Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೊರಿಯಾಂಡರ್ ಚಿಕನ್ ರೋಸ್ಟ್ ರೆಸಿಪಿ
ಮಾನ್ಸೂನ್ ಕಾಲ ಶುರುವಾಗಿದೆ. ಜಿಟಿಜಿಟಿ ಮಳೆ, ಚಳಿಯ ವಾತಾವರಣ ಇದರ ನಡುವೆ ರುಚಿಕರವಾದ ಚಿಕನ್ ರೆಸಿಪಿ ಇದ್ದರೆ ಆಹಾ ಅದ್ಭುತ....
ಶಾಖಾಹಾರಿಗಳಿಗೆ ಚಳಿಗಾಲದಲ್ಲಿ ಬೇಕೆ ಬೇಕು ಅನಿಸುವ ಅಡುಗೆ ಚಿಕನ್ ಖಾದ್ಯಗಳು. ಇದುವರೆಗೂ ನಿಮ್ಮದೇ ಆದ ಶೈಲಿಯಲ್ಲಿ, ಒಂದೇ ರುಚಿಯಲ್ಲಿ ಚಿಕನ್ ಖಾದ್ಯಗಳನ್ನು ಮಾಡಿ ಬೋರ್ ಆಗಿದ್ದರೆ ವಿಭಿನ್ನ ರುಚಿಯನ್ನು ತಯಾರಿಸಿ ನೋಡಿ.

ಇಂದು ಚಿಕನ್ನಿಂದ ತಯಾರಿಸಬಹುದಾದ ಕೊರಿಯಾಂಡರ್ ಚಿಕನ್ ರೆಸಿಪಿ ಅಥವಾ ಸಿಲಾಂಟ್ರೋ ಚಿಕನ್ ರೋಸ್ಟ್ ಅನ್ನು ಮಾಡುವ ಹಂತಹಂತದ ವಿಧಾನವನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ. ನೀವು ಒಮ್ಮೆ ಮಾಡಿ ನೋಡಿ:
Recipe By: Boldsky
Recipe Type: Snacks
Serves: 2
-
ಬೇಕಾಗುವ ಪದಾರ್ಥಗಳು
* ಚಿಕನ್ - 500 ಗ್ರಾಂ
* ಮೆಣಸಿನ ಪುಡಿ - 1 ಚಮಚ
* ಗರಂ ಮಸಾಲ - 1 ಚಮಚ
* ಅರಿಶಿನ - 1/4 ಚಮಚ
* ಉಪ್ಪು - ರುಚಿಗೆ
* ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
* ಕೊತ್ತಂಬರಿ ಮತ್ತು ಪುದೀನ ಪೇಸ್ಟ್ - 3/4 ಕಪ್
* ಎಣ್ಣೆ - 2 ಚಮಚ
-
ಮಾಡುವ ವಿಧಾನ
* ಶುಭ್ರವಾಗಿ ತೊಳೆದ ಚಿಕನ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಗಂಟೆ ನೆನೆಸಿಡಿ.
* ಒಂದು ಗಂಟೆಯ ನಂತರ ಪ್ಯಾನ್ಗೆಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ನೆನೆಸಿದ ಚಿಕನ್ ಅನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಚಿಕನ್ ಎಣ್ಣೆಯಲ್ಲೆ ಸಂಪೂರ್ಣವಾಗಿ ಬೇಯಬೇಕು, ನೀರನ್ನು ಹಾಕುವಂತಿಲ್ಲ.
* ಚಿಕನ್ ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ 5 ನಿಮಿಷ ಬಿಡಿ.
* ಈಗ ರುಚಿಯಾದ ಸಿಲಾಂಟ್ರೋ ಚಿಕನ್ ರೋಸ್ಟ್ ಸವಿಯಲು ಸಿದ್ಧ.
- ನಿಮಗೆ ಇಷ್ಟವಿದ್ದರೆ ಇದಕ್ಕೆ ಚಿಕನ್ ಬೇಯುವಾಗ 2ಚಮಚ ವೈನ್ ಅನ್ನು ಹಾಕಬಹುದು.
- ಕ್ಯಾಲೋರಿ - 284
- ಕೊಬ್ಬು - 6.2 ಗ್ರಾಂ
- ಪ್ರೋಟೀನ್ - 53.4 ಗ್ರಾಂ



Click it and Unblock the Notifications
