Latest Updates
-
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್!
ರೆಸಿಪಿ: ಸಕತ್ ಟೇಸ್ಟಿಯಾಗಿರುತ್ತದೆ ಈ ಸ್ವೀಟ್ ಕಾರ್ನ್ ಪಲಾವ್
ಸ್ವೀಟ್ ಕಾರ್ನ್ ಪಲಾವ್ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗಾದರೂ ಸೈ, ಮನೆಗೆ ಗೆಸ್ಟ್ ಬಂದಿದ್ದಾಗ ಡಿನ್ನರ್‌ಗಾದರೂ ಸೈ. ಸ್ವೀಟ್‌ಕಾರ್ನ್ ಪಲಾವ್ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರುಚಿಕರವಾಗಿ ಮಾಡುವುದು ಹೇಗೆ ಎಂದು ಇಲ್ಲಿ ಹೇಳಿದ್ದೇವೆ ನೋಡಿ.
Recipe By: Reena TK
Recipe Type: Breakfast
Serves: 2
-
ಬೇಕಾಗುವ ಸಾಮಗ್ರಿ
ಬಾಸುಮತಿ ಅಕ್ಕಿ-ಒಂದು ದೊಡ್ಡ ಕಪ್
ಸ್ವೀಟ್ ಕಾರ್ನ್ 1 ಕಪ್
ತುಪ್ಪ 1 ಚಮಚ
ಈರುಳ್ಳಿ ಒಂದುಕಪ್ (ಉದ್ದುದ್ದವಾಗಿ ಕತ್ತರಿಸಿದ್ದು)
ಗರಂ ಮಸಾಲ ಒಂದು ಚಮಚ
ಶುಂಠಿ, ಬೆಳ್ಳುಳ್ಳಿ ಒಂದು ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2-3
ಲವಂಗ 5-6
ಏಲಕ್ಕಿ 1
ಚಕ್ಕೆ ಒಂದು ಪೀಸ್
ನೀರು 2ಕಪ್
ರುಚಿಗೆ ತಕ್ಕ ಉಪ್ಪು
-
ಮಾಡುವುದು ಹೇಗೆ?
* ಅಕ್ಕಿಯನ್ನು 10 ನಿಮಿಷ ನೆನೆಹಾಕಿ.
* ಪ್ಯಾನ್ ಬಿಸಿ ಮಾಡ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ.
* ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ.
* ಇವೆಲ್ಲಾ ಹಾಕಿದಾಗ ಘಂ ಎನ್ನುವ ಪರಿಮಳ ಬೀರುತ್ತದೆ, ಈಗ ಸ್ವೀಟ್ ಕಾರ್ನ್ ಹಾಕಿ ಫ್ರೈ ಮಾಡಿ.
* ಜೋಳ ಸ್ವಲ್ಪ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ.
* ಈಗ ಅಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಉಪ್ಪು, ಗರಂ ಮಸಾಲ. 2 ಕಪ್ ನೀರು ಸೇರಿಸಿ.
*ಈಗ ಪಾತ್ರೆಯ ಬಾಯಿ ಮುಚ್ಚಿ ಅನ್ನ ಬೇಯುವವರೆಗೆ ಬೇಯಿಸಿ, ನಂತರ ಒಮ್ಮೆ ಮಿಕ್ಸ್ ಮಾಡಿ ರಾಯತ ಅಥವಾ ಏನಾದರೂ ಗ್ರೇವಿ ಜೊತೆ ಸರ್ವ್ ಮಾಡಿ.
- ಸೂಚನೆ: ಕಾರ್ನ್ ಪಲಾವ್ ಮಾಡುವಾಗ ಕಡಿಮೆ ಉರಿಯಲ್ಲೇ ಮಾಡಿ.
- 1 ಬೌಲ್ - ಇಬ್ಬರಿಗೆ
- ಕ್ಯಾಲೋರಿ - 313cal
- ಕೊಬ್ಬು - 6.3ಗ್ರಾಂ
- ಪ್ರೊಟೀನ್ಸ್ - 6.5 ಗ್ರಾಂ
- ಕಾರ್ಬ್ಸ್ - 58.2ಗ್ರಾಂ
- ನಾರಿನಂಶ - 1.3 ಗ್ರಾಂ

ಮಾಡುವುದು ಹೇಗೆ?
* ಅಕ್ಕಿಯನ್ನು 10 ನಿಮಿಷ ನೆನೆಹಾಕಿ.

* ಪ್ಯಾನ್ ಬಿಸಿ ಮಾಡ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ.










Click it and Unblock the Notifications
