For Quick Alerts
ALLOW NOTIFICATIONS  
For Daily Alerts

ತೆಂಗಿನಕಾಯಿ ಬೆಲ್ಲದ ಬರ್ಫಿ ರೆಸಿಪಿ

Posted By:
|

ಸಿಹಿ ತಿನಿಸುಗಳನ್ನ ತಿನ್ನುವುದು ತಪ್ಪಲ್ಲ, ಆದರೆ ಅದು ಎಷ್ಟು ಆರೋಗ್ಯಕರವಾಗಿರುತ್ತದೆ ಎಂಬುದು ಬಹಳ ಮುಖ್ಯ. ಸಾಮಾನ್ಯವಾಗಿ ತೆಂಗಿನ ಕಾಯಿ ಬರ್ಫಿಯನ್ನು ಮಾಡುವಾಗ ಸಕ್ಕರೆಯನ್ನು ಬಳಸುವುದು ಸಾಮಾನ್ಯ.

Coconut And Jaggery Burfi Recipe

ಆದರೆ ಸಕ್ಕರೆಯ ಬದಲು ನೈಸರ್ಗಿಕ ಬೆಲ್ಲವನು ಬಳಸಿ ಮಾಡಿದರೆ ಆರೋಗ್ಯಕ್ಕೂ ಉತ್ತಮ, ಹಾಗೆಯೇ ರುಚಿಯೂ ಕೂಡ ಅಷ್ಟೇ ಚೆನ್ನಾಗಿರುತ್ತದೆ.

ಇದನ್ನು ನೀವು ಮಾಡಿ ವಾರಗಟ್ಟಲೆ ಇಟ್ಟು ಸವಿಯಬಹುದು, ಬೆಲ್ಲ ಹಾಕಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ತಿಳಿಯೋಣ.

Coconut Burfi Recipe,ತೆಂಗಿನಕಾಯಿ ಬೆಲ್ಲದ ಬರ್ಫಿ
Coconut Burfi Recipe,ತೆಂಗಿನಕಾಯಿ ಬೆಲ್ಲದ ಬರ್ಫಿ
Prep Time
10 Mins
Cook Time
20M
Total Time
30 Mins

Recipe By: Poornima Hegde

Recipe Type: Burfi

Serves: 10

Ingredients
  • ತೆಂಗಿನ ಕಾಯಿ ಬೆಲ್ಲದ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು:

    ತೆಂಗಿನ ತುರಿ - ಒಂದು ಕಪ್

    ಬೆಲ್ಲ - ಒಂದು ಕಪ್

    ಏಲಕ್ಕಿ - 5-6 (ಪುಡಿ ಮಾಡಿಕೊಳ್ಳಬೇಕು)

    ತುಪ್ಪ - ಸ್ವಲ್ಪ

Red Rice Kanda Poha
How to Prepare
  • ಮಾಡುವ ವಿಧಾನ:

    ಹಂತ -1

    ಮೊದಲು ಒಂದು ಕಪ್ ನಷ್ಟು ತೆಂಗಿನ ಕಾಯಿ ತುರಿಯನ್ನು ತೆಗೆದುಕೊಳ್ಳಿ. ಇಲ್ಲಿ ತೆಂಗಿನ ಕಾಯಿ ಫ್ರೇಶ್ ಆಗಿರಬೇಕು. ಏಲಕ್ಕಿ ಪುಡಿ ಹಾಗೂ ಒಂದು ಕಪ್ ಬೆಲ್ಲ ಹಾಗೆಯೇ ಸ್ವಲ್ಪ ತುಪ್ಪವನ್ನು ರೆಡಿ ಮಾಡಿಕೊಳ್ಳಿ.

    ಹಂತ -2

    ಒಂದು ಪಾತ್ರೆಗೆ ತುಪ್ಪವನ್ನು ಹಾಕಿ. ಇದಕ್ಕೆ 1 ಕಪ್ ತಾಜಾ ತೆಂಗಿನತುರಿ ಯನ್ನು ಹಾಕಿ ಬಿಸಿ ಮಾಡಿ. ಈ ತೆಂಗಿನ ತುರಿಯನ್ನ ಮಿಕ್ಸರ್ ನಲ್ಲಿ ಸ್ವಲ್ಪ ರುಬ್ಬಿಕೊಂಡು ಕೂಡ ಬಳಸಬಹುದು.

    ಹಂತ -3

    ಬಿಸಿಯಾದ ತೆಂಗಿನ ತುರಿಗೆ ಒಂದು ಕಪ್ ಬೆಲ್ಲವನ್ನು ಹಾಕಿ. ಇಲ್ಲಿ ಬಳಸಿರುವಂಥದ್ದು, ನೈಸರ್ಹಿಕವಾದ ಮಲೆನಾಡಿನ ತಾಜಾ ಜೋನಿ ಬೆಲ್ಲ. ಸುಮಾರು 10 ನಿಮಿಷಗಳ ಕಾಲ ಈ ಮಿಶ್ರಣವನ್ನು ಬೇಯಿಸಿ. (ನಾವು ಬಳಸುವ ಎಲ್ಲಾ ಬೆಲ್ಲವೂ ಉತ್ತಮ ಪಾಕವನ್ನು ಕೊಡುವುದಿಲ್ಲ. ಹಾಗಾಗಿ ನೀವು ಬಆಳ್ಸುವ ಬೆಲ್ಲ ಪಾಕ ಬರುತ್ತಿಲ್ಲ ಎಂದು ಅನ್ನಿಸಿದಲ್ಲಿ ಅರ್ಧ ಲೋಟ ಸಕ್ಕರೆಯನ್ನು ಹಾಕಿ ಬೆರೆಸಿ ಪಾಕ ತರಿಸಿಕೊಳ್ಳಬಹುದು).

    ಹಂತ-4

    ಪಾಕ ಬಂದ ನಂತರ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ

    ಹಂತ-5

    ಒಂದು ಬಟ್ಟಲಿಗೆ ತುಪ್ಪ ಸವರಿ, ಬೆಲ್ಲದ ಮಿಶ್ರಣವನ್ನು ಹಾಕಿ. ಅದನ್ನು ಬತ್ಟಲಿನ ಎಲ್ಲಾ ಭಾಗದಲ್ಲೂ ಸಮನಾಗಿ ಹರಡಿ. ನಂತರ ಚಾಕುವಿನಲ್ಲಿ ಕಟ್ ಮಾಡಿ.

    ಹಂತ-6

    ಇದು ಸ್ವಲ್ಪ ತಣ್ಣಗಾದ ನಂತರ ಬರ್ಫಿಯನ್ನು ತೆಗೆಯಿರಿ.

    ರುಚಿಕರವಾದ ಅಷ್ಟೇ ಆರೋಗ್ಯಕರ ವಾದ ಈ ಸಿಹಿ ಖಾದ್ಯವನ್ನ ಥಟ್ ಅಂತ ಅರ್ಧ ಗಂಟೆಲಿ ಮಾಡಿಬಿಡಬಹುದು.

Instructions
  • ಇದನ್ನು ಸಕ್ಕರೆಗಿಂತ ಬೆಲ್ಲ ಹಾಕಿ ಮಾಡಿರುವುದರಿಂದ ಹೆಚ್ಚು ಆರೋಗ್ಯಕರ.
Nutritional Information
  • ಕೊಬ್ಬು: - 27 ಗ್ರಾಂ
  • ಪ್ರೋಟೀನ್: - 0.4 ಗ್ರಾಂ
  • ಕಾರ್ಬ್ಸ್: - 10 ಗ್ರಾಂ
  • ಫೈಬರ್: - 7 ಗ್ರಾಂ

ಮಾಡುವ ವಿಧಾನ:

ಹಂತ -1
ಮೊದಲು ಒಂದು ಕಪ್ ನಷ್ಟು ತೆಂಗಿನ ಕಾಯಿ ತುರಿಯನ್ನು ತೆಗೆದುಕೊಳ್ಳಿ. ಇಲ್ಲಿ ತೆಂಗಿನ ಕಾಯಿ ಫ್ರೇಶ್ ಆಗಿರಬೇಕು. ಏಲಕ್ಕಿ ಪುಡಿ ಹಾಗೂ ಒಂದು ಕಪ್ ಬೆಲ್ಲ ಹಾಗೆಯೇ ಸ್ವಲ್ಪ ತುಪ್ಪವನ್ನು ರೆಡಿ ಮಾಡಿಕೊಳ್ಳಿ.

Coconut Burfi Recipe
ಹಂತ -2
ಒಂದು ಪಾತ್ರೆಗೆ ತುಪ್ಪವನ್ನು ಹಾಕಿ. ಇದಕ್ಕೆ 1 ಕಪ್ ತಾಜಾ ತೆಂಗಿನತುರಿ ಯನ್ನು ಹಾಕಿ ಬಿಸಿ ಮಾಡಿ. ಈ ತೆಂಗಿನ ತುರಿಯನ್ನ ಮಿಕ್ಸರ್ ನಲ್ಲಿ ಸ್ವಲ್ಪ ರುಬ್ಬಿಕೊಂಡು ಕೂಡ ಬಳಸಬಹುದು.
Coconut Burfi Recipe

ಹಂತ -3
ಬಿಸಿಯಾದ ತೆಂಗಿನ ತುರಿಗೆ ಒಂದು ಕಪ್ ಬೆಲ್ಲವನ್ನು ಹಾಕಿ. ಇಲ್ಲಿ ಬಳಸಿರುವಂಥದ್ದು, ನೈಸರ್ಹಿಕವಾದ ಮಲೆನಾಡಿನ ತಾಜಾ ಜೋನಿ ಬೆಲ್ಲ. ಸುಮಾರು 10 ನಿಮಿಷಗಳ ಕಾಲ ಈ ಮಿಶ್ರಣವನ್ನು ಬೇಯಿಸಿ. (ನಾವು ಬಳಸುವ ಎಲ್ಲಾ ಬೆಲ್ಲವೂ ಉತ್ತಮ ಪಾಕವನ್ನು ಕೊಡುವುದಿಲ್ಲ. ಹಾಗಾಗಿ ನೀವು ಬಆಳ್ಸುವ ಬೆಲ್ಲ ಪಾಕ ಬರುತ್ತಿಲ್ಲ ಎಂದು ಅನ್ನಿಸಿದಲ್ಲಿ ಅರ್ಧ ಲೋಟ ಸಕ್ಕರೆಯನ್ನು ಹಾಕಿ ಬೆರೆಸಿ ಪಾಕ ತರಿಸಿಕೊಳ್ಳಬಹುದು).

Coconut Burfi Recipe

ಹಂತ-4
ಪಾಕ ಬಂದ ನಂತರ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ

Coconut Burfi Recipe

ಹಂತ-5
ಒಂದು ಬಟ್ಟಲಿಗೆ ತುಪ್ಪ ಸವರಿ, ಬೆಲ್ಲದ ಮಿಶ್ರಣವನ್ನು ಹಾಕಿ. ಅದನ್ನು ಬತ್ಟಲಿನ ಎಲ್ಲಾ ಭಾಗದಲ್ಲೂ ಸಮನಾಗಿ ಹರಡಿ. ನಂತರ ಚಾಕುವಿನಲ್ಲಿ ಕಟ್ ಮಾಡಿ.

Coconut Burfi Recipe

ಹಂತ-6
ಇದು ಸ್ವಲ್ಪ ತಣ್ಣಗಾದ ನಂತರ ಬರ್ಫಿಯನ್ನು ತೆಗೆಯಿರಿ.

Burfi Recipe

ರುಚಿಕರವಾದ ಅಷ್ಟೇ ಆರೋಗ್ಯಕರ ವಾದ ಈ ಸಿಹಿ ಖಾದ್ಯವನ್ನ ಥಟ್ ಅಂತ ಅರ್ಧ ಗಂಟೆಲಿ ಮಾಡಿಬಿಡಬಹುದು.

[ 3.5 of 5 - 39 Users]
X
Desktop Bottom Promotion