Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಬಂಗಾಳಿ ಶೈಲಿಯ ರುಚಿಕರ ಖಾದ್ಯ ಚಿಂಗಾರಿ ಮಚರ್ ಮಲೈ ರೆಸಿಪಿ
ಸಮುದ್ರದ ಆಹಾರಗಳನ್ನು ಇಷ್ಟಪಡುವವರು ತಾಜಾ ಮೀನುಗಳ ರುಚಿಗೇ ಮೀಸಲಾಗದೇ ಒಣ ಮೀನುಗಳನ್ನು ಸಹ ವಿಭಿನ್ನ ಖಾದ್ಯ ಶೈಲಿಯಲ್ಲಿ ತಯಾರಿಸಿ ಸೇವಿಸುತ್ತಾರೆ. ಯಾವಾಗಲೂ ಮೀನುಗಳು ತಾಜಾ ಸಿಗುವುದಿಲ್ಲ ಎಂದು ಸೀಗಡಿ ಮೀನು ಅಥವಾ ಒಣ ಮೀನುಗಳನ್ನು ಇಟ್ಟಿರುತ್ತಾರೆ.

ಈ ಒಣ ಮೀನುಗಳಿಂದ ವಿಭಿನ್ನ ಶೈಲಿಯ ಖಾದ್ಯಗಳನ್ನು ತಯಾರಿಸಬಹುದು, ನಿಮಗೂ ನಿಮ್ಮದೇ ಶೈಲಿಯ ರೆಸಿಪಿಗಳು ಗೊತ್ತಿರುತ್ತದೆ. ನಾವಿಂದು ವಿಶೇಷವಾಗಿ ಬಂಗಾಳಿ ಶೈಲಿಯ ಒಣ ಮೀನಿನ ಖಾದ್ಯ "ಚಿಂಗಾರಿ ಮಚರ್ ಮಲೈ" ಅನ್ನು ಹೇಗೆ ತಯಾರಿಬೇಕು ಎಂದು ತಿಳಿಸಿಕೊಡಲಿದ್ದೇವೆ:
ಬಂಗಾಳದಲ್ಲಿ ಬಹಳ ಜನಪ್ರಿಯವಾದ ಈ ಖಾದ್ಯವನ್ನು ತೆಂಗಿನಕಾಯಿ ಹಾಲಿನಿಂದ ಕೂಡ ಮಾಡಬಹುದು. ನಿಮ್ಮ ಬಾಯಿಯಲ್ಲಿ ನೀರೂರಿಸುವ, ತಿಂದ ನಂತರ ಮತ್ತೆ ಮತ್ತೆ ತಿನ್ನಲು ಇಷ್ಟಪಡುವ ಖಾದ್ಯ ಇದಾಗಿದೆ. ಹೇಗೆ ಮಾಡಬೇಕೆಂದು ಮುಂದೆ ನೋಡಿ:
Recipe By: Boldsky
Recipe Type: curry
Serves: 4
-
ಬೇಕಾಗುವ ಪದಾರ್ಥಗಳು
* ಸಣ್ಣ ಸೀಗಡಿಗಳು 300 ಗ್ರಾಂ
* ತೆಂಗಿನ ಹಾಲು - 1 ಕಪ್
* ಅರಿಶಿನ - 1/2 ಚಮಚ
* ಕೆಂಪುಮೆಣಸು ಪುಡಿ - 1 ಚಮಚ
* ಉಪ್ಪು - ರುಚಿಗೆ
* ಎಣ್ಣೆ - 2 1/2 ಚಮಚ
* ಕತ್ತರಿಸಿದ ಈರುಳ್ಳಿ - 2 ಮಧ್ಯಮ ಗಾತ್ರದ
* ಕತ್ತರಿಸಿದ ಬೆಳ್ಳುಳ್ಳಿ - 1 ಚಮಚ
* ಗೋಡಂಬಿ ಪೇಸ್ಟ್ - 2 ಚಮಚ
* ಹಸಿರು ಮೆಣಸಿನಕಾಯಿ - 2
-
ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಚೆನ್ನಾಗಿ ತೊಳೆದ ಸೀಗಡಿಗಳನ್ನು ತೆಗೆದುಕೊಳ್ಳಿ.
ಸೀಗಡಿಗೆ ಅರಿಶಿನ, ಕೆಂಪುಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಮ್ಯಾರಿನೇಟ್ ಮಾಡಿ ಪಕ್ಕಕ್ಕೆ ಇಡಿ
ಬಾಣಲೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿ. ನಂತರ ಮ್ಯಾರಿನೇಟ್ ಮಾಡಿದ ಸೀಗಡಿಗಳನ್ನು ಸೇರಿಸಿ ಮತ್ತು 2-3 ನಿಮಿಷ ಬೇಯಿಸಿ. ನಂತರ ಅದನ್ನು ಒಂದು ತಟ್ಟೆಯಲ್ಲಿ ಇಡಿ.
ಮತ್ತೆ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಗುಲಾಬಿ ಬಣ್ಣಕ್ಕೆ ತಿರುಗಲು ಬಿಡಿ. ನಂತರ ಬೆಳ್ಳುಳ್ಳಿ ಸೇರಿಸಿ ಬೇಯಿಸಿ.
ಮಿಕ್ಸಿ ಜಾರ್ಗೆ ಬಿಸಿ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಗೋಡಂಬಿ ಪೇಸ್ಟ್ ಹಾಕಿ ಮಿಕ್ಸಿ ಮಾಡಿ.
ಇದನ್ನು ಬಾಣಲೆಯಲ್ಲಿ ಬಿಸಿ ಮಾಡಿ ಒಂದು ಕುದಿ ಬಂದ ನಂತರ ತೆಂಗಿನ ಹಾಲು ಸೇರಿಸಿ 2 ನಿಮಿಷ ಬೇಯಿಸಿ.
ನಂತರ ಹುರಿದ ಸೀಗಡಿ ಮತ್ತು ಸ್ವಲ್ಪ ನೀರನ್ನು ಹಾಕಿ ಮಿಶ್ರಣ ಮಾಡಿ.
ಅಂತಿಮವಾಗಿ ಉಪ್ಪು ಸೇರಿಸಿ 5 ನಿಮಿಷ ಬೇಯಿಸಿ.
ಈಗ ಬಿಸಿ ಬಿಸಿಯಾದ ಚಿಂಗಾರಿ ಮಚರ್ ಮಲೈ ಸವಿಯಲು ಸಿದ್ಧ.
- ಚಿಂಗಾರಿ ಮಚರ್ ಮಲೈ ಅನ್ನು ಜೀರಿಗೆ ರೈಸ್, ಘೀ ರೈಸ್, ಪರೋಟ, ಚಪಾತಿ ಜತೆ ಸವಿಯಲು ರುಚಿಯಾಗಿರುತ್ತದೆ.
- 100 - ಗ್ರಾಂ
- ಕ್ಯಾಲೋರಿ - 82
- ಕಾರ್ಬೋಹೈಡ್ರೇಟ್ - 0



Click it and Unblock the Notifications
