Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೆಸಿಪಿ: ನಿಮ್ಮ ಪ್ರೀತಿಯನ್ನು ಸೆಲೆಬ್ರೇಟ್ ಮಾಡಲು ಚಾಕೋಲೆಟ್ ಕೇಕ್
ಫೆಬ್ರವರಿ 9ಕ್ಕೆ ಚಾಕೋಲೆಟ್ ಡೇ, ಫೆಬ್ರವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ... ಸ್ಪೆಷಲ್ ದಿನಕ್ಕೆ ನಾವಿಲ್ಲಿ ಚಾಕೋಲೆಟ್ ಕೇಕ್ ರೆಸಿಪಿ ನೀಡಿದ್ದೇವೆ, ಅಲ್ಲದೆ ಕೇಕ್ ಅನ್ನು ಯಾವ ರೀತಿ ಡೆಕೋರೇಟ್ ಮಾಡಬೇಕು ಎಂಬುವುದಕ್ಕೆ AI ಕೇಕ್ ಡಿಸೈನ್ಗಳನ್ನು ನೀಡಿದ್ದೇವೆ.
ಇದನ್ನು ವ್ಯಾಲೆಂಟೈನ್ ದಿನದಂದು ಮಾತ್ರವಲ್ಲ ವೆಡ್ಡಿಂಗ್ ಆ್ಯನಿವರ್ಸರಿ, ಎಂಗೇಜ್ಮೆಂಟ್ ಹೀಗೆ ವಿಶೇಷ ಸಮಯದಲ್ಲಿ ಈ ರೀತಿ ಕೇಕ್ ಮಾಡಿ ಸಂಭ್ರಮಿಸಬಹುದು ನೋಡಿ:

ಬೇಕಾಗುವ ಸಾಮಗ್ರಿ
3/4 ಕಪ್ + 2 ಚಮಚ ಮೈದಾ
1/4 ಕಪ್ + 2 ಚಮಚ ಕೋಕಾ ಪೌಡರ್
1/2 ಚಮಚ ಉಪ್ಪು
3/4 ಚಮಚ ಬೇಕಿಂಗ್ ಪೌಡರ್
3/4 ಅಡುಗೆ ಸೋಡಾ
1 ಚಮಚ ಸಕ್ಕರೆ
ಕಲೆಸಲು
1 ಮೊಟ್ಟೆ
1/2 ಕಪ್ ಹಾಲು
1/2 ಕಪ್ ಎಣ್ಣೆ (4 ಚಮಚ) (ತೆಂಗಿನೆಣ್ಣೆ, ಅಡುಗೆಯೆಣ್ಣೆ ಯಾವುದು ಬೇಕಾದರೂ
ಬಳಸಬಹುದು)
1-2 ಚಮಚ ವೆನಿಲ್ಲಾ ಎಕ್ಸ್ಟ್ರಾಕ್ಟ್ ಅಥವಾ ಪೌಡರ್
1/2 ಕಪ್ ತುಂಬಾ ಬಿಸಿ ನೀರು
ಚಾಕೋಲೆಟ್ ಬಟರ್ಕ್ರೀಮ್ ಫ್ರೋಸ್ಟಿಂಗ್
1/2 ಕಪ್ ಬೆಣ್ಣೆ ಅನ್ಸಾಲ್ಟಡ್
12/4 ಕಪ್ ಸಕ್ಕರೆ ಪುಡಿ
4 ಚಮಚ ಕೋಕಾಪುಡಿ
11/2 ಚಮಚ ಹಾಲು
1 ಚಮಚ ವೆನಿಲ್ಲಾ ಎಕ್ಸ್ಟ್ರಾಕ್ಟ್

ಮಾಡುವ ವಿಧಾನ
ಒಂದು ದೊಡ್ಡ ಬೌಲ್ಗೆ ಮೊಟ್ಟೆ, ಎಣ್ಣೆ, ವೆನಿಲ್ಲಾ ಎಕ್ಸ್ಟ್ರಾಕ್ಟ್, ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಅದಕ್ಕೆ ಮೈದಾ ಪುಡಿ, ಕೋಕಾ ಪುಡಿ, ಉಪ್ಪು, ಬೇಕಿಂಗ್ ಪುಡಿ, ಬೇಕಿಂಗ್ ಸೋಡಾ, ಸಕ್ಕರೆ ಹಾಕಿ ನಂತರ ಗಂಟು ಆಗದಂತೆ ಕಲೆಸಿ.
ಬಿಸಿ ನೀರನ್ನು ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಕಲೆಸಿ.
* ನಂತರ ಕೇಕ್ ಪ್ಯಾನ್ ಬೆಣ್ಣೆ ಅಥವಾ ಎಣ್ಣೆ ಸವರಿ ಅದರಲ್ಲಿ ಕೇಕ್ ಹಿಟ್ಟನ್ನು ಸರಿಯಿರಿ. ನಂತರ ಟೈಮಿಂಗ್ ಅಡ್ಜೆಸ್ಟ್ ಮಾಡಿ ಓವನ್ನಲ್ಲಿ ಬೇಯಿಸಿ.
ಚಾಕೋಲೆಟ್ ಬಟರ್ಕ್ರೀಮ್ ಫ್ರೋಸ್ಟಿಂಗ್
ಬೆಣ್ಣೆ ಮೃದುವಾಗಿರಬೇಕು, ಆದರೆ ತಣ್ಣಗೆ ಇರಬೇಕು, ಅದನ್ನು 2 ನಿಮಿಷ ಚೆನ್ನಾಗಿ ಕದಡಿ, ನಂತರ ಹಾಲನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಚೆನ್ನಾಗಿ ಕದಿಡಿ, ನಂತರ ಹಾಲು ಸೇರಿಸಿ, ಫ್ರೋಸ್ಟಿಂಗ್ ತುಂಬಾ ಗಟ್ಟಿಯಾಗಿರಬಾರದು, ನೀರು- ನೀರಾಗಿಯೂ ಇರಬಾರದು, ನೀರು-ನೀರಾಗಿದ್ದರೆ ಮತ್ತಷ್ಟು ಶುಗರ್ ಪೌಡರ್ ಸೇರಿಸಿ. ನಂತರ ಫ್ರೋಸ್ಟಿಂಗ್ ಅನ್ನು ಕೇಕ್ ಹರಡಿ. ನಂತರ3-4 ಗಂಟೆ ಫ್ರೀಡ್ಜ್ನಲ್ಲಿಟ್ಟು ನಂತರ ಕತ್ತರಿಸಿ.
ಚಾಕೋಲೆಟ್ ಕೇಕ್ ಅನ್ನು ನಂತರ ನಿಮಗೆ ಬೇಕಾದ ರೀತಿಯಲ್ಲಿ ಡೆಕೋರೇಟ್ ಮಾಡಿ. ಹಾರ್ಟ್ ಸಿಂಬಲ್, ಲವ್ ಯೂ ಹೀಗೆ ನೀವು ಬಯಸಿದಂತೆ ಡೆಕೋರೇಟ್ ಮಾಡಿ.


ಮನೆಯಲ್ಲಿಯೇ ಚಾಕೋಲೆಟ್ ಕೇಕ್ ಮಾಡಿದರೆ ಸ್ಪೆಷಲ್ ಅನಿಸುವುದು
ನಾವು ನಮ್ಮ ಪ್ರೀತಿ ಪಾತ್ರರಿಗೆ ನಾವೇ ಕೇಕ್ ಮಾಡಿದರೆ ಕೇಕ್ ಶಾಪ್ನಿಂದ ಕೇಕ್ಗಿಂತ ತುಂಬಾನೇ ಸ್ಪೆಷಲ್ ಅನಿಸುವುದು,ಆದ್ದರಿಂದ ಕೇಕ್ ಅನ್ನು ನೀವೇ ತಯಾರಿಸಿ.
ನೀವು ಕೇಕ್ ಜೊತೆಗೆ ಕೆಲವು ಗಿಫ್ಟ್ಸ್ ಕೂಡ ನೀಡಬಹುದು, ಕೆಲವೊಂದು ಪ್ರೇಮಮಯ ಲೆಟರ್ ಬರೆದು ಅವರಿಗೆ ನೀಡಬಹುದು, ನಿಮ್ಮ ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದರಿಂದ ಇ ದಿನ ತುಂಬಾನೇ ಸ್ಪೆಷಲ್ ಆಗಿರುತ್ತದೆ.
ಎಲ್ಲಾ ಪ್ರೇಮಿಗಳಿಗೂ ಪ್ರೇಮ ದಿನದ ಶುಭಾಶಯಗಳು... ಪ್ರೀತಿಸುವಾಗ ಒಳ್ಳೆಯ ಮನಸ್ಸು ನೋಡಿಯಷ್ಟೇ ಪ್ರೀತಿಸಿ, ಪ್ರೀತಿಯ ನಾಟಕ ಆಡುವವರನ್ನು ಹತ್ತಿರವೂ ಬಿಡಬೇಡಿ.... ನಿಮ್ಮ ಪ್ರೀತಿ ನಿಮಗೆ ಒಳ್ಳೆಯ ಜೀವನ ನೀಡಲಿ, ನೀವಿಬ್ಬರು ಖುಷಿಯಾಗಿ ಬಾಳುವಂತಾಗಲಿ.



Click it and Unblock the Notifications
