Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆಹಾ ಕೋನ್ ಕಾಫಿ ಸೂಪರ್ ಐಡಿಯಾ ಅಲ್ವಾ?
Recipes
oi-Reena TK
Posted By: Reena TK
ಇತ್ತೀಚೆಗೆ ಕೋನ್ ಕಾಫಿ ತುಂಬಾ ಟ್ರೆಂಡ್ನಲ್ಲಿದೆ, ಈ ಕೋನ್ ಕಾಫಿ ತುಂಬಾನೇ ವಿಶೇಷವಾಗಿದೆ, ಕೋನ್ನಲ್ಲಿ ಕಾಫಿ ಹೀರಿ, ಆ ಕೋನ್ ತಿನ್ನುವುದು ತುಂಬಾನೇ ಚೆನ್ನಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಚಮಚ ಇನ್ಸ್ಟಾಂಟ್ ಕಾಫಿ ಪುಡಿ
8 ಚಮಚ ಸಕ್ಕರೆ
2 ಕಪ್ ಬಿಸಿ ಹಾಲು
ಮಾಡುವ ವಿಧಾನ:
- 1 ಚಮಚ ಕಾಫಿ ಪುಡಿ, 2 ಚಮಚ ಸಕ್ಕರೆ 1 ಚಮಚ ಬಿಸಿ ನೀರು ಹಾಕಿ ಚೆನ್ನಾಗಿ ಕರಗಿಸಿ, 2-3 ನಿಮಿಷ ಕರಗಿಸಿ, ಸಕ್ಕರೆ ಸಂಪೂರ್ಣ ಕರಗಿದ ಮೇಲೆ 1/2 ಕಪ್ ಬಿಸಿ ಹಾಲು ಮೆಲ್ಲನೆ ಸುರಿಯಿರಿ, ನಂತರ ಸ್ಪೂನ್ನಿಂದ ತಿರುಗಿಸಿದರೆ ಕಾಫಿ ರೆಡಿ.
- ನಂತರ ಕಾಫಿಯನ್ನು ಕೋನ್ಗೆ ಹಾಕಿ ತಕ್ಷಣವೇ ಸರ್ವ್ ಮಾಡಿ.
ಹಾಲನ್ನು ಕುದಿಸಿ ಮಾಡುವ ಕಾಫಿ
ನೀವು ಸಇನ್ಸ್ಟಾಂಟ್ ಅಲ್ಲ ಹಾಗೇ ಕಾಫಿ ಮಾಡಬೇಕೆಂದು ಬಯಸುವುದಾದರೆ ಮೊದಲು ಹಾಲಿಗೆ ಸಕ್ಕರೆ ಹಾಕಿ ಕುದಿಸಿ ನಂತರ ಕಾಫಿ ಪುಡಿ ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಕುದಿಸಿ, ನಂತರ ಅದನ್ನು ಕೋನ್ಗೆ ಸುರಿಯಿರಿ.
ನಂತರ ಟೀ ಕುಡಿಯುತ್ತಾ ಕೋನ್ ಸವಿಯಿರಿ, ಈ ಕಾಫಿ ಐಡಿಯಾ ತುಂಬಾನೇ ಮಜವಾಗಿದೆ ಅಲ್ವಾ?
ಒಂದು ಟಿಪ್ಸ್
ನೀವು ಕೋನ್ಗೆ ಕಾಫಿ ಮಾಡುವಾಗ ಸಕ್ಕರೆ ಸ್ವಲ್ಪ ಕಡಿಮೆ ಹಾಕ, ಏಕೆಂದರೆ
ಕೋನ್ ಕೂಡ ಸಿಹಿ ಇರುತ್ತದೆ. ಆದ್ದರಿಂದ ಕಾಫಿಗೆ ಸ್ವಲ್ಪ ಸಕ್ಕರೆ ಕಡಿಮೆ ಹಾಕಿದರೆ
ಟೇಸ್ಟ್ ಸೂಪರ್ ಆಗಿರುತ್ತದೆ.
ಕಾಫಿ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
- ದೇಹಕ್ಕೆ ಶಕ್ತಿ ತುಂಬುವುದು
- ಕಾಫಿಯಲ್ಲಿರುವ ಕೆಫೀನ್ ಸುಸ್ತು ತಡೆಗಟ್ಟುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುವುದು.
- ಟೈಪ್ 2 ಮಧುಮೇಹ ಅಪಾಯವನ್ನು ತಡೆಗಟ್ಟಲು ಸಹಕಾರಿ
- ಟೈಪ್ 2 ಮಧುಮೇಹದ ಅಪಾಯವನ್ನು ತಡೆಗಟ್ಟುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.
- ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
- ಕಾಫಿ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಸಂಶೋಧನೆಯಿಂದ ಸಾಬೀತಾಗಿದೆ. ಇದು ಪಾರ್ಕಿನ್ಸನ್ಸ್ ಅಪಾಯ ತಡೆಗಟ್ಟುತ್ತದೆ.
- ತೂಕ ನಿಯಂತ್ರಣಕ್ಕೂ ಸಹಕಾರಿ
- ಕಾಫಿ ಕುಡಿಯುವುದರಿಂದ ದೇಹದಲ್ಲಿ ಕೊಬ್ಬಿನಂಶ ಕಡಿಮೆ ಮಾಡುತ್ತದೆ, ಆದ್ದರಿಂದ ತೂಕ ನಿಯಂತ್ರಂಣಕ್ಕೆ ಸಹಕಾರಿ.
- ಖಿನ್ನತೆ ತಡೆಗಟ್ಟುತ್ತದೆ
- ಖಿನ್ನತೆ ಎಂಬುವುದು ಯಾರನ್ನು ಬೇಕಾದರೂ ಕಾಡಬಹುದು, ಖಿನ್ನತೆ ತಡೆಗಟ್ಟಲು ಕಾಫಿ ಸಹಕಾರಿ ಎಂಬುವುದು ಅಧ್ಯಯನಗಳು ಹೇಳಿವೆ.
- ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
- ನೀವು ಪ್ರತಿದಿನ ಕಾಫಿ ಕುಡಿಯುವುದರಿಂದ ಲಿವರ್ನ ಆರೋಗ್ಯಕ್ಕೆ ಒಳ್ಳೆಯದು, ಇದು ಲಿವರ್ನಲ್ಲಿರುವ ಕಶ್ಮಲವನ್ನು ಹೊರ ಹಾಕಲು ಹಾಗೂ ಲಿವರ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
Comments
[ of 5 - Users]



Click it and Unblock the Notifications
