For Quick Alerts
ALLOW NOTIFICATIONS  
For Daily Alerts

'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Posted By: Jayasubramanya
|

ನಮ್ಮ ಬಾಯಿ ರುಚಿಯನ್ನು ತಣಿಸಲು ನಾವು ಹಲವಾರು ಖಾದ್ಯಗಳನ್ನು ಸಿದ್ಧಪಡಿಸುತ್ತೇವೆ. ಅದು ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ತಿನ್ನಲು ರುಚಿಕರವಾಗಿದ್ದರೆ ಮಾತ್ರವೇ ಅದು ಪ್ರತಿಯೊಬ್ಬರ ಮನವನ್ನು ಗೆಲ್ಲುತ್ತದೆ. ನೀವು ಮಾಂಸಾಹಾರವನ್ನು ತರಕಾರಿಗಳನ್ನು ಹಾಕಿ ಕೂಡ ತಯಾರಿಸಿ ಅದಕ್ಕೆ ವಿಭಿನ್ನ ರುಚಿಯನ್ನು ನೀಡಬಹುದು. ಹೌದು ಇಂದಿನ ಲೇಖನದಲ್ಲಿ ಬೋನ್‌ಲೆಸ್ ಚಿಕನ್ ಬಳಸಿಕೊಂಡು ಅದಕ್ಕೆ ತರಕಾರಿಗಳನ್ನು ಬಳಸಿ ವಿಭಿನ್ನವಾದ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

ಇಂಡೋ-ಚೈನೀಸ್ ಡಿಶ್ ಆಗಿರುವ ಇದು ತಾಜಾ ಮತ್ತು ಸವಿಯಲು ಮಜವಾಗಿದೆ. ಬೋನ್‌ಲೆಸ್ ಚಿಕನ್ ಇಲ್ಲದಿದ್ದ ಪಕ್ಷದಲ್ಲಿ ನೀವು ಬೋನ್ ಇರುವ ಚಿಕನ್‌ ಮೂಲಕ ಕೂಡ ಈ ರೆಸಿಪಿಯನ್ನು ಮಾಡಬಹುದಾಗಿದೆ. ಇದಕ್ಕೆ ಹಾಕುವ ಗರಂ ಮಸಾಲೆ ಮತ್ತು ತರಕಾರಿಗಳಿಂದ ಇವು ವಿಭಿನ್ನಾಗಿದೆ. ಹಾಗಿದ್ದರೆ ಬನ್ನಿ ಇದನ್ನು ತಯಾರಿಸುವ ವಿಧಾನವನ್ನು ಇಲ್ಲಿ ಕಲಿತುಕೊಳ್ಳೋಣ.

chilli chicken recipe
ಚಿಲ್ಲಿ ಚಿಕನ್ ರೆಸಿಪಿ| ಡ್ರೈ ಚಿಲ್ಲಿ ಚಿಕನ್ ರೆಸಿಪಿ ಮಾಡುವ ವಿಧಾನ | ಬೋನ್ ಲೆಸ್ ಚಿಲ್ಲಿ ಚಿಕನ್ ರೆಸಿಪಿ | ಡ್ರೈ ಚಿಲ್ಲಿ ಚಿಕನ್ ರೆಸಿಪಿ
ಚಿಲ್ಲಿ ಚಿಕನ್ ರೆಸಿಪಿ| ಡ್ರೈ ಚಿಲ್ಲಿ ಚಿಕನ್ ರೆಸಿಪಿ ಮಾಡುವ ವಿಧಾನ | ಬೋನ್ ಲೆಸ್ ಚಿಲ್ಲಿ ಚಿಕನ್ ರೆಸಿಪಿ | ಡ್ರೈ ಚಿಲ್ಲಿ ಚಿಕನ್ ರೆಸಿಪಿ
Prep Time
10 Mins
Cook Time
40M
Total Time
50 Mins

Recipe By: ಶೆಫ್ ಅನುರಾಗ್ ಬಸು

Recipe Type: ಸ್ನ್ಯಾಕ್ಸ್

Serves: 2

Ingredients
  • ಮೂಳೆರಹಿತ ಕೋಳಿಮಾಂಸ : 350 ಗ್ರಾಂ (ಚಿಕ್ಕ ಚೌಕಾಕಾರದಲ್ಲಿ ಕತ್ತರಿಸಿದ್ದು)

    ಮೊಟ್ಟೆ: 1 (ಗೊಟಾಯಿಸಿದ್ದು)

    ಶುಂಠಿ ಪೇಸ್ಟ್ : ½ ಚಿಕ್ಕಚಮಚ

    ಬೆಳ್ಳುಳ್ಳಿ ಪೇಸ್ಟ್ : ½ ಚಿಕ್ಕ ಚಮಚ

    ಎಣ್ಣೆ : ಹುರಿಯಲು ಅಗತ್ಯವಿರುವಷ್ಟು

    ಉಪ್ಪು ರುಚಿಗನುಸಾರ

    ಈರುಳ್ಳಿ : ಎರಡು ಕಪ್ (ದಪ್ಪನಾಗಿ ಹೆಚ್ಚಿದ್ದು)

    ಸೋಯಾ ಸಾಸ್ : ಒಂದು ದೊಡ್ಡ ಚಮಚ

    ಹಸಿಮೆಣಸು : ಎರಡು : ಮೊದಲು ನಡುವೆ ಸೀಳಿ ಬೀಜಗಳನ್ನೆಲ್ಲಾ ನಿವಾರಿಸಿ ದೊಡ್ಡದಾಗಿ ತುಂಡುಮಾಡಿ.

    ಶಿರ್ಕಾ: ಎರಡು ದೊಡ್ಡಚಮಚ

    ನೀರು: ಅಗತ್ಯಕ್ಕೆ ತಕ್ಕಷ್ಟು

Red Rice Kanda Poha
How to Prepare
  • 1. ಚಿಕನ್, ಮೊಟ್ಟೆ, ಕೋರ್ನ್ ಫ್ಲೋರ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಬೌಲ್‌ನಲ್ಲಿ ಕಲಸಿಕೊಳ್ಳಿ.

    2. ಈಗ, 2 ಚಮಚ ಉಪ್ಪು, ನೀರನ್ನು ಬಳಸಿಕೊಂಡು ಚಿಕನ್‌ ಅನ್ನು ಮಸಾಲೆಯೊಂದಿಗೆ ಕಲಸಿ

    3. 30 ನಿಮಿಷ ಹಾಗೆಯೇ ಬಿಡಿ.

    4. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ.

    5.ಈಗ ಚಿಕನ್ ತುಂಡುಗಳನ್ನು ಹುರಿದುಕೊಳ್ಳಿ ಮತ್ತು ಸುವಾಸನೆ ಬರಲಿ

    6. ಚಿಕನ್ ಚೆನ್ನಾಗಿ ಬೇಯುವವರೆಗೆ ಇದನ್ನು ಬೇಯಿಸಿಕೊಳ್ಳಿ

    7. ಎಣ್ಣೆ ಹೀರುವ ಪೇಪರ್‌ನ ಮೇಲೆ ಕರಿದ ಚಿಕನ್ ಅನ್ನು ಇರಿಸಿಕೊಳ್ಳಿ ಹೀಗೆ ಮಾಡುವುದರಿಂದ ಹೆಚ್ಚುವರಿ ಎಣ್ಣೆ ನಿವಾರಣೆಯಾಗುತ್ತದೆ

    8. ವೋಕ್‌ನಲ್ಲಿ 2 ಚಮಚ ಎಣ್ಣೆ ತೆಗೆದುಕೊಳ್ಳಿ

    9. ಈರುಳ್ಳಿಯನ್ನು ಎಣ್ಣೆಗೆ ಹಾಕಿ ಕರಿದುಕೊಳ್ಳಿ

    10. ಹಸಿಮೆಣಸು ಮಿಶ್ರ ಮಾಡಿ

    11. ಉಪ್ಪು, ಸೋಯ ಸಾಸ್, ವಿನೇಗರ್ ಮತ್ತು ಕರಿದ ಚಿಕನ್ ಅನ್ನು ಸೇರಿಸಿ

    12. ಬಿಸಿಯಾಗಿ ಬಡಿಸಿ ಮತ್ತು ಹಸಿಮೆಣಸಿನ ಅಲಂಕಾರ ಮಾಡಿ

Instructions
  • 1. ಬೋನ್‌ನೊಂದಿಗೆ ಚಿಲ್ಲಿ ಚಿಕನ್ ಅನ್ನು ನೀವು ತಯಾರಿಸಬಹುದು.
  • 2. ಗ್ರೇವಿಯೊಂದಿಗೆ ಕೂಡ ಚಿಲ್ಲಿ ಚಿಕನ್ ಅನ್ನು ತಯಾರಿಸಬಹುದು.
Nutritional Information
  • ಬಡಿಸುವ ಗಾತ್ರ - 1 ಕಪ್
  • ಕ್ಯಾಲೋರಿ - 277 ಕ್ಯಾಲೊ
  • ಕೊಬ್ಬು - 21 ಗ್ರಾಂ
  • ಕಾರ್ಬೊಹೈಡ್ರೇಟ್ಸ್ - 21 ಗ್ರಾಂ
  • ಸಕ್ಕರೆ - 4.4 ಗ್ರಾಂ
  • ಡಯೆಟರಿ ಫೈಬರ್ - 2.8 ಗ್ರಾಂ
[ 4 of 5 - 55 Users]
X
Desktop Bottom Promotion