ವರಮಹಾಲಕ್ಷ್ಮಿ ಹಬ್ಬದ ವಿಶೇಷ: ಕೊಬ್ಬರಿ ಲಾಡು ರೆಸಿಪಿ

Posted By: Divya
Subscribe to Boldsky

ತೆಂಗಿನತುರಿ ಲಡ್ಡು ಭಾರತೀಯ ವಿಶೇಷ ಸಿಹಿ ತಿಂಡಿಯಲ್ಲಿ ಒಂದು. ಮನಸ್ಸು ಬಯಸಿದಾಗ, ಉತ್ಸವ, ಹಬ್ಬ ಹಾಗೂ ವಿಶೇಷ ಕಾರ್ಯಗಳಲ್ಲಿ ತಯಾರಿಸುತ್ತಾರೆ. ಇದನ್ನು ಒಣಗಿದ ತೆಂಗಿನ ತುರಿ ಹಾಗೂ ಹಾಲಿನಿಂದ ತಯಾರಿಸಲಾಗುತ್ತದೆ. ಹಾಲು ಮತ್ತು ತೆಂಗಿನಕಾಯಿಯ ಮಿಶ್ರಣವು ಅದ್ಭುತವಾದ ರುಚಿ ಹಾಗೂ ಪರಿಮಳವನ್ನು ಸೂಸುತ್ತದೆ.

ರಸಭರಿತವಾದ ಈ ಸಿಹಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಲು ಮನಸ್ಸು ಬಯಸುತ್ತದೆ. ಈ ಅದ್ಭುತ ಸಿಹಿಯನ್ನು ಬಹು ಬೇಗ ತಯಾರಿಸಬಹುದು. ಇದಕ್ಕಾಗಿ ಪಾಕವಿಧಾನದಲ್ಲಿ ಪಾಂಡಿತ್ಯ ಪಡೆಯುವ ಅಗತ್ಯವಿಲ್ಲ. ಬಯಕೆಯಾದಾಗ ಬಹು ಬೇಗ ತಯಾರಿಸಿಕೊಳ್ಳಬಹುದು. ಈ ತಿಂಡಿಯನ್ನು ನೀವು ಮಾಡಲು ಬಯಸುವುದಾದರೆ ನಾವಿಲ್ಲಿ ನೀಡಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವೀಕ್ಷಿಸಿ... ನಿಮ್ಮ ಪಾಕ ವಿಧಾನ ಸುಲಭವಾಗುವುದು.

ನಾರಿಯಲ್ ಲಡ್ಡು ವೀಡಿಯೋ ಪಾಕವಿಧಾನ.

coconut ladoo recipe
ತೆಂಗಿನ ತುರಿ ಲಡ್ಡು ಪಾಕವಿಧಾನ | ಲಡ್ಡು ಪಾಕವಿಧಾನ | ಘನೀಕರಿಸಿದ ಹಾಲಿನಲ್ಲಿ ತೆಂಗಿನ ತುರಿ
Prep Time
5 Mins
Cook Time
10 ನಿಮಿಷ
Total Time
15 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 8-10 ಲಡ್ಡು

Ingredients
 • ಒಣ ಕೊಬ್ಬರಿ ತುರಿ -2 ಕಪ್ +1ಕಪ್ ಲೇಪನಕ್ಕೆ

  ಸಿಹಿಯಾದ ಮಂದಗೊಳಿಸಿದ ಹಾಲು -200 ಗ್ರಾಂ

  ಹೆಚ್ಚಿಕೊಂಡ ಬಾದಾಮಿ-2 ಚಮಚ+ ಅಲಂಕಾರಕ್ಕೆ

  ಏಲಕ್ಕಿ ಪುಡಿ- 1 ಚಮಚ

Red Rice Kanda Poha
How to Prepare
 • 1. ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿಗಿಟ್ಟು, ಘನೀಕರಿಸಿದ/ಮಂದಗೊಳಿಸಿದ ಹಾಲನ್ನು ಹಾಕಿ. ತಕ್ಷಣವೇ 2 ಕಪ್ ಒಣ ಕೊಬ್ಬರಿ ತುರಿಯನ್ನು ಸೇರಿಸಬೇಕು.

  2. ಈ ಮಿಶ್ರಣವು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ನಂತರ ಮಿಶ್ರಣವು ದಪ್ಪ ಪಾಕದ ರೂಪಕ್ಕೆ ಬರುವುದು.

  3. ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿಯನ್ನು ಸೇರಿಸಿ, ಇದು ಬಿಗಿಯಾದ ಮಿಶ್ರಣದಂತಾಗುವರೆಗೂ ಚೆನ್ನಾಗಿ ಕಲುಕಬೇಕು.

  4. ಒಂದು ಉಂಡೆಯ ಆಕಾರದಲ್ಲಿ ಮಿಶ್ರಣವನ್ನು ಕಟ್ಟಬೇಕು.

  5. ಉಂಡೆಯನ್ನು ಒಣ ಕೊಬ್ಬರಿಯಲ್ಲಿ ಒಮ್ಮೆ ಉರುಳಿಸಬೇಕು.

  6. ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕರಿಸಿ.

Instructions
 • 1. ಲಡ್ಡುವನ್ನು ತಾಜಾ ಕೊಬ್ಬರಿಯಿಂದಲೂ ಮಾಡಬಹುದು. ಆದರೆ ತೆಂಗಿನ ತುರಿಯನ್ನು ಚೆನ್ನಾಗಿ ಹುರಿದು ತೇವಾಂಶವನ್ನು ತೆಗೆದುಕೊಳ್ಳಬೇಕು.
 • 2. ಮಿಶ್ರಣ ಪಾಕ ಬರುವಾಗ ತಳಹಿಡಿಯದಂತೆ ಹಾಗೂ ಗಂಟಾಗದಂತೆ ಸೂಕ್ತ ರೀತಿಯಲ್ಲಿ ಕಲುಕುತ್ತಿರಬೇಕು.
 • 3. ಮಿಶ್ರಣವು ಬಿಸಿಯಾಗಿರುವಾಗಲೇ ಲಡ್ಡು ಕಟ್ಟಬೇಕು.
Nutritional Information
 • ಸರ್ವಿಂಗ್ ಸೈಜ್ - 1 ಲಡ್ಡು
 • ಕ್ಯಾಲೋರೀಸ್ - 54 ಕ್ಯಾಲ್
 • ಫ್ಯಾಟ್ - 2 ಗ್ರಾಂ.
 • ಪ್ರೋಟೀನ್ - 1ಗ್ರಾಂ.
 • ಕಾರ್ಬೋಹೈಡ್ರೇಟ್ - 9 ಗ್ರಾಂ.
 • ಸಕ್ಕರೆ - 9 ಗ್ರಾಂ.

ಲಡ್ಡು ಪಾಕವಿಧಾನದ ಹಂತ ಹಂತವಾದ ಚಿತ್ರ ವಿವರಣೆ:

1. ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿಗಿಟ್ಟು, ಘನೀಕರಿಸಿದ/ಮಂದಗೊಳಿಸಿದ ಹಾಲನ್ನು ಹಾಕಿ. ತಕ್ಷಣವೇ 2 ಕಪ್ ಒಣ ಕೊಬ್ಬರಿ ತುರಿಯನ್ನು ಸೇರಿಸಬೇಕು.

coconut ladoo recipe
coconut ladoo recipe

2. ಈ ಮಿಶ್ರಣವು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ನಂತರ ಮಿಶ್ರಣವು ದಪ್ಪ ಪಾಕದ ರೂಪಕ್ಕೆ ಬರುವುದು.

coconut ladoo recipe

3. ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿಯನ್ನು ಸೇರಿಸಿ, ಇದು ಬಿಗಿಯಾದ ಮಿಶ್ರಣದಂತಾಗುವರೆಗೂ ಚೆನ್ನಾಗಿ ಕಲುಕಬೇಕು.

coconut ladoo recipe
coconut ladoo recipe
coconut ladoo recipe

4. ಒಂದು ಉಂಡೆಯ ಆಕಾರದಲ್ಲಿ ಮಿಶ್ರಣವನ್ನು ಕಟ್ಟಬೇಕು.

coconut ladoo recipe

5. ಉಂಡೆಯನ್ನು ಒಣ ಕೊಬ್ಬರಿಯಲ್ಲಿ ಒಮ್ಮೆ ಉರುಳಿಸಬೇಕು.

coconut ladoo recipe

6. ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕರಿಸಿ.

coconut ladoo recipe
coconut ladoo recipe
[ 3.5 of 5 - 105 Users]