Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣೇಶ ಹಬ್ಬಕ್ಕೆ ಕಾಯಿ ಮೋದಕ ರೆಸಿಪಿ
ನಮ್ಮೆಲ್ಲರ ನೆಚ್ಚಿನ ಗಣೇಶ ಹಬ್ಬ ಸಮೀಪಿಸುತ್ತಿದೆ. ಸೆಪ್ಟೆಂಬರ್ 10ಕ್ಕೆ ಗಣೇಶ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೆ ಮೋದಕ ಇಲ್ಲದೇ ಹಬ್ಬ ಆಚರಿಸಲು ಸಾಧ್ಯವೇ? ಗಣೇಶನಿಗೆ ಮೋದಕಗಳೆಂದರೆ ತುಂಬಾ ಪ್ರಿಯವಾದದ್ದು. ಗಣೇಶ ಹಬ್ಬದಂದು ವಿಧ-ವಿಧವಾದ ಮೋದಕಗಳನ್ನು ತಯಾರಿಸಲಾಗುವುದು. ನಾವಿಲ್ಲಿ ಕಾಯಿ ಮೋದಕದ ರೆಸಿಪಿ ನೀಡಿದ್ದೇವೆ.

ಇದು ತುಂಬಾ ಸರಳವಾದ ರೆಸಿಪಿಯಾಗಿದ್ದು, ಈ ಮೋದಕವನ್ನು ಬೆಲ್ಲ ಹಾಕಿ, ಹಬೆಯಲ್ಲಿ ಬೇಯಿಸಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: sweet
Serves: 10
-
ಬೇಕಾಗುವ ಸಾಮಗ್ರಿ
2 ಕಪ್ ಅಕ್ಕಿ ಹಿಟ್ಟು
1 ಕಪ್ ನೀರು
1 ಚಮಚ ತುಪ್ಪ
1/2 ಚಮಚ ಉಪ್ಪು
ಮೋದಕ ಒಳಗೆ ತುಂಬಲು
2 ಕಪ್ ತೆಂಗಿನ ತುರಿ
1 ಕಪ್ ಬೆಲ್ಲದ ಪುಡಿ
1 ಚಮಚ ತುಪ್ಪ
1/2 ಚಮಚ ಏಲಕ್ಕಿ
-
ತಯಾರಿಸುವ ವಿಧಾನ:
* ಮೊದಲಿಗೆ ಮೋದಕದ ಒಳಗೆ ತುಂಬಲು ರೆಡಿ ಮಾಡಬೇಕು.
* ನಂತರ ಮೋದಕ ಹಿಟ್ಟು ತಯಾರಿಸಬೇಕು.
* ಮೋದಕ ತಯಾರಿಸುವುದು
* ಮೋದಕ ಬೇಯಿಸುವುದು
- ಸಲಹೆ: ನೀವು ಮೋದಕ ಮಾಡುವಾಗ ತುಂಬಾ ನುಣ್ಣನೆ ಪುಡಿ ಮಾಡಿದ ಹಿಟ್ಟು ಹಾಕಿ. (ಮೋದಕ ತಯಾರಿಸಲು ಹಿಟ್ಟು ಸಿಗುತ್ತದೆ, ಅದರಿಂದಲೂ ಮಾಡಬಹುದು. * ಹಿಟ್ಟು ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟಿ ತಟ್ಟಿ ಮೋದಕ ತಯಾರಿಸಿ. * ಮೋದಕ ಹಿಟ್ಟು ತೆಳುವಾಗಿರಲಿ. ತುಂಬಾ ದಪ್ಪವಿದ್ದರೆ ಅಷ್ಟು ರುಚಿಯಿರಲ್ಲ.
- ಸರ್ವ್ - 1 ಮೋದಕ
- ಕ್ಯಾಲೋರಿ - 140ಕ್ಯಾ
- ಕೊಬ್ಬು - 4.4 ಗ್ರಾಂ
- ಕಾರ್ಬ್ಸ್ - 20ಗ್ರಾಂ
- ನಾರಿನಂಶ - 2ಗ್ರಾಂ
ಮೋದಕ ಒಳಗೆ ತುಂಬಲು
* ಕಡಾಯಿಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ.
* ಈಗ ಅದರಲ್ಲಿ 2 ಕಪ್ ತೆಂಗಿನ ತುರಿ ಹಾಕಿ ಹುರಿಯಿರಿ. ತೆಂಗಿನಕಾಯಿಯಿಂದ ಒಳ್ಳೆಯ
ವಾಸನೆ ಬರುವವರೆಗೆ ಫ್ರೈ ಮಾಡಿ.
* ಈಗ 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಬೆಲ್ಲ ಕರಗಿ, ತೆಂಗಿನಕಾಯಿ ಹಾಕಿ ಮಿಶ್ರ ಮಾಡಿ, ಅದು ಗಟ್ಟಿಯಾಗುವವರೆಗೆ
ಸೌಟ್‌ನಿಂದ ಆಡಿಸುತ್ತಾ ಬೇಯಿಸುತ್ತಾ ಇರಿ.
* ಮಿಶ್ರಣ ಗಟ್ಟಿಯಾದ ಬಳಿಕ ಉರಿ ಆಫ್ ಮಾಡಿ ತೆಗೆದಿಡಿ.
ಮೋದಕ ಹಿಟ್ಟು ತಯಾರಿಸುವುದು ಹೇಗೆ?
* ಒಂದು ದೊಡ್ಡ ಕಡಾಯಿ ತೆಗೆದು ಅದರಲ್ಲಿ 1 ಕಪ್ ನೀರು ಹಾಕಿ.
* ನೀರನ್ನು ಬಿಸಿ ಮಾಡಿ, ಅದರಲ್ಲಿ 1 ಚಮಚ ತುಪ್ಪ, 1/2 ಚಮಚ ಉಪ್ಪು ಹಾಕಿ.
* ನೀರು ಚೆನ್ನಾಗಿ ಕುದಿಯಲಿ.
* ನೀರು ಕುದಿಯಲಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ, ಅಕ್ಕಿ ಹಿಟ್ಟು ಮೆಲ್ಲನೆ
ಸುರಿಯಿರಿ, ಸುರಿಯುವಾಗ ಹಿಟ್ಟು ಗಂಟು ಕಟ್ಟದಿರಲು ಸೌಟ್‌ನಿಂದ ತಿರುಗಿಸುತ್ತಾ
ಇರಿ.
* ಉರಿ ಕಡಿಮೆ ಮಾಡಿ ಹಿಟ್ಟನ್ನು ತಿರುಗಿಸುತ್ತಲೇ ಬೇಯಿಸಿ.
* ನಂತರ ಉರಿಯಿಂದ ಇಳಿಸಿ ಒಂದು 5 ನಿಮಿಷ ತಣ್ಣಗಾಗಲು ಇಡಿ.
ಮೋದಕ ಮಾಡುವ ವಿಧಾನ
* ಮೊದಲಿಗೆ ನೀವು ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ.
* ಈಗ ಉಂಡೆ ತೆಗೆದು ಕೈಯಲ್ಲಿ ತಟ್ಟಿ, ಮಧ್ಯದಲ್ಲಿ ಸ್ವಲ್ಪ ಗುಂಡಿ ಮಾಡಿ,
ಅದರೊಳಗೆ ತೆಂಗಿನಕಾಯಿ ಮಿಶ್ರಣ ಹಾಕಿ ಅದರ ತುದಿ ಕ್ಲೋಸ್ ಮಾಡಿ ಅದರ ತುದಿ ಹಿಡಿದು
ತಿರುಗಿಸಿ.
* ಈಗ ಎಲ್ಲಾ ಹಿಟ್ಟನ್ನುಅವುಗಳನ್ನು ಹಬೆಯಲ್ಲಿ ಬೇಯಿಸಿ.
ಹಬೆಯಲ್ಲಿ ಬೇಯಿಸುವಾಗ ಬಾಳೆ ಎಲೆ ಮೇಲೆ ಈ ಮೋದಕಗಳನ್ನು ಇಟ್ಟು 10-15 ನಿಮಿಷ
ಬೇಯಿಸಿ.



Click it and Unblock the Notifications
