Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಕೆಎಫ್‌ಸಿಯಲ್ಲಿ ಸಿಗುವಂಥ ಕ್ರಿಸ್ಪಿ ಚಿಕನ್ ಫ್ರೈ ಮಾಡುವುದು ಹೇಗೆ?
ಕೆಎಫ್‌ಸಿ ಚಿಕನ್ ಪ್ರಿಯರಿಗೆ ಇದೇ ರೀತಿ ಚಿಕನ್ ಫ್ರೈ ಮನೆಯಲ್ಲಿಯೇ ಮಾಡಿದರೆ ಹೇಗೆ ಎಂಬ ಆಲೋಚನೆ ಬರುವುದುಂಟು, ಆದರೆ ಮಾಡಿದಾಗ ಆ ರೀತಿ ಕ್ರಿಸ್ಪಿ ಬರುವುದಿಲ್ಲ, ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ.

ಆದರೆ ಕೆಎಪ್‌ಸಿ ಶೈಲಿಯಲ್ಲಿ ಚಿಕನ್ ಫ್ರೈಯನ್ನು ಸುಲಭವಾಗಿ ಮಾಡಬಹುದು. ಕ್ರಿಸ್ಪಿ ಚಿಕನ್ ಮಾಡುವುದು ಹೇಗೆ ಎಂದು ಹೇಳಿದ್ದೇವೆ. ಇನ್ನು ಇದಕ್ಕಾಗಿ ಬಳಸುವ ಸಾಮಗ್ರಿ ಕೂಡ ಸುಲಭವಾಗಿ ಸಿಗುವಂತದ್ದೇ..
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 4
-
ಬೇಕಾಗುವ ಸಾಮಗ್ರಿ
* 8 ಚಿಕನ್ ಡ್ರಮ್‌ಸ್ಟಿಕ್/ಬ್ರೆಸ್ಟ್ ಪೀಸ್
* 1 ಕಪ್ ಗಟ್ಟಿ ಮೊಸರು
* 1 ಮೊಟ್ಟೆ (ಚೆನ್ನಾಗಿ ಕದಡಿದ್ದು)
* 50 ಗ್ರಾಂ ಮೈದಾ
* 50 ಗ್ರಾಂ ಬ್ರೆಡ್ ಚೂರುಗಳು
* 1 ಚಮಚ ಖಾರದ ಪುಡಿ
* 1 ಚಮಚ ಬಿಳಿ ಕಾಳು ಮೆಣಸಿನ ಪುಡಿ
* 1 ಚಮಚ ತುಳಸಿ (ಒಣಗಿಸಿದ್ದು)
* 1 ಚಮಚ ಒರೆಗ್ನೋ
* 1 ಹಸಿ ಮೆಣಸಿನಕಾಯಿ
* 1 ಚಮಚ ಬೆಳ್ಳುಳ್ಳಿ
* 1 ಚಮಚ ಶುಂಠಿ (ಪುಡಿ)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
-
ಮಾಡುವುದು ಹೇಗೆ?
* ಚಿಕನ್ ಅನ್ನು ತೊಳೆದು ಅದರ ನೀರು ಸಂಪೂರ್ಣವಾಗುವ ಪಾತ್ರೆಯಲ್ಲಿಡಿ.
* ಈಗ ಮೊಟ್ಟೆ, ಮೊಸರು, 1/2 ಚಮಚ ಖಾರ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಚಿಕನ್ ಹಾಕಿ ಮಿಕ್ಸ್ ಮಾಡಿ ಇಡಿ 3-4 ಗಂಟೆಗಳ ಕಾಲ ಇಡಿ.
* ಮೈದಾ, ಹಸಿ ಮೆಣಸಿನ ಕಾಯಿ, ಬಿಳಿ ಕಾಳು ಮೆಣಸಿನ ಪುಡಿ, ಒರೆಗ್ನೋ, ಬೆಳ್ಳುಳ್ಳಿ ಪುಡಿ, ಶುಂಠಿ ಪುಡಿ, ಒಣ ತುಳಸಿ, ಉಳಿದ ಖಾರ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ಮೈದಾ ಮಿಕ್ಸ್ ಮಾಡಿಟ್ಟ ಮಿಶ್ರಣವನ್ನು ಚಿಕನ್‌ಗೆ ಮೆತ್ತಿ,ನಂತರ ಅದನ್ನು ಬ್ರೆಡ್ ಚೂರ್‌ನಲ್ಲಿ ಹೊರಳಾಡಿಸಿ.
* ಈಗ ದಪ್ಪ ತಳವಿರುವ ಕಡಾಯಿಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕುದಿ ಬಂದಾಗ ಚಿಕನ್ ಹಾಕಿ ಫ್ರೈ ಮಾಡಿ, ಬೆಂದ ಮೇಲೆ ತೆಗೆಯಿರಿ.
* ಈಗ ರೆಡಿಯಾದ ಬಿಸಿ-ಬಿಸಿ ಚಿಕನ್ ಫ್ರೈಯನ್ನು ಟೊಮೆಟೊ ಕೆಚಪ್ ಜೊತೆ ಸವಿಯಿರಿ.
- ನೀವು ಮೈದಾ ಬದಲಿಗೆ ಜೋಳದ ಹಿಟ್ಟು ಹಾಕಿ ಮಾಡಿದರೆ ಮತ್ತಷ್ಟು ಕ್ರಿಸ್ಪಿ ಇರುತ್ತೆ, ಜೋಳದ ಹಿಟ್ಟು ಹಾಗೂ ಮೈದಾ ಮಿಶ್ರ ಮಾಡಿಯೂ ಹಾಕಬಹದು



Click it and Unblock the Notifications
