Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಾಲು ಕಾಯಿಸುವಾಗ ಪಾತ್ರೆಯಿಂದ ಹೊರ ಚೆಲ್ಲದಿರಲು ಈ ಕುಕ್ಕಿಂಗ್ ಟ್ರಿಕ್ಸ್ ಬೆಸ್ಟ್
ಸ್ಟೌವ್ ಮೇಲೆ ಹಾಲು ಕಾಯಿಸಲು ಇಟ್ಟು ಕಾಯುತ್ತಾ ನಿಂತರೂ ಹಾಲು ಕುದಿಯುವುದೇ ಇಲ್ಲ, ಈ ಹಾಲು ಕುದಿ ಬರಲು ಇನ್ನಷ್ಟು ಸಮಯ ಹಿಡಿಯುತ್ತೆ ಅಂತ ನಮ್ಮ ಕಣ್ಣು ಸ್ವಲ್ಪ ಅತ್ತಿತ್ತ ಹೋದರೆ ಸಾಕು ಅಷ್ಟರಲ್ಲಿಯೇ ಹಾಲು ಉಕ್ಕಿ ಬಂದು ಸ್ಟೌವ್ ಮೇಲೆಲ್ಲಾ ಚೆಲ್ಲಿ ಗಲೀಜಾಗಿ ಬಿಡುತ್ತದೆ, ನಂತರ ಅದೆಲ್ಲಾ ಕ್ಲೀನ್ ಮಾಡುವುದು ಬಹುದೊಡ್ಡ ತಲೆನೋವು.
ಹಾಲು ಕುದಿಸುವಾಗ, ಟೀ ಮಾಡುವಾಗ ಈ ಬಗೆಯ ಸಮಸ್ಯೆ ಸರ್ವೇ ಸಾಮಾನ್ಯ ಅಲ್ವಾ? ಹಾಲು ಕುದಿ ಬಂದು ಪಾತ್ರೆಯಿಂಣದ ಹೊರ ಚೆಲ್ಲುವುದನ್ನು ತಡೆಗಟ್ಟಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ ವರ್ಕ್ ಆಗುತ್ತೆ:

ಪಾತ್ರೆಯ ಬಾಯಿಗೆ ಸ್ವಲ್ಪ ಬೆಣ್ಣೆ ಹಚ್ಚುವುದು
ಈ ಟಿಪ್ಸ್ ಟ್ರೈ ಮಾಡಿಲ್ಲ ಎಂದಾದರೆ ಒಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ವರ್ಕ್
ಆಗುತ್ತೆ, ಪಾತ್ರೆಯ ಬಾಯಿ ಹಾಗೂ ಒಳಗಡೆ ಸ್ವಲ್ಪ ಬೆಣ್ಣೆ ಹಚ್ಚಿದರೆ ಸಾಕು ಹಾಲು
ಉಕ್ಕಿ ಹರಿಯುವುದನ್ನು ತಪ್ಪಿಸಬಹುದು, ಹಾಗಂತ ತುಂಬಾ ಕುದಿಸಿದರೆ ಖಂಡಿತ ಉಕ್ಕಿ
ಹರಿಯುತ್ತದೆ, ಈ ಟ್ರಿಕ್ ಬಳಸಿದರೆ ಪಟ್ ಅಂತ ಹಾಲು ಹೊರ ಚೆಲ್ಲುವುದನ್ನು
ತಡೆಗಟ್ಟಬಹುದು.ಹಾಗಂತ ಬೆಣ್ಣೆ ತುಂಬಾ ಹಚ್ಚಬಾರದು, ಸ್ವಲ್ಪ ಹಚ್ಚಿದರೆ
ಸಾಕು.
ಸ್ಪಿಲ್ ಸ್ಟಾಪರ್
ಹಾಲು ಹೊರಚೆಲ್ಲುವುದನ್ನು ತಡೆಯಲು ಸ್ಪಿಲ್ ಸ್ಟಾಪರ್ ಅಂತ ದೊರೆಯುತ್ತದೆ,
ಅದನ್ನು ಕೂಡ ಬಳಸಬಹುದು. ಇದನ್ನು ಹಾಲಿನ ಪಾತ್ರೆ ಮೇಲಿಟ್ಟು ಕುದಿಸಿದರೆ
ಪಾತ್ರೆಗೆ ಫಿಟ್ ಆಗಿ ಕೂರುವ ಈ ಸ್ಪಿಲ್ ಸ್ಟಾಪರ್ (ಇದೊಂದು ರಬ್ಬರ್ ಡಸ್ಕ್)
ಹಾಲು ಹೊರ ಚೆಲ್ಲುವುದನ್ನು ತಡೆಗಟ್ಟಲು ಸಹಕಾರಿ.
ಹಾಲಿನ ಮೇಲೆ ನೊರೆ ಬರಲಾರಂಭಿಸಿದಾಗ ನೀರು
ಚಿಮುಕಿಸುವುದು
ಹೌದು ನೀವು ಹಾಲನ್ನು ಇಟ್ಟು ಕಾಯಿಸಲಾರಂಭಿಸಿದಾಗ ಹಾಲು ಕುದಿ ಬಂದು ಮೇಲ್ಭಾಗ
ನೊರೆ ರೀತಿ ಬರುತ್ತದೆ, ಆವಾಗ ಸ್ವಲ್ಪ ನೀರು ಚಿಮುಕಿಸಿದರೆ ಸಾಕು ಹಾಲು ಕುದಿ
ಬರಲ್ಲ. ಈ ಟ್ರಿಕಕ್ ಬಳಸಿದರೆ ಹಾಲನ್ನು ಮತ್ತಷ್ಟು ಹೊತ್ತು ಕುದಿಸಬಹುದು.
ಹಾಲು ಕುದಿ ಬರುವಾಗ ಮರದ ಸ್ಪೂನ್ ಹಾಕಿಡಿ
ನೀವು ಹಾಲಿನ ಪಾತ್ರೆಗೆ ಹಾಲು ಸುರಿದು ಮರದ ಸ್ಪೂನ್‌ವೊಂದು ಹಾಕಿಟ್ಟರೆ ಹಾಲು
ಕುದಿ ಬಂದು ಹೊರ ಚೆಲ್ಲುವುದನ್ನು ತಡೆಗಟ್ಟಬಹುದು. ಬರಿ ಸ್ಪೂನ್ ಇಟ್ಟರೆ
ಸಾಕಾಗಲ್ಲ ಆಗಾಗ ತಿರುಗಿಸುತ್ತಾ ನೀವು ಹಾಲನ್ನು ಕಾಯಿಸಿದರೆ ಹಾಲು ಉಕ್ಕಿ ಬಂದು
ಪಾತ್ರೆಯಿಂದ ಹೊರ ಚೆಲ್ಲಲ್ಲ.
ಎರಡು ಪಾತ್ರೆ ಬಳಸುವುದು
ಒಂದು ದೊಡ್ಡ ಪಾತ್ರೆ ತೆಗೆದು ಅದರಲ್ಲಿ ಅರ್ಧದಷ್ಟು ನೀರು ಹಾಕಿ, ನಂತರ ಆ
ಪಾತ್ರೆಯೊಳಗೆ ಹಾಲಿನ ಪಾತ್ರೆ ಇಟ್ಟು ಕುದಿಸಿ, ಈ ರಿತಿ ಕುದಿಸಿದರೆ ಹಾಲು ಕುದಿ
ಬಂದು ಹೊರ ಚೆಲ್ಲಲ್ಲ. ನೀವು ನೀರು ಹಾಕಲು ದೊಡ್ಡ ಪಾತ್ರೆ ಬಳಸಬೇಕು.
ಸೌಟ್‌ನಿಂದ ತಿರುಗಿಸುತ್ತಾ ಇರುವುದು
ಹಾಲು ಕುದಿ ಬರಲಾರಂಭಿಸಿದಾಗ ಸೌಟ್‌ನಿಂದ ತಿರುಗಿಸುತ್ತಾ ಇದ್ದರೆ ಹಾಲು ಉಕ್ಕಿ
ಬರಲ್ಲ. ಆದರೆ ಈ ವಿಧಾನದಲ್ಲಿ ಹಾಲನ್ನು ಕಾಯಿಸಲು ಇಟ್ಟರೆ ಅಲ್ಲೇ
ನಿಲ್ಲಬೇಕಾಗುತ್ತದೆ, ಹಾಲನ್ನು ಕುದಿಸಿ ಒಂದು ಲೀಟರ್ ಹಾಲನ್ನು ಅರ್ಧ
ಲೀಟರ್‌ನಷ್ಟು ಮಾಡುವಾಗ ಈ ವಿಧಾನ ಸಹಾಯ ಮಾಡುತ್ತದೆ.
ಚಿಟಿಕೆಯಷ್ಟು ಉಪ್ಪು ಹಾಕುವುದು
ಈ ಟ್ರಿಕ್ಸ್‌ಗೆ ಹಾಲು ಒಂದು ಲೀಟರ್‌ಗಿಂತ ಹೆಚ್ಚಿರಲಿ, ನೀವು ಹಾಲಿಗೆ
ಚಟಿಕೆಯಷ್ಟು ಉಪ್ಪು ಸೇರಿಸಿದರೆ ಹಾಲು ಕುದಿ ಬಂದು ಹೊರ ಚೆಲ್ಲುವುದನ್ನು
ತಡೆಗಟ್ಟಬಹುದು.
ಹಾಲು ಪಟ್ ಅಂತ ಉಕ್ಕಿ ಬಂದು ಪಾತ್ರೆಯಿಂದ ಹೊರ ಚೆಲ್ಲುವುದನ್ನು ತಡೆಗಟ್ಟಲು ಈ ಟ್ರಿಕ್ಸ್ ಬಳಸಿ.



Click it and Unblock the Notifications
