Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್ಲಾ ತಿಂಡಿಗೂ ರುಚಿಕರ ಕೊತ್ತಂಬರಿ ಚಟ್ನಿ ಮಾಡಿ..! ಇಲ್ಲಿದೆ ರೆಸಿಪಿ
ನಿತ್ಯ ನೀವು ಬೆಳಗ್ಗೆಯ ತಿಂಡಿಗೆ ವಿವಿಧ ರೀತಿಯ ಚಟ್ನಿ ಮಾಡಲು ಬಯಸುತ್ತೀರಾ. ಹಾಗಾದ್ರೆ ಒಮ್ಮೆ ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಟ್ರೈ ಮಾಡಿ. ಹೌದು ಕೊತ್ತಂಬರಿ ಚಟ್ನಿ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಅದರ ರುಚಿ ನಿಮ್ಮ ಬೆಳಗ್ಗಿನ ತಿಂಡಿಯನ್ನು ಮತ್ತಷ್ಟು ರುಚಿಕರವಾಗಿಸುತ್ತೆ.
ಆಹಾರದ ಪರಿಮಳವನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಕೆಲವು ಆಹಾರಗಳಿಗೆ ಸೇರಿಸಲಾಗುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವುದು ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಹಾಗಾದರೆ ಈ ಕೊತ್ತಂಬರಿ ಚಟ್ನಿಯನ್ನು ಮಾಡುವುದು ಹೇಗೆ? ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಕೊತ್ತಂಬರಿ ಚಟ್ನಿ ಮಾಡಲು ಅಗತ್ಯವಿರುವ ವಸ್ತುಗಳು
- ಕೊತ್ತಂಬರಿ ಸೊಪ್ಪು - ಅಗತ್ಯವಿರುವಂತೆ
- ಎಳ್ಳೆಣ್ಣೆ ಎಣ್ಣೆ - 4 ಟೀಸ್ಪೂನ್
- ತುರಿದ ತೆಂಗಿನಕಾಯಿ - 1 ಕಪ್
- ಹುಣಸೆಹಣ್ಣು - ರುಚಿಗೆ ತಕ್ಕಂತೆ
- ಬೆಳ್ಳುಳ್ಳಿ
- ಲವಂಗ
- ಹಸಿರು ಮೆಣಸಿನಕಾಯಿ - 4
- ಕೆಂಪು ಮೆಣಸಿನಕಾಯಿ - 10
- ಕಡಲೆ - 3 ಟೀಸ್ಪೂನ್
- ಉದ್ದು - 3 ಟೀಸ್ಪೂನ್
- ಜೀರಿಗೆ - 1 tbsp
- ಇಂಗು - 1/4 ಟೀಸ್ಪೂನ್
- ಕಲ್ಲು ಉಪ್ಪು - 1 ಟೀಸ್ಪೂನ್
- ನೀರು - ಅಗತ್ಯವಿರುವಂತೆ
ಮಸಾಲೆಗೆ ಬೇಕಾದ ಪದಾರ್ಥಗಳು
- ಎಣ್ಣೆ - 1 tbsp
- ಸಾಸಿವೆ - 1/2 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 1 ಸಂಖ್ಯೆ
- ಉದ್ದು - 1/2 ಟೀಸ್ಪೂನ್
- ಇಂಗು ಪುಡಿ - 1/4 ಟೀಸ್ಪೂನ್
- ಕರಿಬೇವಿನ ಎಲೆಗಳು
ಚಟ್ನಿ ಮಾಡುವ ವಿಧಾನ
ಪಾತ್ರಯನ್ನು ಒಲೆಯಲ್ಲಿಟ್ಟು ಸಣ್ಣ ಉರಿಯಲ್ಲಿ ಎಳ್ಳೆಣ್ಣೆಯನ್ನು ಹಾಕಿ, ಎಣ್ಣೆ ಬಿಸಿಯಾದ ಬಳಿಕ ಕಡಲೆ ಉದ್ದಿನಬೇಳೆಯೊಂದಿಗೆ ಹುರಿಯಿರಿ. ಎರಡೂ ಗೋಲ್ಡನ್ ಬ್ರೌನ್ ಆದ ನಂತರ ಜೀರಿಗೆ ಸೇರಿಸಿ. ನಂತರ ಕೆಂಪು ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಸುಮಾರು ಒಂದು ನಿಮಿಷ ಫ್ರೈ ಮಾಡಿ.
ಮುಂದೆ, ಅದಕ್ಕೆ ಬೆಳ್ಳುಳ್ಳಿ ಮತ್ತು ತೆಂಗಿನ ತುರಿಯನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 3 ನಿಮಿಷಗಳ ಕಾಲ ಹುರಿಯಿರಿ. ನಂತರ ಅದಕ್ಕೆ ಬೇಕಾದಷ್ಟು ಹುಣಸೆಹಣ್ಣು ಹಾಕಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಎಲ್ಲವೂ ಚೆನ್ನಾಗಿ ಹುರಿದ ನಂತರ ಕಲ್ಲು ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಕೊತ್ತಂಬರಿ ಸೊಪ್ಪು ಚೆನ್ನಾಗಿ ಬಾಡಿದ ನಂತರ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ತುಂಬಾ ದಪ್ಪನೆಯ ಚಟ್ನಿಯಾಗಿ ರುಬ್ಬಿಕೊಳ್ಳಿ. ನಂತರ ಒಲೆಯಲ್ಲಿ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಮತ್ತು ಉದ್ದಿನಬೇಳೆಯನ್ನು ಹಾಕಿ ಮತ್ತು ಸಾಸಿವೆ ಸಿಡಿದಾಗ ಕೆಂಪು ಮೆಣಸಿನಕಾಯಿ ಮತ್ತು ಇಂಗು ಪುಡಿಯನ್ನು ಹಾಕಿ.
ಕೊನೆಗೆ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ ಸ್ಟವ್ ಆಫ್ ಮಾಡಿ. ಈಗ ರುಬ್ಬಿದ ಚಟ್ನಿಗೆ ಮಸಾಲೆಗಳ ಮಿಕ್ಸ್ ಮಾಡಿದರೆ ರುಚಿ ರುಚಿಯ ಕೊತ್ತಂಬರಿ ಸೊಪ್ಪಿನ ಚಟ್ನಿ ಸವಿಯಲು ರೆಡಿ. ಚಟ್ನಿಯನ್ನು ಅನ್ನ, ಇಡ್ಲಿ, ದೋಸೆ ಹೀಗೆ ನಾನಾ ವಿಧದ ತಿಂಡಿಯ ಜೊತೆ ಸವಿಯಬಹುದು.



Click it and Unblock the Notifications
