Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಾಕೋಲೆಟ್ ಡೇ: ಹೋಂಮೇಡ್ ಚಾಕೋಲೆಟ್ ಮಾಡುವುದು ಹೇಗೆ?
ಫೆಬ್ರವರಿ 9ನ್ನು ಚಾಕೋಲೆಟ್ ಡೇಯೆಂದು ಆಚರಿಸಲಾಗುವುದು. ಈ ದಿನದ ವಿಶೇಷವಾಗಿ ಮಾತ್ರವಲ್ಲ ಯಾವುದೇ ದಿನವಾದರೂ ನೀವು ಚಾಕೋಲೆಟ್ ಸುಲಭವಾಗಿ ಮಾಡಬಹುದು, ಇನ್ನು ಮನೆಯಲ್ಲಿ ಮಕ್ಕಳಿಗೆ ನೀವೇ ಚಾಕೋಲೆಟ್ ಮಾಡಿ ಕೊಡಬಹುದು, ಈ ಚಾಕೋಲೆಟ್ ಮಾಡುವ ವಿಧಾನ ಕೂಡ ಅಷ್ಟೇ ಸರಳವಾಗಿದೆ, ಇದಕ್ಕೆ ಬೇಕಿದ್ದರೆ ನೀವು ನಟ್ಸ್ ಸೇರಿಸಬಹುದು, ಮೋಲ್ಡ್ಗೆ ಸುರಿಯುವಾಗ ರೋಸ್ಟ್ ಮಾಡಿದ ನಟ್ಸ್ ಇಟ್ಟು ಸುರಿಯಿರಿ.
ಹೋಂ ಮೇಡ್ ಚಾಕೋಲೆಟ್ ಮಾಡುವುದು ಹೇಗೆ ಎಂದು ನೋಡೋಣ:

ಹೋಂಮೇಡ್ ಚಾಕೋಲೆಟ್ಗೆ ಬೇಕಾಗುವ ಸಾಮಗ್ರಿ
ಬೆಣ್ಣೆ: ತಾಜಾ ಬೆಣ್ಣೆ ಬಳಸಿ, ಮನೆಯಲ್ಲಿಯೇ ಮಾಡಿದ ಬೆಣ್ಣೆಯಾದರೆ ಇನ್ನೂ
ಒಳ್ಳೆಯದು
ಹಾಲಿನ ಪುಡಿ: ನೀವು ಯಾವುದೇ ಹಾಲಿನ ಪುಡಿ ಬಳಸಬಹುದು
ಸಕ್ಕರೆ: ಇದನ್ನು ನುಣ್ಣನೆ ಪುಡಿ ಮಾಡಿರಬೇಕು
ಕೋಕಾ ಪುಡಿ: ಒಳ್ಳೆಯ ಗುಣಮಟ್ಟದ ಕೋಕಾಪುಡಿ ಬಳಸಿ
ಇತರ ಸಲಹೆ
ನೀವು ಬದಲಿಗೆ ಎಣ್ಣೆ ಬಳಸಿದರೆ ಅಷ್ಟು ರುಚಿ ಅನಿಸುವುದಿಲ್ಲ
ತುಪ್ಪ: ತುಪ್ಪದ ಫ್ಲೇವರ್ ತುಂಬಾ ದಿನ ಇಡುವಾಗ ಭಿನ್ನವಾಗಿರುತ್ತದೆ
ಹಾಗಾಗಿ ನೀವು ಬೆಣ್ಣೆಯನ್ನೇ ಬಳಸಿ
ಚಾಕೋಲೆಟ್ ಮಾಡುವ ಸ್ಟೆಪ್ ಬೈ ಸ್ಟೆಪ್ ವಿಧಾನ:
- ಒಂದು ಬೌಲ್ಗೆ 3 ಚಮಚ ಸಕ್ಕರೆ ಪುಡಿ, 2 ಚಮಚ ಕೋಕಾ ಪುಡಿ, 1 ಚಮಚ ಹಾಲಿನ ಪುಡಿ ಹಾಕಿ ಸೋಸಿ, ಆವಾಗ ನಿಮಗೆ ಇನ್ನೂ ನುಣ್ಣನೆಯ ಪುಡಿ ಸಿಗಲಿದೆ
- ನಂತರ ಇವುಗಳನ್ನು ಸ್ಪೂನ್ನಲ್ಲಿ ಮಿಕ್ಸ್ ಮಾಡಿ ಬದಿಯಲ್ಲಿ ಇಡಿ.
- ಚಿಕ್ಕ ಪ್ಯಾನ್ನಲ್ಲಿ ಒಂದು ಲೋಟ ನೀರು ಹಾಕಿ ಕುದಿಸಿ
- ಈಗ ಒಂದು ಬೌಲ್ ನೀರಿನ ಮೇಲಿಡಿ
- ಆದರೆ ನೀರಿನೊಳಗಡೆ ಬೌಲ್ ಮುಳುಗುವಂತೆ ಇರಬಾರದು
- ಈಗ ಆ ಬೌಲ್ಗೆ 1/4 ಕಪ್ ಬೆಣ್ಣೆ ಹಾಕಿ
- ಅದು ಕರಗುವವರೆಗೆ ಬಿಡಿ
- ಬೆಣ್ಣೆ ಕರಗಿದ ಮೇಲೆ ನೀವು ಸೋಸಿ ಮಿಕ್ಸ್ ಮಾಡಿಟ್ಟ ಪುಡಿ ಹಾಕಿ
- ಮಿಶ್ರಣ ಹಾಕಿದಾಗ ಗಂಟು ಕಟ್ಟದಿರಲು ಮಿಕ್ಸ್ ಮಾಡುತ್ತಲೇ ಇರಿ
- (ಸಲಹೆ: ನೀವು ಎಲ್ಲಾ ಮಿಶ್ರಣ ಒಟ್ಟಿಗೆ ಸುರಿಯಬೇಡಿ, ಮೊದಲಿಗೆಅರ್ಧದಷ್ಟು ಮಿಶ್ರಣ ಮೆಲ್ಲನೆ ಸುರಿದು ಮಿಕ್ಸ್ ಮಾಡಿ, ನಂತರ ಬಾಕಿಯುಳಿದ ಮಿಶ್ರಣ ಸೇರಿಸಿ)
- ಮಿಶ್ರಣ ತುಂಬಾ ಚೆನ್ನಾಗಿ ಮಿಕ್ಸ್ ಆಗಬೇಕು.
- ಅದಕ್ಕೆ ಅರ್ಧ ಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ
- ನಂತರ ಪಟ್ ಅಂತ ಮಿಕ್ಸ್ ಮಾಡಿ
- ಸ್ಟೌವ್ ಆಫ್ ಮಾಡಿ
- ನಂತರ ಚಾಕೋಲೆಟ್ ಮೋಲ್ಡ್ ಹಾಕಿಗೆ, ಹಾರ್ಟ್ ಶೇಪ್ನ ಚಾಕೋಲೆಟ್ಗೆ ಸುರಿದರೆ ಇನ್ನೂ ಒಳ್ಳೆಯದು, ಇಷ್ಟು ಮಾಡಿದರೆ ಹೋಂ ಮೇಡ್ ಚಾಕೋಲೆಟ್ ರೆಡಿ.
ಈ ಚಾಕೋಲೆಟ್ ನೀವು ಮಾಡಿದರೆ ತಿಂಗಳವರೆಗೆ ಇಟ್ಟರೂ ಹಾಳಾಗವುದಿಲ್ಲ, ಅಲ್ಲದೆ ಇದನ್ನು ನೀವು ಭಿನ್ನ ಶೇಪ್ನಲ್ಲಿಯೂ ಮಾಡಬಹುದು. ಇದರ ಮೇಲೆ ಬೇಕಿದ್ದರೆ ಕ್ರೀಮ್ ಕೂಡ ಸೇರಿಸಬಹುದು.



Click it and Unblock the Notifications
