Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಬಾಯಲ್ಲಿ ನೀರೂರಿಸುವ ರುಚಿಯ ಕ್ರ್ಯಾಬ್ ಸುಕ್ಕ
ಕ್ರ್ಯಾಬ್ ಅಥವಾ ಏಡಿ ರುಚಿಕರವಾದ ಸಮುದ್ರ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಸಾರು ರೀತಿ ಮಾಡಿ ತಿನ್ನುವುದಕ್ಕಿಂತ ಡ್ರೈಯಾಗಿ ಮಾಡಿದರೆ ಸಕತ್ ಟೇಸ್ಟ್.

ನೀವು ಕ್ರ್ಯಾಬ್ ಪ್ರಿಯರಾಗಿದ್ದರೆ ಈ ರೆಸಿಪಿ ಖಂಡಿತ ನಿಮಗೆ ಇಷ್ಟವಾಗುವುದು. ಇಲ್ಲಿ ನಾವು ನೀಡಿರುವುದು ಮಂಗಳೂರು ಶೈಲಿಯ ರೆಸಿಪಿಯಾಗಿದೆ. ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದ್ದು, ಟೇಸ್ಟ್ ಸೂಪರ್ ಆಗಿರುತ್ತೆ. ಬನ್ನಿ ಕ್ರ್ಯಾಬ್ ಸುಕ್ಕ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Dry
Serves: 6
-
ಬೇಕಾಗುವ ಸಾಮಗ್ರಿ
ಏಡಿ 1 ಕೆಜಿ
ಒಣಮೆಣಸು 10-15
ಹುಣಸೆ ಹಣ್ಣು (ನಿಂಬೆಹಣ್ಣು ಗಾತ್ರದಷ್ಟು)
ಜೀರಿಗೆ 1 ಚಮಚ
ಮೆಂತೆ1/4 ಚಮಚ
ಸಾಸಿವೆ 1/2 ಚಮಚ
ಕೊತ್ತಂಬರಿ ಹುಡಿ 2 ಚಮಚ
ಅರಿಶಿಣ ಪುಡಿ 1 ಚಮಚ
ಟೊಮೆಟೊ 2
ಬೆಳ್ಳುಳ್ಳಿ 13-15 ಎಸಳು
ಹಸಿ ಮೆಣಸು 2
ಅರ್ಧ ತೆಂಗಿನಕಾಯಿ ತುರಿ
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ:
* ಮೊದಲಿಗೆ ಒಣ ಮೆಣಸು ಸ್ವಲ್ಪ ರೋಸ್ಟ್ ಮಾಡಿ, ಅದಕ್ಕೆ ಜೀರಿಗೆ, ನಿಂಬೆಹಣ್ಣು ಗಾತ್ರದಷ್ಟು ಹುಳಿ ಹಾಗೂ ಮೆಂತೆ ಹಾಕಿ ರುಬ್ಬಿ.
* ಈಗ ದಪ್ಪ ತಳವಿರುವ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಈರುಳ್ಳಿ, ಹಸಿ ಮೆಣಸು ಹಾಕಿ 2-3 ನಿಮಿಷ ಫ್ರೈ ಮಾಡಿ.
* ಈಗ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಸ್ವಚ್ಛ ಮಾಡಿಟ್ಟ ಏಡಿ ಹಾಕಿ, ಮಸಾಲೆ ಹಾಕಿ, ಕೊತ್ತಂಬರಿ, ಅರಿಶಿಣ ಪುಡಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ.
* ಏಡಿ ಬೆಂದು ನೀರು ಸಂಪೂರ್ಣ ಡ್ರೈಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ ಮತ್ತೆ 10 ನಿಮಿಷ ಬೇಯಿಸಿದರೆ ಏಡಿ ಸುಕ್ಕ ರೆಡಿ.
- ಒಣ ಮೆಣಸು ಬ್ಯಾಡಗಿ ಮೆಣಸು ಬಳಸಿರುವುದು, ನೀವು ಇತರ ಒಣ ಮೆಣಸು ಹಾಕುವುದಾದರೆ 5-6 ಹಾಕಿದರೆ ಸಾಕು
- ಸರ್ವ್ - 1 ಕೆಜಿ
- ಕ್ಯಾಲೋರಿ - 1565ಕ್ಯಾ
- ಕೊಬ್ಬು - 78ಗ್ರಾಂ
- ಪ್ರೊಟೀನ್ - 65ಗ್ರಾಂ
- ಕಾರ್ಬ್ಸ್ - 147ಗ್ರಾಂ



Click it and Unblock the Notifications
