Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೊತ್ತಂಬರಿ ಸೊಪ್ಪಿನ ಚಟ್ನಿ, ಒಮ್ಮೆ ನೀವೂ ಮಾಡಿ ನೋಡಿ...
ಚಟ್ನಿಯು ಬಹುತೇಕ ಎಲ್ಲಾ ಬಗೆಯ ತಿಂಡಿ ತಿನಿಸುಗಳ ಜೊತೆಯಲ್ಲಿ ಸೇವಿಸಬಹುದಾದ ಖಾದ್ಯವಾಗಿರುತ್ತದೆ. ಭಾರತೀಯ ಚಟ್ನಿಯು ಸಿಹಿ, ಹುಳಿ ಮತ್ತು ಮಸಾಲೆಗಳಿಂದ ಕೂಡಿದ್ದು, ತನ್ನ ವಿಭಿನ್ನ ಶೈಲಿಯ ರುಚಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರು ಚಟ್ನಿಯನ್ನು ರೋಟಿ, ಅನ್ನ, ಚಾಟ್ ಮತ್ತು ಬಜ್ಜಿ, ವಡೆ ಮುಂತಾದವುಗಳ ಜೊತೆಯಲ್ಲಿ ಸೇವಿಸುತ್ತಾರೆ. ಚಟ್ನಿಯ ಮತ್ತೊಂದು ವಿಶೇಷತೆಯೇನೆಂದರೆ ಇದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.
ಒಂದು ವೇಳೆ ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ನಿಮ್ಮ ಸಂಬಂಧಿಕರು ಅಥವಾ ನೆಂಟರು ಆಗಮಿಸಿದರೆ, ಆಗ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನೆಲ್ಲ ಸೇರಿಸಿ, ಒಂದಿಷ್ಟು ಚಟ್ನಿಯನ್ನು ನೀವು ರುಬ್ಬಿಕೊಳ್ಳಬಹುದು. ಅದನ್ನು ಊಟದಲ್ಲಿ ಸಹ ಬಡಿಸಬಹುದು. ಬನ್ನಿ ಇಂದು ನಾವು ವಿಶೇಷವಾದ ಕೊತ್ತಂಬರಿ ಚಟ್ನಿ ಅಥವಾ ಗ್ರೀನ್ ಚಟ್ನಿ ಮಾಡುವುದನ್ನು ತಿಳಿದುಕೊಳ್ಳೋಣ...
ಕೊತ್ತಂಬರಿ ಚಟ್ನಿಯ ವಿಡಿಯೋ

Recipe By: ರೀಟಾ ತ್ಯಾಗಿ
Recipe Type: ಕಾಂಡಿಮೆಂಟ್ಸ್
Serves: 1 ಜಾರ್
-
ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ)- 1 ದೊಡ್ಡ ಬಟ್ಟಲು
ಮಾವಿನ ಕಾಯಿ (ಸಿಪ್ಪೆ ತೆಗೆದ,ಸಣ್ಣಗೆ ಕತ್ತರಿಸಿದ)- 1 ಸಣ್ಣ ಗಾತ್ರದ
ಈರುಳ್ಳಿ (ಸಿಪ್ಪೆ ತೆಗೆದ ,ಸಣ್ಣಗೆ ಕತ್ತರಿಸಿದ)- 1 ಮಧ್ಯಮ ಗಾತ್ರದ
ಹಸಿ ಮೆಣಸಿನಕಾಯಿ- 8-10 ಸಣ್ಣ ಗಾತ್ರದ
ಶುಂಟಿ (ಸಿಪ್ಪೆ ತೆಗೆದ)- 2 ಇಂಚಿನಷ್ಟು
ಉಪ್ಪು- 2 ಟೀ ಸ್ಪೂನ್
ಸಕ್ಕರೆ- 2 ಟೀ ಸ್ಪೂನ್
ನಿಂಬೆ ಹುಳಿ- 2-3 ಟೇಬಲ್ ಸ್ಪೂನ್
-
1. ಎಲ್ಲಾ ಸಾಮಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ.
2. ಚಟ್ನಿಯನ್ನು ತೆಳುವಾಗಿ ರುಬ್ಬಿ.
- 1. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಇಡಿ
- 2. ಬೇಕಾದ್ದಲ್ಲಿ 2-3 ಟೇಬಲ್ ಸ್ಪೂನ್ ನೀರನ್ನು ಹಾಕಿ ತೆಳುವಾಗಿ ರುಬ್ಬಿ
- 3. ಹೆಚ್ಚಿನ ರುಚಿಗಾಗಿ ಪುದೀನಾ ಎಲೆಗಳನ್ನು ಹಾಕಬಹುದು
- 4. ಚಟ್ನಿಯನ್ನು ಗಟ್ಟಿಯಾದ ಮುಚ್ಚಳವಿರುವ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಿ
- ಸರ್ವಿಂಗ್ ಸೈಜ್ - 1 ಟೇಬಲ್ ಸ್ಪೂನ್
- ಕ್ಯಾಲೋರಿಗಳು - 4 cal
- ಫ್ಯಾಟ್ - 0.1 ಗ್ರಾಂ
- ಪ್ರೋಟೀನ್‌ಗಳು - 0.3 ಗ್ರಾಂ
- ಕಾರ್ಬೋಹೈಡ್ರೇಟ್‌ಗಳು - 0.7 ಗ್ರಾಂ
- ಫೈಬರ್ - 0.4 ಗ್ರಾಂ
ಮಾಡುವ ವಿಧಾನ-
1. ಎಲ್ಲಾ ಸಾಮಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ.








2. ಚಟ್ನಿಯನ್ನು ತೆಳುವಾಗಿ ರುಬ್ಬಿ.





Click it and Unblock the Notifications
