Just In
Don't Miss
- News
ಒಂದು ರಾಷ್ಟ್ರ-ಒಂದು ಚುನಾವಣೆಗೆ ವಿಧಾನಸಭೆ ಕಲಾಪದ ಎರಡನೇ ದಿನವೂ ಬಲಿ!
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Automobiles
ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್
- Movies
ಪ್ರಭಾಸ್ ಹೆಸರು ಬಳಸಿ ಭಾರಿ ಮೋಸ: ವ್ಯಕ್ತಿ ಬಂಧನ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Education
CSG Recruitment 2021: 85 ಸಾಫ್ಟ್ವೇರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರುಚಿ ರುಚಿಯಾದ ಸ್ನ್ಯಾಕ್ಸ್ ಕಾರ್ನ್-ಚೀಸ್ ಬಾಲ್ ರೆಸಿಪಿ
ಕಾರ್ನ್ ಚೀಸ್ ಬಾಲ್ ಸ್ನ್ಯಾಕ್ಸ್ ಎಂದಾದರೂ ಸವಿದಿದ್ದೀರಾ, ಇದ ಒಂದು ತುಂಡು ತೆಗೆದು ಬಾಯಿಗೆ ಹಾಕಿದರೆ ಕಾರ್ನ್, ಚೀಸ್ ಕಾಂಬಿನೇಷನ್ ಟೇಸ್ಟ್ ಆಹಾ... ಸೂಪರ್ ಆಗಿರುತ್ತೆ. ನೀವು ಇದುವರೆಗೆ ತಿಂದಿಲ್ಲ ಅಂದರೂ ಪರ್ವಾಗಿಲ್ಲ, ನೀವು ಈ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತ ತುಂಬಾ ಇಷ್ಟಪಟ್ಟು ಸವಿಯುವಿರಿ. ಇನ್ನು ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು.
ಬನ್ನಿ ಕಾರ್ನ್ ಚೀಸ್ ಬಾಲ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 2
-
ಬೇಕಾಗುವ ಸಾಮಗ್ರಿ
ಜೋಳ 1
ಆಲೂಗಡ್ಡೆ 1
ಚೀಸ್ 50ಗ್ರಾಂ
ಉಪ್ಪು (ರುಚಿಗೆ ತಕ್ಕಷ್ಟು)
ಸ್ವಲ್ಪ ಕಾಳು ಮೆಣಸಿನ ಪುಡಿ
ಒಣ ತೊಳಸಿ ಎಲೆ 1/2 ಚಮಚ
ಒರೆಗ್ನೋ 1/2 ಚಮಚ
1/2 ಚಮಚ ಬೆಳ್ಳುಳ್ಳಿ ಪೇಸ್ಟ್
-
ಮಾಡುವ ವಿಧಾನ:
* ಮೊದಲಿಗೆ 1 ದೊಡ್ಡ ಜೋಳ, 1 ದೊಡ್ಡ ಆಲೂಗಡ್ಡೆ ಬೇಯಿಸಿ.
* ನಂತರ ತಣ್ಣಗಾದ ಮೇಲೆ ಆಲೂಗಡ್ಡೆಯ ಸಿಪ್ಪೆ ಬಿಡಿಸಿ, ಜೋಳವನ್ನು ಬಿಡಿಸಿ ಒಂದು ಬೌಲ್ನಲ್ಲಿ ಹಾಕಿ ಎರಡನ್ನೂ ಮಿಕ್ಸ್ ಮಾಡಿ.
* ಈಗ 50 ಗ್ರಾಂ ಚೀಸ್ ಅನ್ನು ತುರಿದು ತಟ್ಟೆಯಲ್ಲಿ ಹಾಕಿಡಿ.
* ಈಗ 1/2 ಚಮಚ ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಕರಿಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಚೀಸ್ನಲ್ಲಿಯೂ ಉಪ್ಪು ಇರುವುದರಿಂದ ಉಪ್ಪು ಸ್ವಲ್ಪ ಇರಲಿ,
* ನಂತರ ಚೆನ್ನಾಗಿ ಮಿಕ್ಸ್ ಮಾಡಿ, ನಂತರ 1/2 ಚಮಚ ಒಣ ತೊಳಸಿ, 1/2 ಚಮಚ ಒರೆಗ್ನೋ , 4 ಚಮಚ ಮೈದಾ ಹಿಟ್ಟು ಹಾಕಿ ಮಿಕ್ಸ್ ಮಾಡಿ.
* ಉಪ್ಪು ಸರಿಯಾಗಿದೆಯೇ ನೋಡಿ.
* ನಂತರ ಅವುಗಳನ್ನು ಉಂಡೆ ಕಟ್ಟಿ.
* ಈಗ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ ಕಾರ್ನ್-ಚೀಸ್ ಬಾಲ್ ಹಾಕಿ ಕರಿಯಿರಿ.
* ಉಂಡೆ ಕಂದು ಬಣ್ಣಕ್ಕೆ ಬಂದಾಗ ಎಣ್ಣೆಯಿಂದ ತೆಗೆಯಿರಿ. ಈ ರೀತಿ ಎಲ್ಲಾ ಉಂಡೆಗಳನ್ನು ಕರಿಯಿರಿ.
- * ಕರಿಯುವಾಗ ಎಣ್ಣೆ ಸಾಧಾರಣ ಉರಿಯಲ್ಲಿ ಇರಲಿ. * ನೀವು ಬೇಕಿದ್ದರೆ ಇದನ್ನು ಮೈಕ್ರೋವೇವ್ನಲ್ಲಿ ಬೇಯಿಸಬಹುದು. *ರೆಡಿಯಾದ ಕಾರ್ನ್ ಚೀಸ್ ಬಾಲ್ ಅನ್ನು ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
- ಸರ್ವ್ - 1 ಉಂಡೆ
- ಕೊಬ್ಬು - 2ಗ್ರಾಂ
- ಪ್ರೊಟೀನ್ - 1 ಗ್ರಾಂ
- ಕಾರ್ಬ್ಸ್ - 2ಗ್ರಾಂ
- ನಾರಿನಂಶ - 1ಗ್ರಾಂ