Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಗಣೇಶ ಹಬ್ಬಕ್ಕೆ: ಕೊಬ್ಬರಿ ಬರ್ಫಿ ರೆಸಿಪಿ
ಕೊಬ್ಬರಿ ಬರ್ಫಿಯನ್ನು ಹಲವಾರು ರುಚಿಯಲ್ಲಿ ತಯಾರಿಸಬಹುದು. ಕೊಬ್ಬರಿಯನ್ನು ತುರಿದು ಅದರಿಂದ ಬರ್ಫಿ ಮಾಡಬಹುದು, ಅದನ್ನು ಪುಡಿ ಮಾಡಿಯೂ ಬರ್ಫಿ ಮಾಡಬಹುದು. ಕೊಬ್ಬರಿ ಪುಡಿ ಮಾಡಿ ಮಾಡುವ ಬರ್ಫಿ ಮತ್ತಷ್ಟು ರುಚಿಕರವಾಗಿರುತ್ತದೆ.

ನಾವಿಲ್ಲಿ ನಿಮಗೆ ಕೊಬ್ಬರಿ ಪುಡಿ ಮಾಡಿ ಮಾಡುವ ಬರ್ಫಿ ರೆಸಿಪಿ ಶೇರ್ ಮಾಡಿದ್ದೇವೆ. ಇದನ್ನು ಗಣೇಶ ಚತುರ್ಥಿ, ದೀಪಾವಳಿ ಹೀಗೆ ವಿಶೇಷ ದಿನಗಳಲ್ಲಿ ಸುಲಭವಾಗಿ ಮಾಡಿ ಸವಿಯಬಹುದಾದ ಸಿಹಿ ತಿಂಡಿಯಾಗಿದೆ.
Recipe By: Reena TK
Recipe Type: Sweet
Serves: 10
-
ಬೇಕಾಗುವ ಸಾಮಗ್ರಿ
ಕೊಬ್ಬರಿ 1 3/4 ಕಪ್
ಮಿಲ್ಕ್ ಮೇಡ್ 1 ಡಬ್ಬ ಅಥವಾ ಕಂಡೆನ್ಸ್ಡ್ ಹಾಲು 1/4 ಲೀ.
ಸಕ್ಕರೆ 1/4 ಕಪ್ (ಮಿಲ್ಕ್ ಮೇಡ್ ಬಳಸುವುದಾದರೆ ಸಕ್ಕರೆ ಸ್ವಲ್ಪ ಹಾಕಿ)
ಏಲಕ್ಕಿ ಪುಡಿ 1/4 ಚಮಚ
ನಟ್ಸ್ 1/4 ಕಪ್
ತುಪ್ಪ 3-4 ಚಮಚ
-
ಮಾಡುವ ವಿಧಾನ
1. ಈ ಕೊಬ್ಬರಿ ಬರ್ಫಿ ಮಾಡಲು ನೀವು ಕೊಬ್ಬರಿಯನ್ನು ತುರಿದು ಅದನ್ನು ಮಿಕ್ಸಿಯಲ್ಲಿ3-4 ನಿಮಿಷ ರುಬ್ಬಿ. ಅದು ಪುಡಿ ಪುಡಿಯಾಗಬೇಕು. ಈ ರೆಸಿಪಿಗೆ 13/4 ಕಪ್ ಕೊಬ್ಬರಿ ಪುಡಿ ಬೇಕು.
2. ನೀವು ಗೋಡಂಬಿ, ಬಾದಾಮಿ ಇತರ ನಟ್ಸ್ ಬಳಸುವುದಾದರೆ ಅದನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ತೆಗೆದಿಡಿ.
3. ನೀವು ಹಾಲನ್ನು ಕುದಿಸಿ ಮಂದವಾಗಿಸಬೇಕು. ಅರ್ಧ ಲೀಟರ್ ಹಾಲು 1/4 ಲೀಟರ್ ಆಗುವಷ್ಟು ಕುದಿಸಬೇಕು.
4. ಈಗ ಪುಡಿ ಮಾಡಿದ ಕೊಬ್ಬರಿಯನ್ನು ತಪ್ಪ ತಳವಿರುವ ಪಾತ್ರೆಗೆ ಹಾಕಿ, ಸ್ವಲ್ಪ ತುಪ್ಪ ಹಾಕಿ 3-4 ನಿಮಿಷ ಹುರಿಯಿರಿ.
5. ಈಗ ಸ್ವಲ್ಪ ಸಿಹಿ ಇರುವ ಮಂದ ಹಾಲು ಹಾಕಿ. ಕಾಲು ಕಪ್ ಹಾಲು ಹಾಕಿ, ಬೇಕಿದ್ದರೆ ಮತ್ತೆ 2 ಚಮಚ ಹಾಲು ಸೇರಿಸಿ, ಇಲ್ಲದಿದ್ದರೆ ಮಿಲ್ಕ್ ಮೇಡ್ ಸೇರಿಸಬಹುದು.
6. ಚೆನ್ನಾಗಿ ಮಿಶ್ರ ಮಾಡಿ, ಎಲ್ಲಿಯೂ ಗಂಟು-ಗಂಟಾಗಬಾರದು.
7. ಹಾಲು, ಕೊಬ್ಬರಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ, 3-4 ನಿಮಿಷ ಕುದಿಸಿದರೆ ಸಾಕು, ಗಟ್ಟಿಯಾಗುತ್ತದೆ. ಹೀಗೆ ಕುದಿಸುವಾಗ 1/4 ಚಮಚ ಏಲಕ್ಕಿ ಪುಡಿ ಹಾಕಿದರೆ ಮತ್ತಷ್ಟು ಒಳ್ಳೆಯದು.
8. ಈಗ ಪ್ಲೇಟ್‌ಗೆ ತುಪ್ಪ ಸವರಿ ಅದಕ್ಕೆ ಸಿಲ್ವರ್ ಫಾಯಿಲ್ ಹಾಕಿ ಅದರ ಮೇಲೆ ಮಿಶ್ರಣ ಸುರಿಯಿರಿ, ನೇಲೆ ಹುರಿದ ನಟ್ಸ್ ಹರಡಿ. ನಟ್ಸ್ ಪೌಡರ್ ಮಾಡಿಯೂ ಹಾಕಬಹುದು, ನಂತರ ಅದನ್ನು ಮೆಲ್ಲನೆ ಪ್ರೆಸ್ ಮಾಡಿ ಫ್ರಿಡ್ಜ್‌ನಲ್ಲಿ ಎರಡು ಗಂಟೆ ಇಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಕೊಬ್ಬರಿ ಬರ್ಫಿ ರೆಡಿ.
- ಕೊಬ್ಬರಿ ಬರ್ಫಿ ಹಾಗೇ ಇಟ್ಟರೆ 1 ವಾರದವರೆಗೆ ಬಳಸಬಹುದು, ಇದನ್ನು ಫ್ರಿಡ್ಜ್‌ನಲ್ಲಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು
- ಸರ್ವ್: - 1 ಬರ್ಫಿ
- ಕ್ಯಾಲೋರಿ: - 59ಕ್ಯಾ
- ಕೊಬ್ಬು: - 2 ಗ್ರಾಂ
- ಪ್ರೊಟೀನ್ : - 19ಗ್ರಾಂ
- ಕಾರ್ಬ್ಸ್: - 8 ಗ್ರಾಂ



Click it and Unblock the Notifications