ಕೊತ್ತಂಬರಿ ಸೊಪ್ಪಿನ ಚಟ್ನಿ, ಒಮ್ಮೆ ನೀವೂ ಮಾಡಿ ನೋಡಿ...

By: Roopa
Subscribe to Boldsky

ಚಟ್ನಿಯು ಬಹುತೇಕ ಎಲ್ಲಾ ಬಗೆಯ ತಿಂಡಿ ತಿನಿಸುಗಳ ಜೊತೆಯಲ್ಲಿ ಸೇವಿಸಬಹುದಾದ ಖಾದ್ಯವಾಗಿರುತ್ತದೆ. ಭಾರತೀಯ ಚಟ್ನಿಯು ಸಿಹಿ, ಹುಳಿ ಮತ್ತು ಮಸಾಲೆಗಳಿಂದ ಕೂಡಿದ್ದು, ತನ್ನ ವಿಭಿನ್ನ ಶೈಲಿಯ ರುಚಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರು ಚಟ್ನಿಯನ್ನು ರೋಟಿ, ಅನ್ನ, ಚಾಟ್ ಮತ್ತು ಬಜ್ಜಿ, ವಡೆ ಮುಂತಾದವುಗಳ ಜೊತೆಯಲ್ಲಿ ಸೇವಿಸುತ್ತಾರೆ. ಚಟ್ನಿಯ ಮತ್ತೊಂದು ವಿಶೇಷತೆಯೇನೆಂದರೆ ಇದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.

ಒಂದು ವೇಳೆ ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ನಿಮ್ಮ ಸಂಬಂಧಿಕರು ಅಥವಾ ನೆಂಟರು ಆಗಮಿಸಿದರೆ, ಆಗ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನೆಲ್ಲ ಸೇರಿಸಿ, ಒಂದಿಷ್ಟು ಚಟ್ನಿಯನ್ನು ನೀವು ರುಬ್ಬಿಕೊಳ್ಳಬಹುದು. ಅದನ್ನು ಊಟದಲ್ಲಿ ಸಹ ಬಡಿಸಬಹುದು. ಬನ್ನಿ ಇಂದು ನಾವು ವಿಶೇಷವಾದ ಕೊತ್ತಂಬರಿ ಚಟ್ನಿ ಅಥವಾ ಗ್ರೀನ್ ಚಟ್ನಿ ಮಾಡುವುದನ್ನು ತಿಳಿದುಕೊಳ್ಳೋಣ...

ಕೊತ್ತಂಬರಿ ಚಟ್ನಿಯ ವಿಡಿಯೋ

Coriander Chutney Recipe
ಕೊತ್ತಂಬರಿ ಚಟ್ನಿ | ಕೊತ್ತಂಬರಿ ಚಟ್ನಿ ಮಾಡುವ ವಿಧಾನ | ಕೊತ್ತಂಬರಿ ಚಟ್ನಿಯ ವಿಡಿಯೋ | ಚಟ್ನಿ ಮಾಡುವ ವಿಧಾನ
Prep Time
10 Mins
Cook Time
5M
Total Time
15 Mins

Recipe By: ರೀಟಾ ತ್ಯಾಗಿ

Recipe Type: ಕಾಂಡಿಮೆಂಟ್ಸ್

Serves: 1 ಜಾರ್

Ingredients
 • ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ)- 1 ದೊಡ್ಡ ಬಟ್ಟಲು

  ಮಾವಿನ ಕಾಯಿ (ಸಿಪ್ಪೆ ತೆಗೆದ,ಸಣ್ಣಗೆ ಕತ್ತರಿಸಿದ)- 1 ಸಣ್ಣ ಗಾತ್ರದ

  ಈರುಳ್ಳಿ (ಸಿಪ್ಪೆ ತೆಗೆದ ,ಸಣ್ಣಗೆ ಕತ್ತರಿಸಿದ)- 1 ಮಧ್ಯಮ ಗಾತ್ರದ

  ಹಸಿ ಮೆಣಸಿನಕಾಯಿ- 8-10 ಸಣ್ಣ ಗಾತ್ರದ

  ಶುಂಟಿ (ಸಿಪ್ಪೆ ತೆಗೆದ)- 2 ಇಂಚಿನಷ್ಟು

  ಉಪ್ಪು- 2 ಟೀ ಸ್ಪೂನ್

  ಸಕ್ಕರೆ- 2 ಟೀ ಸ್ಪೂನ್

  ನಿಂಬೆ ಹುಳಿ- 2-3 ಟೇಬಲ್ ಸ್ಪೂನ್

Red Rice Kanda Poha
How to Prepare
 • 1. ಎಲ್ಲಾ ಸಾಮಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ.

  2. ಚಟ್ನಿಯನ್ನು ತೆಳುವಾಗಿ ರುಬ್ಬಿ.

Instructions
 • 1. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಇಡಿ
 • 2. ಬೇಕಾದ್ದಲ್ಲಿ 2-3 ಟೇಬಲ್ ಸ್ಪೂನ್ ನೀರನ್ನು ಹಾಕಿ ತೆಳುವಾಗಿ ರುಬ್ಬಿ
 • 3. ಹೆಚ್ಚಿನ ರುಚಿಗಾಗಿ ಪುದೀನಾ ಎಲೆಗಳನ್ನು ಹಾಕಬಹುದು
 • 4. ಚಟ್ನಿಯನ್ನು ಗಟ್ಟಿಯಾದ ಮುಚ್ಚಳವಿರುವ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಿ
Nutritional Information
 • ಸರ್ವಿಂಗ್ ಸೈಜ್ - 1 ಟೇಬಲ್ ಸ್ಪೂನ್
 • ಕ್ಯಾಲೋರಿಗಳು - 4 cal
 • ಫ್ಯಾಟ್ - 0.1 ಗ್ರಾಂ
 • ಪ್ರೋಟೀನ್‌ಗಳು - 0.3 ಗ್ರಾಂ
 • ಕಾರ್ಬೋಹೈಡ್ರೇಟ್‌ಗಳು - 0.7 ಗ್ರಾಂ
 • ಫೈಬರ್ - 0.4 ಗ್ರಾಂ

ಮಾಡುವ ವಿಧಾನ-

1. ಎಲ್ಲಾ ಸಾಮಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ.

Coriander Chutney Recipe
Coriander Chutney Recipe
Coriander Chutney Recipe
Coriander Chutney Recipe
Coriander Chutney Recipe
Coriander Chutney Recipe
Coriander Chutney Recipe
Coriander Chutney Recipe

2. ಚಟ್ನಿಯನ್ನು ತೆಳುವಾಗಿ ರುಬ್ಬಿ.

Coriander Chutney Recipe
Coriander Chutney Recipe
[ 4 of 5 - 25 Users]
Please Wait while comments are loading...
Subscribe Newsletter