Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ತುಂಬಾ ಸರಳವಾಗಿದೆ ಚಿಲ್ಲಿ ಚಿಕನ್ ರೆಸಿಪಿ
ಬಿಸಿ-ಬಿಸಿ ಅನ್ನ ಅಥವಾ ಘೀರೈಸ್ ಜೊತೆ ಚಿಲ್ಲಿ ಚಿಕನ್ ಸವಿಯಲು ತುಂಬಾ ಸೂಪರ್ ಆಗಿರುತ್ತೆ ಅಲ್ವಾ? ಈ ಚಿಲ್ಲಿ ಚಿಕನ್ ಇತರ ಚಿಕನ್ ಸಾರಿನಂತೆಯೇ ಸುಲಭವಾಗಿ ತಯಾರಿಸಬಹುದು. ಅಲ್ಲದೆ ಇದಕ್ಕೆ ಸೋಯಾ ಸಾಸ್, ಟೊಮೆಟೊ ಪೇಸ್ಟ್ ಅಲ್ಲದೆ ಬೇಕಿದ್ದರೆ ಸ್ವಲ್ಪ ವಿನೆಗರ್ ಇದ್ದರೆ ಉಳಿದ ಸಾಮಗ್ರಿಗಳು ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದು.

ಬನ್ನಿ ಚಿಲ್ಲಿ ಚಿಕನ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Curry
Serves: 4
-
ಬೇಕಾಗುವ ಸಾಮಗ್ರಿ
2 ಚಿಕನ್ ಬ್ರೆಸ್ಸ್ ಪೀಸ್
1 ಚಮಚ ಉಪ್ಪು
1/2 ಚಮಚ ಕಾಳುಮೆಣಸು
1 ಮೊಟ್ಟೆ ( ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಕದಡಬೇಕು)
3/4 ಕಪ್ ಜೋಳದ ಹಿಟ್ಟು (100ಗ್ರಾಂ)
1 ಕೆಂಪು ದುಂಡು ಮೆಣಸಿನಕಾಯಿ (ಕತ್ತರಿಸಿದ್ದು)
ಈರುಳ್ಳಿ 1 (ದೊಡ್ಡದಾಗಿ ಕತ್ತರಿಸಿದ್ದು)
ಚಿಲ್ಲಿ ಸಾಸ್‌ಗೆ ಸಾಮಗ್ರಿ
3 ಜಜ್ಜಿದ ಬೆಳ್ಳುಳ್ಳಿ
1 ಕೆಂಪು ಮೆಣಸು (ಚಿಕ್ಕದಾಗಿ ಕತ್ತರಿಸಿದ್ದು)
3 ಚಮಚ ಸೋಯಾ ಸಾಸ್
2 ಚಮಚ ಟೊಮೆಟೊ ಸಾಸ್
1/2 ಕಪ್ ನೀರು
-
ಮಾಡುವ ವಿಧಾನ:
* ಚಿಕನ್‌ಗೆ ತೊಳೆದು ಅದನ್ನು ಉದ್ದುದ್ದವಾಗಿ ಕತ್ತರಿಸಿ, ಅದರ ಮೇಲೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಉದುರಿಸಿ ಮಿಕ್ಸ್ ಮಾಡಿ.
* ಈಗ ತವಾವನ್ನು ಬಿಸಿ ಮಾಡಲು ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ, ಚಿಕನ್ ತುಂಡುಗಳನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಜೋಳದ ಹಿಟ್ಟಿನಲ್ಲಿ ಒಮ್ಮೆ ಹೊರಳಾಡಿಸಿ ತವಾಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಿ.
* ಚಿಕನ್ ಸ್ವಲ್ಪ ರೋಸ್ಟ್ ಆದ ಬಳಿಕ ಅದಕ್ಕೆ ಉದ್ದುದ್ದವಾಗಿ ಕತ್ತರಿಸಿದ ಕೆಂಪು ಹಾಗೂ ಹಸಿರು ದುಂಡು ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ ಚಿಕನ್ ಬೆಂದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ತೆಗದಿಡಿ.
* ಈಗ ಅದೇ ಪ್ಯಾನ್‌ಗೆ ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸು, ಸೋಯಾ ಸಾಸ್, ಟೊಮೆಟೊ ಸಾಸ್ ಅಥವಾ ಪೇಸ್ಟ್ ಹಾಗೂ ನೀರು ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಸ್ವಲ್ಪ ಉಪ್ಪು ಸೇರಿಸಿ ಕುದಿಸಿ.
* ಈಗ ಮಿಶ್ರಣ ದಪ್ಪ ಗ್ರೇವಿಯಾದಗ ಫ್ರೈ ಮಾಡಿಟ್ಟ ಚಿಕನ್ ಹಾಗೂ ದುಂಡು ಮೆಣಸಿನಕಾಯಿ ಫ್ರೈ ಹಾಕಿ ಮಿಕ್ಸ್ ಮಾಡಿದರೆ ಚಿಲ್ಲಿ ಚಿಕನ್ ಸರ್ವ್ ಮಾಡಲು ರೆಡಿ.
- ಚಿಲ್ಲಿ ಚಿಕನ್ ಅನ್ನು ತವಾದಲ್ಲಿ ಫ್ರೈ ಮಾಡಬಹುದು ಅಥವಾ ಡೀಪ್ ಫ್ರೈ ಮಾಡಬಹುದು. ಆದರೆ ತವಾದಲ್ಲಿ ಮಾಡಿದರೆ ಎಣ್ಣೆ ಸ್ವಲ್ಪ ಸಾಕು, ರೋಸ್ಟ್ ಆಗಿರುವುದರಿಂದ ರುಚಿಯೂ ಹೆಚ್ಚು.
- ಸರ್ವ್ - 1/2 ಕೆಜಿ
- ಕ್ಯಾಲೋರಿ - 277ಕ್ಯಾ
- ಪ್ರೊಟೀನ್ - 21ಗ್ರಾಂ
- ಕಾರ್ಬ್ಸ್ - 21ಗ್ರಾಂ



Click it and Unblock the Notifications