Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಕ್ರಿಸ್ಪಿ ಬೆಂಡೆಕಾಯಿ ಮಸಾಲ ಫ್ರೈ ರೆಸಿಪಿ
ಬೆಂಡೆಕಾಯಿ ಪಲ್ಯ ಅನೇಕ ರೀತಿಯಲ್ಲಿ ಮಾಡಬಹುದು. ನಾವಿಲ್ಲಿ ಬೆಂಡೆಕಾಯಿಯನ್ನ ಇಷ್ಟಪಡದವರು ಕೂಡ ಚಪ್ಪರಿಸಿಕೊಂಡು ತಿನ್ನುವಂಥ ಒಂದು ಸುಲಭವಾದ, ಆರೋಗ್ಯಕರವಾದ, ಹಾಗೂ ಅಷ್ಟೇ ರುಚಿಕರವಾದ ರೆಸಿಪಿ ನೀಡಿದ್ದೇವೆ.

ಇದನ್ನೊಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ, ಮತ್ತೆ ಮತ್ತೆ ಮಾಡಿಕೊಂಡು ತಿಂತೀರಾ.
Recipe By: Poornima Hegde
Recipe Type: Palya
Serves: 2
-
ಬೇಕಾಗುವ ಸಾಮಗ್ರಿಗಳು:
15-20 ಬೆಂಡೆಕಾಯಿ
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಕೊತ್ತಂಬರಿ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
ಅಡುಗೆ ಎಣ್ಣೆ
-
ಮಾಡುವ ವಿಧಾನ:
* ಮೊದಲು ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.
* ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.
* ಕತ್ತರಿಸಿದ ಬೆಂಡೆಕಾಯಿಯನ್ನ ದೊಡ್ಡ ಬೌಲ್ನಲ್ಲಿ ಹಾಕಿ.
* ಈಗ ಬೌಲ್ ಗೆ ಮಸಾಲೆ ಸಾಮಗ್ರಿ ಹಾಕಿ
* ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.
* ನಂತರ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ.
* ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕುದಿದ ನಂತರ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ.
ಚಿಪ್ಸ್ ತರ ಗರಿಗರಿಯಾಗಿ ಕರಿದರೆ ಮಸಾಲಾ ಬೆಂಡಿ ಫ್ರೈ ರೆಡಿ.
- ಇದನ್ನು ಅನ್ನದ ಜೊತೆ ಸರ್ವ್ ಮಾಡಬಹುದು, ಇಲ್ಲಾ ಸ್ಟಾಟರ್ಸ್ ಆಗಿಯೂ ಬಳಸಬಹುದು.
- ಸರ್ವ್ - 100ಗ್ರಾಂ
- ಕೊಬ್ಬು - 0.1ಗ್ರಾಂ
- ಪ್ರೊಟೀನ್ - 2.2ಗ್ರಾಂ
- ಕಾರ್ಬ್ಸ್ - 7.03 ಗ್ರಾಂ
- ನಾರಿನಂಶ - 9%
ಮಾಡುವ ವಿಧಾನ:
* ಮೊದಲು ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು.
ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.

* ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.

* ಕತ್ತರಿಸಿದ ಬೆಂಡೆಕಾಯಿಯನ್ನ ದೊಡ್ಡ ಬೌಲ್ನಲ್ಲಿ ಹಾಕಿ.

* ಈಗ ಬೌಲ್ ಗೆ ಮಸಾಲೆ ಸಾಮಗ್ರಿ ಹಾಕಿ

* ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.

* ನಂತರ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ.

* ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕುದಿದ ನಂತರ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ.

ಚಿಪ್ಸ್ ತರ ಗರಿಗರಿಯಾಗಿ ಕರಿದರೆ ಮಸಾಲಾ ಬೆಂಡಿ ಫ್ರೈ ರೆಡಿ.



Click it and Unblock the Notifications