Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಪಾತಿ ಮಾಡಿದರೆ ಗಟ್ಟಿಯಾಗುವುದೇ? ಚಪಾತಿ ಸಾಫ್ಟ್ ಆಗಿ ಬರಲು ಈ ಟಿಪ್ಸ್ ವರ್ಕ್ ಆಗುತ್ತೆ
ಚಪಾತಿ ಎಲ್ಲರೂ ಮಾಡ್ತಾರೆ, ಅದರೆ ಸಾಫ್ಟ್ ಹಾಗೂ ಟೇಸ್ಟಿ ಚಪಾತಿ ಕೆಲವರಿಗಷ್ಟೇ ತಯಾರಿ ಮಾಡುವುದಕ್ಕೆ ಬರುವುದು. ಕೆಲವರು ಚಪಾತಿ ಮಾಡಿದರೆ ಖಡಕ್ ರೊಟ್ಟಿಯಂತೆ ಗಟ್ಟಿಯಾಗಿರುತ್ತದೆ.
ಚಪಾತಿ ಗಟ್ಟಿಯಾಗಿದ್ದರೆ ಅಷ್ಟು ಟೇಸ್ಟಿ ಅನಿಸಲ್ಲ, ಅದೇ ಮೃದುವಾದ ಚಪಾತಿಗೆ ಸ್ವಲ್ಪ ತುಪ್ಪ ಸವರಿ ತಿಂದರೆ ಇದೆಯಲ್ಲಾ ರುಚಿ ತುಂಬಾನೇ ಸೂಪರ್ ಅಗಿರುತ್ತದೆ. ಈ ಚಪಾತಿಗೆ ಸಾರು ಏನೂ ಇಲ್ಲದಿದ್ದರೂ ಹಾಗೇ ರೋಲ್ ಮಾಡಿ ತಿನ್ನಬಹುದು.

ಚಪಾತಿಯನ್ನು ಮೃದುವಾಗಿ ಮಾಡಲು ಈ ಟಿಪ್ಸ್ ಸಹಕಾರಿಯಾಗುವುದು ನೋಡಿ:
ಸ್ಟೆಪ್ 1 : ನೀವು ಬಿಸಿ ನೀರು ಹಾಕಿ ಅದರಲ್ಲಿ ಹಿಟ್ಟು ರುಚಿಗೆ ಅವಶ್ಯಕವಿರುವ ಉಪ್ಪು ಹಾಕಿ ಮಿಕ್ಸ್ ಮಾಡಬೇಕು.
ಸ್ಟೆಪ್ 2: ನೀವು ಈಗ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ , ಅದರ ಮಧ್ಯಭಾಗದಲ್ಲಿ ಉಪ್ಪು ಕಲೆಸಿದ ಬಸಿ ಣಿರು ಹಾಕಿ ಕಲೆಸಿ, ನಂತರ ಸ್ವಲ್ಪ ಎಣ್ಣೆ ಹಾಕಿ ಕೆಲಸಿ, ನಂತರ ಕಲೆಸಿಟ್ಟ ಹಿಟ್ಟನ್ನು ಮಸ್ಲಿನ್ ಬಟ್ಟೆಯಿಂದ ಕವರ್ ಮಾಡಿ 2 ಗಂಟೆ ಇಡಿ.
ಸ್ಟೆಪ್ 3: ನಂತರ ಹಿಟ್ಟಿನಿಂದ ಡೈರೆಕ್ಟ್ ಉಂಡೆ ಕಟ್ಟುವ ಬದಲಿಗೆ ನೀವು ಒಂದು ಉಂಡೆಗೆ ಬೇಕಾಗುವ ಹಿಟ್ಟು ತೆಗೆದು ಅದನ್ನು ರೋಲ್ ಮಾಡಿ ನಂತರ ಆ ರೋಲ್‌ನಿಂದ ರೌಂಡ್ ಮಾಡಿ.
ಸ್ಟೆಪ್ 4: ಬಳಿಕ ಚಪಾತಿಗೆ ತಟ್ಟಿದ ರೀತಿಯಲ್ಲಿ ತಟ್ಟಿ.
ಸ್ಟೆಪ್ 5: ತವಾಗೆ ಎಣ್ಣೆ ಸವರಿ ತಟ್ಟಿದ ಹಿಟ್ಟು ಹಾಕಿ ಅದರ ಮೇಲೆ ಎಣ್ಣೆ ಸವರಿ, ನಂತರ ಮಗುಚಿ ಹಾಕಿ ಮತ್ತೆ ಎಣ್ಣೆ ಸವಿರಿ, ಹೀಗೆ ಮಾಡಿದಾಗ ಚಪಾತಿ ಉಬ್ಬಿ ಬರುತ್ತದೆ, ಅಲ್ಲದೆ ಚಪಾತಿ ಮೃದುವಾಗಿರುತ್ತದೆ, ನೀವು ರೋಲ್ ರೀತಿ ಮಾಡಿ ಉಂಡೆ ಕಟ್ಟಿರುವುದರಿಂದ ಈ ಪರೋಟ ಪದರ-ಪದರವಾಗಿ ಬರುವಂತೆ ಚಪಾತಿ ಮುರಿಯುವಾಗ ಬರುವುದು, ತಿನ್ನಲು ಸೂಪರ್ ಅನಿಸುತ್ತದೆ.
ಇನ್ನು ನೀವು ಈ ಬಗ್ಗೆ ಕೂಡ ಗಮನಹರಿಸಬೇಕು?
ನೀವು ತೆಗೆದುಕೊಂಡಿರುವ ಹಿಟ್ಟಿಗೆ ಎಷ್ಟು ನೀರು ಬೇಕಾಗುತ್ತದೆ ಎಂಬ ಹದ ನಿಮಗೆ ಗೊತ್ತಿರಬೇಕು, ನೀರು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ನೀರು ಕಡಿಮೆಯಾದರೆ ಹಿಟ್ಟು ಗಟ್ಟಿಯಾಗುತ್ತದೆ, ಅದೇ ನೀರು ಹೆಚ್ಚಾದರೆ ಅಂಟುತ್ತದೆ, ಮತ್ತೆ ಹಿಟ್ಟು ಸೇರಿಸಿ ರೆಡಿ ಮಾಡಿದರೂ ಚಪಾತಿ ಮೃದುವಾಗಿರಲ್ಲ. ನೀವು ಒಂದು ಕಪ್ ಹಿಟ್ಟು ತೆಗೆದುಕೊಂಡರೆ 1/4 ಕಪ್ ನೀರು, ಹಾಗೂ ಎಣ್ಣೆ 1-2 ಹಾಕಿದರೆ ಸಾಕು ಹಿಟ್ಟು ಚೆನ್ನಾಗಿ ಬರುತ್ತದೆ.
ಹಿಟ್ಟು ತುಂಬಾ ಹೆಚ್ಚು ಅಥವಾ ಕಡಿಮೆ ಕಲೆಸಬಾರದು
ಹಿಟ್ಟು ಕಲೆಸುವಾಗ , ಹಿಟ್ಟು ಮೃದುವಾಗುವವರೆಗೆ ಕಲೆಸಬೇಕು, ಇಲ್ಲದಿದ್ದರೆ ಚಪಾತಿ ಗಟ್ಟಿಯಾಗುತ್ತದೆ, ಇನ್ನು ಹಿಟ್ಟು ಹೆಚ್ಚು ಕಲೆಸಿದರೂ ಕಷ್ಡ.
ಹಿಟ್ಟು ಕಲೆಸಿದ ತಕ್ಷಣ ಚಪಾತಿ ಲಟ್ಟಿಸಬೇಡಿ, ಸ್ವಲ್ಪ ಹೊತ್ತು ಇಡಿ, 2 ಗಂಟೆ ಇಟ್ಟರೆ ತುಂಬಾ ಒಳ್ಳೆಯದು.



Click it and Unblock the Notifications
