅದರಲ್ಲಿ ಹಾಕಿ ಮಿಕ್ಸ್ ಮಾಡಿ
ಈಗ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆಯನ್ನು ಫ್ರೈ ಮಾಡಿ ಸ್ವಲ್ಪ ಕಂದು
ಬಣ್ಣಕ್ಕೆ ಬರುವಾಗ ತೆಗೆಯಿರಿ. ಈಗ ಇದನ್ನು ಟೊಮೆಟೊ ಸಾಸ್ ಜೊತೆ ಸರ್ವ್
ಮಾಡಿ.
ಫ್ರೆಂಚ್ ಫ್ರೈ ಕುರಿತ ಇಂಟರೆಸ್ಟಿಂಗ್ ಸಂಗತಿ
ಇದರ ಹೆಸರು ಕೇಳುವಾಗ ನಮಗೆ ಅನಿಸಬಹುದು, ಇದನ್ನು ಫ್ರೆಂಚ್‌ನಲ್ಲಿ ಮಾಡಿರುವುದು
ಎಂದು, ಆದರೆ ಫ್ರೆಂಚ್ ಫ್ರೈ ಫ್ರೆಂಚ್ ದೇಶದಿಂದ ಬಂದಂಥ ಸ್ನ್ಯಾಕ್ಸ್ ಅಲ್ಲ.
ಇದನ್ನು ಮೊದಲಿಗೆ ಬೆಲ್ಜಿಯಂನಲ್ಲಿ ಕಂಡು ಹಿಡಿಯಲಾಯ್ತು.
ಅಲ್ಲಿಯ ಗ್ರಾಮವೊಂದರಲ್ಲಿ ಗ್ರಾಮಸ್ಥರು ಮೀನನ್ನು ನದಿಯಿಂದ ಹಿಡಿದು ಈ ರೀತಿ
ಫ್ರೈ ಮಾಡಿ ತಿನ್ನುತ್ತಿದ್ದರು. ಅದರೆ ಚಳಿಗಾಲದಲ್ಲಿ ಆ ನದಿಯ ನೀರು ಗಟ್ಟಿಯಾದಾಗ
ಮೀನು ಹಿಡಿಯಲು ಸಾಧ್ಯವಾಗಿಲ್ಲ. ಆವಾಗ ಬಾಯೊಗೆ ರುಚಿಯಾಗಿ ಏನು ಮಾಡಬೇಕು ಎಂದು
ಆಲೋಚಿಸಿ ಮೀನು ಮಾಡಿದ ರೀತಿಯಲ್ಲಿ ಆಲೂಗಡ್ಡೆ ಮಾಡುತ್ತಾರೆ, ನೋಡಿದರೆ ರುಚಿ
ತುಂಬಾ ಇಷ್ಟವಾಗುತ್ತದೆ. ಇದೀಗ ಈ ಫ್ರೆಂಚ್ ಫ್ರೈ ಎಲ್ಲಾ ದೇಶದವರಿಗೂ
ಚಿರಪರಿಚಿತ.
ಇದದನ್ನು ಟೊಮೆಟೊ ಸಾಸ್, ಮಯೋನೈಸ್, ವಿನೆಗರ್ ಜೊತೆ ತಿನ್ನಲು ಸೂಪರ್
ಆಗಿರುತ್ತದೆ.
ಇನ್ನು ಯುಎಸ್‌ನಲ್ಲಿ ಪ್ರತಿ 13 ವರ್ಷಕ್ಕೊಮ್ಮೆ ಜುಲೈ 13ಕ್ಕೆ ನ್ಯಾಷನಲ್ ಫ್ರೆಂಚ್‌ಫ್ರೈ ಡೇ ಎಂದು ಕೂಡ ಆಚರಿಸಲಾಗುವುದು. ಈ ಫ್ರೆಂಚ್ ಫ್ರೈ ನಿಮ್ಮ ಮಕ್ಕಳು ತುಂಬಾ ಇಷ್ಟಪಡುತ್ತಾರಾ? ಕಮೆಂಟ್ ಮಾಡಿ



Click it and Unblock the Notifications
