Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಬಾಯಲ್ಲಿ ನೀರೂರಿಸುವ ಚಾಕೋಲೆಟ್ ಪ್ಯಾನ್ಕೇಕ್ ರೆಸಿಪಿ
ಚಾಕೋಲೆಟ್ ಪ್ರಿಯರು ನಿತ್ಯ ಅಂಗಡಿಗಳಲ್ಲಿ ಸಿಗುವ ಚಾಕೋಲೆಟ್ ತಿಂದು, ಭಿನ್ನ ರುಚಿ ಬೇಕು ಎನಿಸುತ್ತಿದೆಯೇ?, ಲಾಕ್ಡೌನ್ ವೇಳೆ ಮನೆಯಲ್ಲಿ ವಿಭಿನ್ನವಾದ ಇಷ್ಟದ ತಿನಿಸು ಮಾಡುವ ಆಲೋಚನೆ ಇದೆಯೇ? ಸುಲಭವಾಗಿ ತಯಾರಿಸಬಹುದಾದ, ಮನೆಯವರಿಗೆಲ್ಲಾ ಇಷ್ಟವಾಗುವ ಚಾಕೋಲೆಟ್ ಪ್ಯಾನ್ಕೇಕ್ ತಯಾರಿಸಿ ನೋಡಿ.

ಮನೆಯಲ್ಲೇ ಇರುವ ವಸ್ತುಗಳಿಂದ, ಓವನ್ ಸಹ ಇಲ್ಲದೆ ಈ ಚಾಕೋಲೆಟ್ ಪ್ಯಾನ್ಕೇಕ್ ಅನ್ನು ತಯಾರಿಸಬಹುದು. ಇದನ್ನು ನೀವು ಐಸ್ಕ್ರೀಮ್, ಚಾಕೋಲೆಟ್, ವೆನಿಲ್ಲಾ ಸಾಸ್, ಚಾಕೊಲೇಟ್ ಚಿಪ್ಸ್ ಅಥವಾ ಕ್ಯಾರಮೆಲ್ ಸಾಸ್ನೊಂದಿಗೆ ತಿನ್ನಲು ತುಂಬಾ ಟೇಸ್ಟಿ ಆಗಿರುತ್ತದೆ. ಇನ್ನೇಕೆ ತಡ ಮಾಡುವ ವಿಧಾನವನ್ನು ಇಲ್ಲಿ ತೋರಿಸಿಲಿದ್ದೇವೆ, ಇಂದೇ ಮಾಡಿ ಹೇಗಿತ್ತು ಎಂದು ಕಮೆಂಟ್ ಬಾಕ್ಸ್ನಲ್ಲಿ ಶೇರ್ ಮಾಡಿ.
Recipe By: Meghashree
Recipe Type: Snacks
Serves: 4
-
ಬೇಕಾಗುವ ವಸ್ತುಗಳು
1 ಕಪ್ ಮೈದಾ ಹಿಟ್ಟು
100 ಗ್ರಾಂ ಸಕ್ಕರೆ ಪುಡಿ
2 ಮೊಟ್ಟೆಯ ಬಿಳಿಭಾಗ
1/2 ಚಮಚ ಬೇಕಿಂಗ್ ಪೌಡರ್
1 ಚಮಚ ವೆನಿಲ್ಲಾ ಎಸೆನ್ಸ್
1/2 ಕಪ್ ಕೋಕೋ ಪೌಡರ್
2 ಸ್ಕೂಪ್ ವಿಪ್ಡ್ ಕ್ರೀಮ್
50 ಮಿಲಿ ತುಪ್ಪ
-
ತಯಾರಿಸುವ ವಿಧಾನ
* ಮೊದಲು ಒಂದು ಬಟ್ಟಲಿಗೆ ಮೈದಾ ಹಿಟ್ಟು, ಸಕ್ಕರೆ ಪುಡಿ, ಕೋಕೋ ಪೌಡರ್, ವೆನಿಲ್ಲಾ ಎಸೆನ್ಸ್, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಎಗ್ ವೈಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬ್ಯಾಟರ್ ತಯಾರಿಸಿ.
* ಐದು ನಿಮಿಷಗಳ ಕಾಲ ಹಾಗೆ ಬಿಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ.
* ಒಂದು ಚಮಚ ಬ್ಯಾಟರ್ ಹಾಕಿ ಮತ್ತು ಅದನ್ನು ಬೇಯಲು ಬಿಡಿ. ಎರಡೂ ಬದಿಯಲ್ಲೂ ತಿರುಗಿಸಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
* ಎರಡೂ ಕಡೆಯಿಂದ ಬೇಯಿಸಿದ ನಂತರ ಅದನ್ನು ತಟ್ಟೆಯಲ್ಲಿ ಹಾಕಿ ಅದಕ್ಕೆ ವಿಪ್ಡ್ ಕ್ರೀಮ್ ಹಾಕಿ ಅಲಂಕರಿಸಿ.
- ಮಕ್ಕಳಿಗೆ ಇಷ್ಟವಾಗುವ ಸಂಜೆಯ ಸ್ನಾಕ್ಸ್ ಕೇಕ್ ಜತೆಗೆ ಹಾಲಿನ ಕೆನೆ, ಕ್ಯಾರಮೆಲ್ ಸಾಸ್, ಚಾಕೋಲೆಟ್ ಸಾಸ್ ಅಥವಾ ಹಣ್ಣುಗಳಿಂದಲೂ ಅಲಂಕರಿಸಿ ಸವಿಯಬಹುದು.
- 155 - g
- 13 - g
- 1.1 - g



Click it and Unblock the Notifications